ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವರಿಗೆ ಅರ್ಥವಾಗಲ್ಲ, ಅವರು ಬದಲಾಗುವುದೂ ಇಲ್ಲ: ಟೀಮ್ ಇಂಡಿಯಾ ನಿರ್ಧಾರಕ್ಕೆ ದೊಡ್ಡ ಗಣೇಶ್ ಕಿಡಿ

Team India, Sanju Samson, Dodda Ganesh, ಟೀಮ್ ಇಂಡಿಯಾ, ಸಂಜು ಸ್ಯಾಮ್ಸನ್, ದೊಡ್ಡ ಗಣೇಶ್

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಅಂತ್ಯವಾಗಿದೆ. ಈ ಸರಣಿಯ ಎರಡನೇ ಪಂದ್ಯ ಮಾತ್ರವೇ ಸಂಪೂರ್ಣ ಪ್ರಮಾಣದಲ್ಲಿ ನಡೆದಿದ್ದು ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದ ಕಾರಣ ಟೀಮ್ ಇಂಡಿಯಾ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಮೊದಲ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾದರೆ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಯಾದ ಕಾರಣ ಡಕ್ವರ್ತ್ ಲೂಯೀಸ್ ನಿಯಮದ ಅಧಾರದಲ್ಲಿ ಈ ಪಂದ್ಯವನ್ನು ಟೈ ಎಂದು ಘೋಷಿಸಲಾಗಿದೆ. ಹೀಗಾಗಿ ಭಾರತ ತಂಡ 1-0 ಅಂತರದಿಂದ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ರಿಷಭ್ ಪಂತ್ ಹಾಗೂ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದು ವೈಫಲ್ಯತೆ ಅನುಭವಿಸಿದ್ದಾರೆ. ಸರಣಿಯ ಎರಡನೇ ಪಂದ್ಯದಲ್ಲಿ ಈ ಜೋಡಿ ವೈಫಲ್ಯ ಅನುಭವಿಸಿದ ಬಳಿಕ ಅಂತಿಮ ಪಂದ್ಯದಲ್ಲಿಯೂ ಆರಂಭಿಕರಾಗಿ ಕಣಕ್ಕಿಳಿದು ನಾಯಕನ ನಿರ್ಧಾರವನ್ನು ಸಮರ್ಥನೆ ಮಾಡುವಂತಾ ಪ್ರದರ್ಶನ ನೀಡಲಿಲ್ಲ. ಸಾಕಷ್ಟು ಅವಕಾಶಗಳ ನಂತರವೂ ಇದೇ ಪುನರಾವರ್ತನೆಯಾಗುತ್ತಿರುವ ಹಿನ್ನಲೆಯಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು ಸಂಜು ಸ್ಯಾಮ್ಸನ್‌ಗ ಸೂಕ್ತ ಅವಕಾಶ ದೊರೆಯದ್ದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಈ ವಿಚಾರವಾಗಿ ಮಾತನಾಡಿದ್ದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.

IND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆIND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆ

ಟೀಮ್ ಇಂಡಿಯಾ ತಪ್ಪಿನಿಂದ ಬುದ್ಧಿ ಕಲಿಯಲ್ಲ

ಟೀಮ್ ಇಂಡಿಯಾ ತಪ್ಪಿನಿಂದ ಬುದ್ಧಿ ಕಲಿಯಲ್ಲ

ಟಿ20 ಸರಣಿಯ ಮುಕ್ತಾಯದ ಬಳಿಕ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ತನ್ನ ತಪ್ಪಿನಿಂದ ಪಾಠವನ್ನು ಕಲಿಯುವುದೇ ಇಲ್ಲ ಎಂದಿದ್ದಾರೆ. ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದಿರುವ ಬಗ್ಗೆ ದೊಡ್ಡ ಗಣೇಶ್ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮೇಲೆ ಕಿಡಿಕಾರಿದ್ದಾರೆ.

ಸಂಜುಗೆ ಅವಕಾಶ ನೀಡದಿರುವದಕ್ಕೆ ಕೆಂಡ

ಸಂಜುಗೆ ಅವಕಾಶ ನೀಡದಿರುವದಕ್ಕೆ ಕೆಂಡ

ಟೀಮ್ ಇಂಡಿಯಾದ ಅಂತಿಮ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್‌ ಅವರನ್ನು ಕಡೆಗಣಿಸಿ ಶ್ರೇಯಸ್ ಐಯ್ಯರ್‌ಗೆ ಅವಕಾಶ ನೀಡಿತ್ತು. ಈ ವಿಚಾರವಾಗಿ ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ. "ಸಂಜು ಸ್ಯಾಮ್ಸನ್ ಬದಲಿಗೆ ಶ್ರೇಯಸ್ ಐಯ್ಯರ್ ಅವರನ್ನು ಆಯ್ಕೆ ಮಾಡುವ ಮೂಲಕ ಭಾರತ ತಂಡದ ಥಿಂಕ್ ಟ್ಯಾಂಕ್ ನಾವು ತಪ್ಪುಗಳಿಂದ ಬುದ್ದಿ ಕಲಿಯಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಟಿ20 ಮಾದರಿಯಲ್ಲಿ ತಮ್ಮ ಅಪ್ರೋಚ್ ಯಾವತ್ತೂ ಬದಲಾಯಿಸುವುದಿಲ್ಲ" ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.

ಎರಡು ಪಂದ್ಯದಲ್ಲಿಯೂ ಐಯ್ಯರ್ ಸಂಪೂರ್ಣ ವೈಫಲ್ಯ

ಎರಡು ಪಂದ್ಯದಲ್ಲಿಯೂ ಐಯ್ಯರ್ ಸಂಪೂರ್ಣ ವೈಫಲ್ಯ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಯುವ ಬಳಗದೊಂದಿಗೆ ಕಣಕ್ಕಿಳಿದಿತ್ತು. ಆದರೆ ಟೀಮ್ ಇಂಡಿಯಾ ಪರವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬಹುತೇಕರು ವೈಫಲ್ಯ ಅನುಭವಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಮಾತ್ರವೇ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದರು. ಆರಂಭಿಕರಾದ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಇಬ್ಬರು ಕೂಡ ವೈಫಲ್ಯ ಕಂಡರೆ ಶ್ರೇಯಸ್ ಐಯ್ಯರ್ ಎರಡಯ ಪಂದ್ಯದಲ್ಲಿಯೂ ಕೆಟ್ಟ ಪ್ರದರ್ಶನ ನೀಡಿದರು. ಹೀಗಾಗಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಜೋರಾಗಿದೆ.

ಏಕದಿನ ಸರಣಿ ಮೇಲೆ ಚಿತ್ತ

ಏಕದಿನ ಸರಣಿ ಮೇಲೆ ಚಿತ್ತ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿ ಮುಕ್ತಾಯವಾದ ಬಳಿಕ ಇದೀಗ ಏಕದಿನ ಸರಣಿಯ ಮೇಲೆ ಚಿತ್ತ ನೆಟ್ಟಿದೆ. ಮೂರು ಪಂದ್ಯಗಳ ಟಿ20 ಸರಣಿ ಇದಾಗಿದ್ದು ನವೆಂಬರ್ 25ರಿಂದ ಈ ಸರಣಿ ಆರಂಭವಾಗಲಿದೆ. ನವೆಂಬರ್ 30ರಂದು ಅಂತಿಮ ಪಂದ್ಯ ನಡೆಯಲಿದೆ. ಈ ಸರಣಿಗೆ ಟೀಮ್ ಇಂಡಿಯಾ ಶಿಖರ್ ಧವನ್ ನೇತೃತ್ವದಲ್ಲಿ ಕಣಕ್ಕಿಳಿಯಲಿದ್ದು ಪ್ರತಿಭಾನ್ವಿತ ಆಟಗಾರರ ಪಡೆಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.
ಭಾರತ: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ಉಪ ನಾಯಕ & ವಿಕೆಟ್ ಕೀಪರ್), ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

Story first published: Wednesday, November 23, 2022, 16:05 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X