ಡರ್ಬಿಶೈರ್ ಆಟಗಾರ ಶಿವ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!

Posted By:

ಲಂಡನ್, ನವೆಂಬರ್ 17: ಇಂಗ್ಲೆಂಡಿನ ಅಂಡರ್ 19 ತಂಡದ ಮಾಜಿ ನಾಯಕ, ಡರ್ಬಿಶೈರ್ ಕೌಂಟಿ ಆಟಗಾರ, ಭಾರತೀಯ ಮೂಲದ ಶಿವ್ ಥಾಕೋರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.

24ವರ್ಷ ವಯಸ್ಸಿನ ಥಾಕೋರ್ ಅವರು ಜುಲೈ ತಿಂಗಳಿನಲ್ಲಿ ಡರ್ಬಿಯ ಮೆಕ್ ವರ್ಥ್ ನಲ್ಲಿ ಇದೇ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಜೂನ್ ತಿಂಗಳ ನಂತರ ಶಿವ್ ಅವರನ್ನು ವೃತ್ತಿ ಪರ ಕ್ರಿಕೆಟ್ ನಿಂದ ಅಮಾನತುಗೊಳಿಸಲಾಗಿದೆ.

Former England U-19 captain Shiv Thakor found guilty of indecent offence

ಆದರೆ, ಡರ್ಬಿಶೈರ್ ನ ದಕ್ಷಿಣ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರಾಗಿ 16 ವರ್ಷ ವಯಸ್ಸಿನ ನನ್ನ ಗೆಳತಿಯಿಂದ ನಾನು ಲೈಂಗಿಕ ತೃಪ್ತಿ ಹೊಂದಿದ್ದೇನೆ. ಹೀಗಾಗಿ ನನ್ನ ಮೇಲಿನ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಎರಡು ಪ್ರಕರಣಗಳ ವಿಚಾರಣೆ ನಡೆದು, ಆರೋಪಿ ಶಿವ್ ಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ನವೆಂಬರ್ 24ಕ್ಕೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕಿದೆ.

ಇಬ್ಬರು ಮಹಿಳೆಯರು ನೀಡಿರುವ ಹೇಳಿಕೆಯಲ್ಲಿ ನನಗೆ ಯಾವುದೇ ಸುಳ್ಳು ಆರೋಪ ಕಂಡು ಬಂದಿಲ್ಲ, ಮುಂದಿನ ವಿಚಾರಣೆ ಬಳಿಕ ತೀರ್ಪು ನೀಡಲಾಗುತ್ತದೆ ಎಂದು ಡಿಸ್ಟ್ರಿಕ್ ಜಡ್ಜ್ ಆಂಡ್ರ್ಯೂ ಮೀಚಿನ್ ಹೇಳಿದ್ದಾರೆ.

Story first published: Friday, November 17, 2017, 9:28 [IST]
Other articles published on Nov 17, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ