ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ ವೈಟ್ ವಾಷ್ ಮುಖಭಂಗ


ಮ್ಯಾಂಚೆಸ್ಟರ್, ಜೂ. 25: ಇಂಗ್ಲೆಂಡ್ ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಐದು ಪಂದ್ಯಗಳ ಏಕದಿನ ಸರಣಿಯ 5ನೇ ಪಂದ್ಯದಲ್ಲೂ ಆತಿಥೇಯ ಇಂಗ್ಲೆಂಡ್, ಜಾಸ್ ಬಟ್ಲರ್ ಆಕರ್ಷಕ ಶತಕದ ನೆರವಿನೊಂದಿಗೆ 1 ವಿಕೆಟ್ ಜಯ ಗಳಿಸಿದೆ. ಇಲ್ಲಿಗೆ ಆಡಿದ ಐದೂ ಪಂದ್ಯಗಳಲ್ಲೂ ಸೋತು ಆಸ್ಟ್ರೇಲಿಯಾ ಸರಣಿ ವೈಟ್ ವಾಷ್ ಮುಖಭಂಗಕ್ಕೀಡಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ 34.4 ಓವರ್ ಗೆ ಎಲ್ಲಾ ವಿಕೆಟ್ ಕಳೆದು 205 ರನ್ ಪೇರಿಸಿತ್ತು. ಆಸ್ಟ್ರೇಲಿಯಾ ನೀಡಿದ್ದ 206 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್, 48.3 ಓವರ್ ಗಳಲ್ಲಿ 9 ವಿಕೆಟ್ ಕಳೆದು 208 ರನ್ ನೊಂದಿಗೆ ಗೆಲುವನ್ನಾಚರಿಸಿತು.
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 56 (42), ಅಲೆಕ್ಸ್ ಕ್ಯಾರಿ 44 (40) ಡಿ ಆರ್ಸಿ ಶಾರ್ಟ್ 47 (52) ರನ್ ಕೊಡುಗೆ ಮೂಲಕ ತಂಡದ ಮೊತ್ತ ಏರಿಸುವಲ್ಲಿ ನೆರವಾಗಿದ್ದು ಬಿಟ್ಟರೆ ಉಳಿದ ಯಾವ ಆಟಗಾರರೂ 25ರನ್ ಗೆರೆ ದಾಟಿಸಲಿಲ್ಲ. ಅದರಲ್ಲೂ ಮರ್ಕ್ಯೂಸ್ ಸ್ಟಾಯ್ನಿಸ್ ಮತ್ತು ಆಸ್ಟನ್ ಅಗರ್ ಸೊನ್ನೆ ಸುತ್ತಿದರು. ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಮೋಯೀನ್ ಆಲಿ ಆವರು 46 ರನ್ನಿಗೆ 4 ವಿಕೆಟ್ ಕಬಳಿಸಿ ಕಾಡಿದರು.
ಇಂಗ್ಲೆಂಡ್ ತಂಡದ ಗೆಲುವಿಗೆ ಕೊಸರಾಡಿದ್ದು ಬಟ್ಲರ್ ಒಬ್ಬರೆ. 122 ಎಸೆತಗಳನ್ನು ಎದುರಿಸಿದ ಬಟ್ಲರ್ ಅಜೇಯ 110 ರನ್ ಗಳಿಸಿದರು. ಬಟ್ಲರ್ ಬಿಟ್ಟರೆ ಅಲೆಕ್ಸ್ ಹೇಲ್ಸ್ (20/29), ಆದಿಲ್ ರಶೀದ್ (20/47) ಅವರದ್ದೇ ಗರಿಷ್ಠ ರನ್. ಅಮೋಘ ಆಟಕ್ಕಾಗಿ ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications