ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫ್ಲ್ಯಾಶ್‌ಬ್ಯಾಕ್‌ 2020: ಹಿಂದಿನ ಎಲ್ಲಾ ಐಪಿಎಲ್‌ಗಿಂತ ಭಿನ್ನ ಐಪಿಎಲ್ 2020

Flashback 2020: different IPL than earlier all editions

ಮಾರ್ಚ್ ಅಂತ್ಯದಿಂದ ಆರಂಭಿಸಲು ಉದ್ದೇಶಿಸಲಾಗಿದ್ದ ಐಪಿಎಲ್ 13ನೇ ಆವೃತ್ತಿಗೆ ಕೊನೊಯ ಹಂತದಲ್ಲಿ ಕೊರೊನಾ ವೈರಸ್ ಅಡ್ಡಿಯಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಆದರೆ ಅದಾದ ಬಳಿಕ ವೈರಸ್ ಪ್ರಕರಣ ನಿರಂತರವಾಗಿ ಏರುಗತಿಯಲ್ಲೇ ಸಾಗಿದ ಪರಿಣಾಮ ಈ ವರ್ಷ ಐಪಿಎಲ್ ನಡೆಸುವುದೇ ಅನುಮಾನ ಎಂಬಂತಾ ಪರಿಸ್ಥಿತಿ ಉಂಟಾಯಿತು.

ಆದರೆ ಬಿಸಿಸಿಐ ಹೇಗಾದರೂ ಮಾಡಿ ಈ ಬಾರಿಯ ಐಪಿಎಲ್ ನಡೆಸಿಯೇ ತೀರ್ಮಾನ ತೆಗೆದುಕೊಂಡಿತ್ತು. ಇದೇ ಸಂದರ್ಭದಲ್ಲಿ ಐಸಿಸಿ ಸೆಪ್ಟೆಂಬರ್ ನವೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ಅನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿತು. ಹೀಗಾಗಿ ಈ ಅವಕಾಶವನ್ನು ಬಳಸಿಕೊಳ್ಳಲು ನಿರ್ಧರಿಸಿದ ಬಿಸಿಸಿಐ ಐಪಿಎಲ್‌ಅನ್ನು ಯುಎಇನಲ್ಲಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಸುವ ತೀರ್ಮಾನ ತೆಗೆದುಕೊಂಡಿತು.

ಫ್ಯಾಶ್‌ಬ್ಯಾಕ್ 2020: ಜೊತೆಯಾಗಿ ನಿವೃತ್ತಿ ಘೋಷಿಸಿ ಆಘಾತ ನೀಡಿದ ಧೋನಿ, ರೈನಾಫ್ಯಾಶ್‌ಬ್ಯಾಕ್ 2020: ಜೊತೆಯಾಗಿ ನಿವೃತ್ತಿ ಘೋಷಿಸಿ ಆಘಾತ ನೀಡಿದ ಧೋನಿ, ರೈನಾ

ಕೊರೊನಾ ಭೀತಿಯ ನಡುವೆಯೇ ಆರಂಭವಾದ 2020ರ ಐಪಿಎಲ್‌ನಲ್ಲಿ ಹಿಂದಿನ ಎಲ್ಲಾ ಐಪಿಎಲ್‌ಗಿಂತ ವಿಶೇಷವಾಗಿ ಏರ್ಪಾಡು ಮಾಡಲಾಯಿತು.

ಜೈವಿಕ ಸುರಕ್ಷಾ ಪರದೆ

ಜೈವಿಕ ಸುರಕ್ಷಾ ಪರದೆ

ಕೊರೊನಾ ವೈರಸ್‌ನ ಕಾರಣದಿಂದಾಗಿ ಯುಎಇನಲ್ಲಿ ನಡೆದ ಐಪಿಎಲ್‌ನ ಪ್ರಮುಖ ಬದಲಾವಣೆಯೆಂದರೆ ಬಯೋಸೆಕ್ಯೂರ್ ಬಬಲ್. ಪ್ರತಿ ತಂಡಕ್ಕೂ ಕಾಲ್ಪನಿಕ ಜೈವಿಕ ಸುರಕ್ಷತಾ ವಲಯವನ್ನು ನಿರ್ಮಿಸಿ ಆ ವಲಯದಲ್ಲಿದ್ದುಕೊಂಡು ಇಡೀ ಟೂರ್ನಿಯನ್ನು ಆಯೋಜಿಸಲಾಯಿತು. ಈ ಮೂಲಕ ಕೊರೊನಾವೈರಸ್ ಐಪಿಎಲ್‌ಗೆ ಕಾಡದಂತೆ ನೋಡಿಕೊಳ್ಳಲು ಸಹಕಾರಿಯಾಯಿತು

ಕೊರೊನಾವೈರಸ್ ಪರೀಕ್ಷೆ

ಕೊರೊನಾವೈರಸ್ ಪರೀಕ್ಷೆ

ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾದ 13ನೇ ಆವೃತ್ತಿಯ ಐಪಿಎಲ್ ವೀಕ್ಷಕರಿಲ್ಲದ ಖಾಲಿ ಮೈದಾನದಲ್ಲಿ ನಡೆಯಿತು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲಿಗೆ ಇಂಥ ಪರಿಸ್ಥಿತಿ ಉಂಟಾಗಿದೆ. ಇನ್ನು ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರರು 2 ವಾರದಲ್ಲಿ 4 ಬಾರಿ ಕೊರೊನಾವೈರಸ್ ಪರೀಕ್ಷೆಗೆ ಒಳಪಟ್ಟರು.

ಸ್ಟುಡಿಯೋದೊಳಗೆ 6 ಅಡಿ ಅಂತರ

ಸ್ಟುಡಿಯೋದೊಳಗೆ 6 ಅಡಿ ಅಂತರ

ಐಪಿಎಲ್ ನಡೆಯುವಾಗ ಕಾಮೆಂಟೇಟರ್‌ಗಳು ಸ್ಟುಡಿಯೋದೊಳಗೆ 6 ಅಡಿ ಅಂತರ ಕಾಯ್ದುಕೊಳ್ಳಲಾಯಿತು. ಡಗ್‌ಔಟ್‌ನಲ್ಲೂ ಸೀಮಿತ ಮಂದಿಗಷ್ಟೇ ಅವಲಾಶ ನೀಡಲಾಯಿತು. ಅಷ್ಟೇ ಅಲ್ಲ ಡ್ರೆಸ್ಸಿಂಗ್ ರೂಮ್‌ನಲ್ಲೂ 15 ಜನಕ್ಕಿಂತ ಹೆಚ್ಚು ಆಟಗಾರರು ಒಂದೇ ಹೊತ್ತಿನಲ್ಲಿ ಇರದಂತೆ ನಿಯಮ ರೂಪಿಸಲಾಯಿತು. ಬಹುಮಾನ ವಿತರಣೆಯೂ ವಿಭಿನ್ನವಾಗಿ ನಡೆಯಿತು.

ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ

ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ

ಐಪಿಎಲ್ ವೇಳೆ ಪಾಲಿಸಬೇಕಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ರೂಪಿಸಿತು. ಇದನ್ನು ಎಲ್ಲಾ ಆಟಗಾರರು, ಬೆಂಬಲ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಪಾಲಿಸಬೇಕಿತ್ತು. ಇದರ ಮೂಲಕ ಇಡೀ ಟೂರ್ನಿ ಸುಸೂತ್ರವಾಗಿ ನಡೆಯಲು ಯಶಸ್ವಿಯಾಯಿತು.

Story first published: Sunday, December 27, 2020, 8:11 [IST]
Other articles published on Dec 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X