ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Eng vs NZ: ಇಂಗ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಶತಕ ಸಿಡಿಸಿದ ಡ್ಯಾರೆಚ್ ಮಿಚೆಲ್

England vs New zealand 3rd test: Daryl Mitchell hat-trick centuries against England

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿ ಸರಣಿಯನ್ನು ಕಳೆದುಕೊಂಡಿದ್ದರೂ ಓರ್ವ ಆಟಗಾರ ಸತತವಾಗಿ ಅದ್ಭುತ ಪ್ರದರ್ಶನ ನಿಡಿ ಮಿಂಚುತ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ ಕಿವಿಸ್ ಪಡೆಯ ಮಧ್ಯಮ ಕ್ರಮಾಂಕದ ಆಟಗಾರ ಡ್ಯಾರೆಲ್ ಮಿಚೆಲ್. ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿಯೂ ಶತಕ ಸಿಡಿಸಿದ ಮಿಚೆಲ್ ಹ್ಯಾಟ್ರಿಕ್ ಶತಕದ ಸಾಧನೆ ಮಾಡಿದ್ದು ಕಿವೀಸ್ ಪರವಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಮೊದಲ ದಿನದಾಟದ ಮುಕ್ತಾಯದ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡ 225 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಮಿಚೆಲ್ 78 ರನ್‌ಗಳಿಸಿ ಅಜೇಯವಾಗಿಳಿದು ಟಾಮ್ ಬ್ಲಂಡಲ್ ಜೊತೆಗೆ ಎರಡನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದರು. ಎರಡನೇ ದಿನದಾಟದ ಆರಂಭದಲ್ಲಿಯೇ ನ್ಯೂಜಿಲಂಡ್ ತಂಡ ಬ್ಲಂಡಲ್ ವಿಕೆಟ್ ಕಳೆದುಕೊಂಡರೂ ಮಿಚೆಲ್ ಆಟ ಮುಂದುವರಿದಿತ್ತು.

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುIRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಸಿಕ್ಸರ್ ಸಿಡಿಸಿ ಶತಕ ಪೂರೈಸಿದ ಮಿಚೆಲ್

ಸಿಕ್ಸರ್ ಸಿಡಿಸಿ ಶತಕ ಪೂರೈಸಿದ ಮಿಚೆಲ್

ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಡ್ಯಾರೆಲ್ ಮಿಚೆಲ್ ಜಾಕ್ ಲೀಚ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರೈಸಿದರು. ಈ ಮೂಲಕ ನ್ಯೂಜಿಲೆಂಡ್ ತಂಡದ ಪರವಾಗಿ ಹ್ಯಾಟ್ರಿಕ್ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 108 ರನ್ ಬಾರಿಸಿದ್ದ ಮಿಚೆಲ್ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ ಬಾರಿಸಿದ್ದರು. ಆ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅವರು ಅಜೇಯ 62 ರನ್ ಬಾರಿಸಿದ್ದಾರೆ.

ಕಿವೀಸ್ ಪರ ಈ ಸಾಧನೆ ಮಾಡಿದ 5ನೇ ಆಟಗಾರ

ಕಿವೀಸ್ ಪರ ಈ ಸಾಧನೆ ಮಾಡಿದ 5ನೇ ಆಟಗಾರ

ಇನ್ನು ಈ ಹ್ಯಾಟ್ರಿಕ್ ಶತಕದೊಂದಿಗೆ ನ್ಯೂಜಿಲೆಂಡ್ ಪರವಾಗಿ ಈ ವಿಶೇಷ ಸಾಧನೆ ಮಾಡಿದ ಕೇವಲ ಐದನೇ ಆಟಗಾರ ಎನಿಸಿಕೊಂಡಿದ್ದಾರೆ ಡ್ಯಾರೆಲ್ ಮಿಚೆಲ್. ಇದಕ್ಕೂ ಮುನ್ನ ಮಾರ್ಕ್ ಬರ್ಗೆಸ್, ರಾಸ್ ಟೇಲರ್, ಟಾಮ್ ಲ್ಯಾಥಮ್ ಮತ್ತು ಕೇನ್ ವಿಲಿಯಮ್ಸನ್ ಈ ಸಾಧನೆ ಮಾಡಿದ್ದು ಇವರ ಜೊತೆಗೆ ಡ್ಯಾರೆಲ್ ಮಿಚೆಲ್ ಕೂಡ ಸೇರ್ಪಡೆಯಾಗಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಉತ್ತಮ ಮೊತ್ತ

ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಉತ್ತಮ ಮೊತ್ತ

ಇನ್ನು ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ಮೊತ್ತಗಳಿಸುವಲ್ಲಿ ಯಶಸ್ವಿಯಾಗಿದೆ. ಅಗ್ರ ಕ್ರಮಾಂಕದ ಆಟಗಾರರು ವಿಫಲವಾದರು ಕೂಡ ಡ್ಯಾರೆಲ್ ಮಿಚೆಲ್ ಶತಕ ಟಾಮ್ ಬ್ಲಂಡೆಲ್ ಅರ್ಧ ಶತಕ ಹಾಗೂ ಟಿಮ್ ಸೌಥಿ ಅವರ 33 ರನ್‌ಗಳ ಕೊಡುಗೆಯಿಂದಾಗಿ ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ನ್ಯೂಜಿಲೆಂಡ್ ಬೌಲರ್‌ಗಳು ಕೂಡ ಮಿಂಚಿದ್ದು ಅಗ್ರ ಕ್ರಮಾಂಕದ ಆಟಗಾರರ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ.

ಪ್ಲೇಯಿಂಗ್ XI

ಪ್ಲೇಯಿಂಗ್ XI

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಜೇಮೀ ಓವರ್‌ಟನ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್
ಬೆಂಚ್: ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್

ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್
ಬೆಂಚ್: ಮ್ಯಾಟ್ ಹೆನ್ರಿ, ಹಮೀಶ್ ರುದರ್ಫೋರ್ಡ್, ಏಜಾಜ್ ಪಟೇಲ್, ಡೇನ್ ಕ್ಲೀವರ್, ಬ್ಲೇರ್ ಟಿಕ್ನರ್

Story first published: Saturday, June 25, 2022, 11:29 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X