ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ತ್ವರಿತಗತಿ 100, ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಇಲ್ಲ

ICC World Cup 2019 : ಟಾಪ್ 10 ರಲ್ಲಿ ಭಾರತದ ಒಬ್ಬ ಆಟಗಾರನ ಹೆಸರೂ ಇಲ್ಲ..? | Oneindia Kannada
Fastest hundreds in World Cup: No top-order batsman from India in top 10

ಬೆಂಗಳೂರು, ಜೂನ್ 13: ಕ್ರಿಕೆಟ್ ವಿಶ್ವದಲ್ಲಿ ಪವರ್ ಹೌಸ್ ಎಂದೆನಿಸಿಕೊಂಡಿರುವ ಭಾರತದಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಈಗಷ್ಟೇ ನಿವೃತ್ತಿ ಹೊಂದಿದ ಯುವರಾಜ್ ಅಲ್ಲದೆ, ಹಾಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಧೋನಿ ಅವರು ಐಸಿಸಿ ಆಯೋಜನೆಯ ಟೂರ್ನಮೆಂಟ್ ನಲ್ಲಿ ಸಕತ್ತಾಗಿ ಮಿಂಚಿದ್ದಾರೆ.

ಆದರೆ, ತ್ವರಿತಗತಿಯಲ್ಲಿ ಶತಕ ಬಾರಿಸಿರುವ ಆಟಗಾರರ ಟಾಪ್ 10 ಪಟ್ಟಿಯಲ್ಲಿ ಭಾರತದ ಟಾಪ್ ಶ್ರೇಣಿಯ ಆಟಗಾರರೆ ಇಲ್ಲ ಎಂಬುದು ಅಚ್ಚರಿಯಾದರೂ ಸತ್ಯ.

ವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆ ವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆ

ವಿಶ್ವಕಪ್ ಟೂರ್ನಮೆಂಟ್ ಗಳಲ್ಲಿ ಅತ್ಯಂತ ವೇಗವಾಗಿ ಶತಕ ಗಳಿಸಿದ ಸಾಧನೆ ಐರ್ಲೆಂಡ್ ಆಟಗಾರ ಕೆವಿನ್ ಓ ಬ್ರಿಯಾನ್ ಹೆಸರಿನಲ್ಲಿದೆ. ಕ್ರಿಕೆಟ್ ಜನಕ ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ 2011ರ ವಿಶ್ವಕಪ್ ಪಂದ್ಯಾವಳಿಯಲ್ಲಿ 50 ಎಸೆತಗಳಲ್ಲಿ 100ರನ್ ಗಡಿ ದಾಟಿದ್ದರು.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಹೊಡಿ ಬಡಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಎರಡನೇ ಸ್ಥಾನದಲ್ಲಿದ್ದಾರೆ. 2015ರ ವಿಶ್ವಕಪ್ ನಲ್ಲಿ ಸಿಡ್ನಿಯಲ್ಲಿ ಶ್ರೀಲಂಕಾ ವಿರುದ್ಧ 51 ಎಸೆತಗಳಲ್ಲಿ ನೂರು ರನ್ ಕಲೆ ಹಾಕಿದ್ದರು.

ಮೂರನೇ ಸ್ಥಾನದಲ್ಲಿ ದಕ್ಷಿಣ ಅಫ್ರಿಕಾದ ಎಬಿ ಡಿವಿಲಿಯರ್ಸ್ ಇದ್ದಾರೆ. ಎಬಿಡಿ ಕೂಡಾ 2015ರಲ್ಲಿ ಈ ಸಾಧನೆ ಮಾಡಿದ್ದು, ಎಸ್ ಸಿ ಜಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 52 ಎಸೆತಗಳಲ್ಲಿ ನೂರು ಗಡಿ ದಾಟಿದ್ದರು.

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲದೇ ಹೋದ ದಿಗ್ಗಜ ತಾರೆಗಳು ಇವರು! ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲದೇ ಹೋದ ದಿಗ್ಗಜ ತಾರೆಗಳು ಇವರು!

ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಇದ್ದು, 2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 66 ಎಸೆತಗಳಲ್ಲಿ ನೂರು ರನ್ ಗಳಿಸಿದ್ದರು. ಐದನೇ ಸ್ಥಾನದಲ್ಲಿ ಕೆನಡಾದ ಜಾನ್ ಡೇವಿಡ್ಸನ್ ಇದ್ದಾರೆ. 2003ರಲ್ಲಿ ಸೆಂಚುರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 67 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಭಾರತದ ಬಿರುಸಿನ ಆಟಗಾರರು:
ಭಾರತದ ಪರ ವಿಶ್ವಕಪ್ ನಲ್ಲಿ ತ್ವರಿತಗತಿ ಶತಕ ಬಾರಿಸಿದ್ದು ಮಾಜಿ ನಾಯಕ ಕಪಿಲ್ ದೇವ್. 1983ರ ವಿಶ್ವಕಪ್ ನಲ್ಲಿ ಟನ್ ಬ್ರಿಜ್ ವೇಲ್ಸ್ ನಲ್ಲಿ ಜಿಂಬಾಬ್ವೆ ವಿರುದ್ಧ 7ನೇ ಕ್ರಮಾಂಕದಲ್ಲಿ ಬಂದು 72 ಎಸೆತಗಳಲ್ಲಿ ನೂರರ ಗಡಿ ದಾಟಿದ್ದರು. 17 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ಜಯ ತಂದಿತ್ತರು.

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಡಂ ಗಿಲ್ ಕ್ರಿಸ್ಟ್ ಅವರು 2007ರ ವಿಶ್ವಕಪ್ ನಲ್ಲಿ ಶ್ರೀಲಂಕಾ ವಿರುದ್ಧ 72 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಮಿಕ್ಕಂತೆ, ವೀರೇಂದ್ರ ಸೆಹ್ವಾಗ್ ಅವರು 81 ಎಸೆತಗಳಲ್ಲಿ ಬರ್ಮುಡಾ ವಿರುದ್ಧ ಪೋರ್ಟ್ ಆಫ್ ಸ್ಪೇನ್ ನಲ್ಲಿ 2007ರ ವಿಶ್ವಕಪ್ ನಲ್ಲಿ ನೂರು ರನ್ ಗಳಿಸಿದ್ದರು. ತೆಂಡೂಲ್ಕರ್ ವಿಶ್ವಕಪ್ ನಲ್ಲಿ 2278 ರನ್ ಗಳಿಸಿದ್ದರೂ 92 ಎಸೆತಗಳಲ್ಲಿ ಕೀನ್ಯಾ ವಿರುದ್ಧ ಬ್ರಿಸ್ಟೋಲ್ 1999ರಲ್ಲಿ ಶತಕ ಗಳಿಸಿದ್ದಾರೆ.

Story first published: Thursday, June 13, 2019, 19:47 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X