
ಟೀಂ ಇಂಡಿಯಾ ಈ ಬಗ್ಗೆ ಯೋಚಿಸಲಿ
ಟೀಮ್ ಇಂಡಿಯಾದ ವೇಗದ ಬೌಲಿಂಗ್ ಸಮಸ್ಯೆಗಳ ಕುರಿತು, ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
"ಭಾರತ ತಂಡ ಬೌಲಿಂಗ್ ಸಮಸ್ಯೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಅವರು ವೇಗದ ಬೌಲರ್ ಗಳಿಗೆ ಹೆಚ್ಚಿನ ಅವಕಾಶವನ್ನು ನೀಡಬೇಕು. ಮಧ್ಯಮ ವೇಗಿಗಳಿಗೆ ಹೆಚ್ಚಿನ ಅವಕಾಶ ನೀಡುವುದನ್ನು ಕಡಿಮೆ ಮಾಡಬೇಕು. ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವವರಿಗೆ ಅವಕಾಶ ನೀಡುವ ಮೂಲಕ ಅದರ ಲಾಭ ಪಡೆಯಬೇಕು. 130 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವವರನ್ನು ಆಡಿಸಿದರೆ ತಂಡದಲ್ಲಿ ಬೌಲಿಂಗ್ ಸುಧಾರಣೆ ಕಾಣುವುದಿಲ್ಲ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರ ಜೊತೆಯಲ್ಲಿ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಆಡುವ ಅವಕಾಶ ಪಡೆದಿದ್ದರು.
ಪತ್ನಿ ಧನಶ್ರೀ ವರ್ಮಾಗೆ 'ಕೂಲಿ' ಆದ ಯುಜ್ವೇಂದ್ರ ಚಹಾಲ್; ಶಿಖರ್ ಧವನ್ ರೀಲ್ ವೈರಲ್

ಉತ್ತಮವಾದ ಬೌಲಿಂಗ್ ಪಡೆ ಇಲ್ಲ
ಸದ್ಯ ನ್ಯೂಜಿಲೆಂಡ್ ತಂಡಕ್ಕೆ ಮಾರಕವಾಗುವಂತಹ ಬೌಲರ್ ಭಾರತ ತಂಡದಲ್ಲಿ ಇಲ್ಲ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ. ಮೊದಲ ಪಂದ್ಯದಲ್ಲಿ ಉಮ್ರಾನ್ ಮಲಿಕ್ ವೇಗವಾಗಿ ಬೌಲಿಂಗ್ ಮಾಡಿದರು. ಕೊನೆಯ 2-3 ಓವರ್ ಗಳಲ್ಲಿ ಅವರು ರನ್ ಬಿಟ್ಟುಕೊಟ್ಟರು, ಇತರೆ ಬೌಲರ್ ರೀತಿ ದುಬಾರಿಯಾಗಿರಲಿಲ್ಲ.
ಆದರೆ, ಅವರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಉತ್ತಮವಾದ ಬ್ಯಾಟಿಂಗ್ ಪಿಚ್‌ನಲ್ಲಿ ಭಾರತದ ಬೌಲಿಂಗ್ ಶಕ್ತಿ ಸೀಮಿತವಾಗಿದೆ ಎಂದು ಹೇಳಿದ್ದಾರೆ. ಉಮ್ರಾನ್ ಮಲಿಕ್ ಹೊರತುಪಡಿಸಿ ಉಳಿದ ಬೌಲರ್ ಗಳು ಪರಿಣಾಮಕಾರಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

300 ರನ್‌ಗಳನ್ನು ರಕ್ಷಣೆ ಮಾಡುವುದು ಕಷ್ಟ
"ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 370-375 ರನ್ ಗಳಿಸಿದರೆ ಮಾತ್ರ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಅವಕಾಶ ಇರುತ್ತದೆ. ಆದರೆ, ಅವರು 280 ಮತ್ತು 320 ರ ನಡುವೆ ಸ್ಕೋರ್ ಮಾಡಿದರು ಅದನ್ನು ರಕ್ಷಣೆ ಮಾಡುವುದು ಈ ಬೌಲಿಂಗ್ ಪಡೆಗೆ ಕಷ್ಟವಾಗಲಿದೆ, ಭಾರತ ತಂಡ ಈ ಎಲ್ಲಾ ವಿಚಾರಗಳ ಬಗ್ಗೆ ಯೋಚಿಸಬೇಕು ಎಂದು ಸಲ್ಮಾನ್ ಬಟ್ ಹೇಳಿದರು.
ನವೆಂಬರ್ 27 ರ ಭಾನುವಾರ ಹ್ಯಾಮಿಲ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಮೂರನೇ ಪಂದ್ಯ ನವೆಂಬರ್ 30 ಬುಧವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ಸಮಬಲವಾಗಲಿದೆ.