ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ. ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ: ಭಾರತದ ಪ್ಲೇಯಿಂಗ್ 11 ಹೆಸರಿಸಿದ ಸಂಜಯ್ ಮಂಜ್ರೇಕರ್

Sanjay Manjrekar

ಬುಧವಾರ (ಜ.19) ಆರಂಭಗೊಳ್ಳಲಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ಹೊಸ ಹೆಜ್ಜೆಯನ್ನಿಡಲು ಸಜ್ಜಾಗಿದೆ. ಪರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್‌ 11ನಲ್ಲಿ ಯಾರು ಕಣಕ್ಕಿಳಿಯಲಿದ್ದರೆ ಎಂಬುದು ಕುತೂಹಲ ಮೂಡಿಸಿದೆ. ಅದ್ರಲ್ಲೂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಟೀಂ ಇಂಡಿಯಾ ತಾತ್ಕಾಲಿಕ ಹೊಸ ನಾಯಕ ಕೆ.ಎಲ್ ರಾಹುಲ್ ಮುಂದಾಳತ್ವದಲ್ಲಿ ಹೆಜ್ಜೆಯನ್ನಿಡಲಿದೆ.

ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಯಾರೆಲ್ಲಾ ಸ್ಥಾನ ಪಡೆಯಬಹುದು ಎಂಬುದನ್ನ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಅಂದಾಜಿಸಿದ್ದಾರೆ. ಇವರು ಹಿರಿಯ ಆಟಗಾರ ಶಿಖರ್ ಧವನ್ ಮತ್ತು ಮಹಾರಾಷ್ಟ್ರದ ಯುವ ಸೆನ್ಸೇಷನ್ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನ ಕಡೆಗಣಿಸಿ, ಆಲ್‌ರೌಂಡರ್ ವೆಂಕಟೇಶ್ ಅಯ್ಯರ್‌ಗೆ ಸ್ಥಾನ ಒದಗಿಸಿದ್ದಾರೆ.

IPL 2022: ಲಕ್ನೋ ತಂಡಕ್ಕೆ ಕೆ.ಎಲ್ ರಾಹುಲ್, ಸ್ಟೊಯ್ನಿಸ್, ರವಿ ಬಿಷ್ಣೋಯ್ ಸೇರ್ಪಡೆ!IPL 2022: ಲಕ್ನೋ ತಂಡಕ್ಕೆ ಕೆ.ಎಲ್ ರಾಹುಲ್, ಸ್ಟೊಯ್ನಿಸ್, ರವಿ ಬಿಷ್ಣೋಯ್ ಸೇರ್ಪಡೆ!

"ನನ್ನ ಮುಖ್ಯ ಉದ್ದೇಶ ಆರನೇ ಬೌಲಿಂಗ್ ಆಯ್ಕೆಗೆ ಹೊಂದಾಣಿಕೆಯಾಗಿದ್ದು ಆದ್ದರಿಂದ, ವೆಂಕಟೇಶ್ ಅಯ್ಯರ್ ಅವರು ಪ್ಲೇಯಿಂಗ್ 11ನಲ್ಲಿ ಕಾಣಿಸುತ್ತಾರೆ"ಎಂದು ಇಎಸ್‌ಪಿಎನ್‌ ಕ್ರಿಕ್ಇನ್ಫೋ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮಂಜ್ರೇಕರ್ ಹೇಳಿದ್ದಾರೆ. ಈ ಪಂದ್ಯಕ್ಕೆ ಶಿಖರ್ ಧವನ್‌ಗೆ ವಿಶ್ರಾಂತಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಕಾಣಸಿಗುತ್ತಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಯುಜವೇಂದ್ರ ಚಹಾಲ್ ಮತ್ತು ಹೊಸ ಉಪನಾಯಕ ಜಸ್ಪ್ರೀತ್ ಬುಮ್ರಾ ಇದ್ದಾರೆ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಸೇರಿಸಿಕೊಂಡಿಲ್ಲ.

ಸಂಜಯ್ ಮಂಜ್ರೇಕರ್‌ನ ಭಾರತ ಪ್ಲೇಯಿಂಗ್ 11:
ಕೆ.ಎಲ್ ರಾಹುಲ್ (ನಾಯಕ), ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಜಯಂತ್ ಯಾದವ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಯುಜವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ (ಉಪನಾಯಕ)

Story first published: Wednesday, January 19, 2022, 10:20 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X