ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪತ್ರಕರ್ತನ ಪ್ರಶ್ನೆಗೆ ಕ್ಯಾಪ್ಟನ್ ಕೊಹ್ಲಿ ಗರಂ ಆಗಿದ್ದೇಕೆ?

England vs India 2018: Virat Kohli snaps at journalist after Oval loss

ಲಂಡನ್, ಸೆಪ್ಟೆಂಬರ್ 13: ಅತಿಥೇಯ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರಲ್ಲಿ ಅಂತರದಿಂದ ಕಳೆದುಕೊಂಡ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಸಿಟ್ಟಾಗಿ ಉತ್ತರಿಸಿದ ಪ್ರಸಂಗ ನಡೆದಿದೆ.

'ಇಂಗ್ಲೆಂಡ್​ನಿಂದ ತೆಗೆದುಕೊಂಡು ಹೋಗಲು ಏನು ಇಲ್ಲ. ಬದಲಾಗಿ ಉತ್ತಮ ಪ್ರಯಾಣ ಮಾಡಬಹುದು ಹಾಗೂ ಸ್ಪರ್ಧಿಸಿ ಜಯ ಸಾಧಿಸಬಹುದಷ್ಟೇ. ಮೂರು ವರ್ಷಗಳನ್ನು ನೀವು ಗಮನಿಸಿದರೆ, ವಿದೇಶಿ ನೆಲದಲ್ಲಿ ನಾವು 9 ಪಂದ್ಯಗಳನ್ನು ಹಾಗೂ ಮೂರು ಸರಣಿಗಳನ್ನು ಗೆದ್ದಿದ್ದೇವೆ. ಅಲ್ಪಾವಧಿಯಲ್ಲಿ ಇಂಥ ಸಾಧನೆಯನ್ನು 15-20 ವರ್ಷದ ಹಿಂದೆ ಇದ್ದ ತಂಡಗಳು ಮಾಡಿಲ್ಲ' ಎಂದು ಕೋಚ್​ ರವಿಶಾಸ್ತ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ತ್ವರಿಗತಿಯಲ್ಲಿ 18 ಸಾವಿರ ರನ್, ಲಾರಾ ದಾಖಲೆ ಮುರಿದ ಕೊಹ್ಲಿ ತ್ವರಿಗತಿಯಲ್ಲಿ 18 ಸಾವಿರ ರನ್, ಲಾರಾ ದಾಖಲೆ ಮುರಿದ ಕೊಹ್ಲಿ

ಐದನೇ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತದ ಅತ್ಯುತ್ತಮ ತಂಡ ಯಾವುದು? ಹಾಲಿ ತಂಡವನ್ನು ಉತ್ತಮ ತಂಡ ಎನ್ನಬಹುದಾ? ಇಂಥ ಪ್ರಶ್ನೆ ನಿಮಗೆ ನಿಮಗೆ ಒತ್ತಡ ತರುತ್ತದೆಯೇ? ಕಳೆದ 15 ವರ್ಷಗಳಲ್ಲಿ ಇದೆ ಉತ್ತಮ ತಂಡ ಎನ್ನಲಾಗಿದೆ ನಿಮ್ಮ ಅಭಿಪ್ರಾಯವೇನು? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ.

ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ! ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ!

ಇದಕ್ಕೆ ತಕ್ಷಣವೇ ಉತ್ತರಿಸಿದ ಕೊಹ್ಲಿ, ನಾವು ಅತ್ಯುತ್ತಮರು ಎಂದು ನಂಬಿದ್ದೇವೆ, ನಿಮ್ಮ ದೃಷ್ಟಿಯಲ್ಲಿ ಯಾವುದು ಉತ್ತಮ ತಂಡ ಎಂದು ಪತ್ರಕರ್ತನನ್ನೇ ಕೊಹ್ಲಿ ಅವರು ಪ್ರಶ್ನಿಸಿದರು. ಇದಕ್ಕೆ ಪತ್ರಕರ್ತ ನನಗೆ ಖಚಿತವಾಗಿ ಗೊತ್ತಿಲ್ಲ ಎಂಬ ಉತ್ತರ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, ನಿಮಗೆ ಖಚಿತವಾಗಿ ಗೊತ್ತಿಲ್ವಾ? ಅದು ನಿಮ್ಮ ಅಭಿಪ್ರಾಯ. ಧನ್ಯವಾದಗಳು ಎಂದು ಸಿಟ್ಟಿನಿಂದ ಉತ್ತರಿಸಿದರು.

ಕೆಎಲ್ ರಾಹುಲ್ 5ನೇ ಶತಕ, ದಾಖಲೆ ಬಗ್ಗೆ ಐದಾರು ಟ್ವೀಟ್ಸ್ ಕೆಎಲ್ ರಾಹುಲ್ 5ನೇ ಶತಕ, ದಾಖಲೆ ಬಗ್ಗೆ ಐದಾರು ಟ್ವೀಟ್ಸ್

ರವಿಶಾಸ್ತ್ರಿ ಅವರ ಹೇಳಿಕೆಯನ್ನು ಮಾಜಿ ನಾಯಕ ಸೌರವ್ ಗಂಗೂಲಿ, ಸುನೀಲ್ ಗವಾಸ್ಕಾರ್ ಕೂಡಾ ಖಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Thursday, September 13, 2018, 12:08 [IST]
Other articles published on Sep 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X