ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯನ್ನು ತಂಡದಿಂದ ಕೈಬಿಡುವ ಆಯ್ಕೆಗಾರರು ಭಾರತದಲ್ಲಿ ಇನ್ನೂ ಹುಟ್ಟಿಲ್ಲ ಎಂದ ಪಾಕ್ ಮಾಜಿ ನಾಯಕ!

Former Pakistan skipper Rashid Latif statement on Virat Kohli drop from team

ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ದಿನೇ ದಿನೇ ಟೀಕೆಗಳು ಹೆಚ್ಚಾಗುತ್ತಿದೆ. ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕು ಎಂಬ ಅಭಿಪ್ರಾಯಗಳು ಜೋರಾಗಿ ಕೇಳಿ ಬರುತ್ತಿದೆ. ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮ ಆರಂಭದೊಂದಿಗೆ ಮುನ್ನಡೆಯುವ ಸೂಚನೆ ಕೊಡುತ್ತಿದ್ದಂತೆಯೇ ತಮ್ಮ ವಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ಕೊಹ್ಲಿ ವೈಫಲ್ಯ ಮುಂದುವರಿದಿದೆ.

ಮೊದಲ ಪಂದ್ಯದಲ್ಲಿ ಗಾಯದ ಕಾರಣದಿಂದಾಗಿ ಆಡುವ ಬಳಗದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಲಾರ್ಡ್ಸ್‌ಮಲ್ಲಿ ನಡೆದ ಈ ಪಂದ್ಯದಲ್ಲಿ ಕೊಹ್ಲಿ 25 ಎಸೆತಗಳಲ್ಲಿ 16 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಡೇವಿಡ್ ವಿಲ್ಲಿ ಎಸೆತವನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾದ ಕೊಹ್ಲಿ ವಿಕೆಟ್ ಕೀಪರ್ ನಾಯಕ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೈಫಲ್ಯವ ಬಳಿಕ ಪಾಕಿಸ್ತಾನದ ಮಾಜಿ ನಾಯಕ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

Ind vs Eng: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಭಾರೀ ಸೋಲು: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್Ind vs Eng: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಭಾರೀ ಸೋಲು: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್

ವಿಂಡೀಸ್ ಸರಣಿಗಿಲ್ಲ ಕೊಹ್ಲಿ

ವಿಂಡೀಸ್ ಸರಣಿಗಿಲ್ಲ ಕೊಹ್ಲಿ

ಭಾರತ ಇಂಗ್ಲೆಂಡ್ ಪ್ರವಾಸ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ವೈಟ್‌ಬಾಲ್ ಸರಣಿಯಲ್ಲಿ ಭಾಗಿಯಾಗಲಿದೆ. ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳ ಸರಣಿಗೆ ಈಗಾಗಲೇ ಸ್ಕ್ವಾಡ್ ಘೋಷಣೆ ಮಾಡಲಾಗಿದೆ. ಆದರೆ ವಿರಾಟ್ ಕೊಹ್ಲಿ ಈ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಈ ಸರಣಿಗೆ ಆಯ್ಕೆಯಾಗದಿರಲು ಕಾರಣವೇನೆಂದು ಬಿಸಿಸಿಐ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಪಿಟಿಐ ಸುದ್ದಿ ಸಂಸ್ಥೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ ಎಂದು ವರದಿ ಮಾಡಿದೆ. ವಿರಾಟ್ ಕೊಹ್ಲಿಯನ್ನು ವಿಂಡಿಸ್ ಸರಣಿಯಿಂದ ಬೇಕೆಂದೇ ಕೈ ಬಿಡಲಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಈ ವಿಚಾರವಾಗಿ ಪಾಕಿಸ್ತಾನ್ ಮಾಜಿ ನಾಯಕ ರಶೀದ್ ಲತೀಫ್ ಪ್ರತಿಕ್ರಿಯೆ ನೀಡಿದ್ದಾರೆ.

ಅಂಥಾ ಆಯ್ಕೆಗಾರರು ಭಾರತದಲ್ಲಿಲ್ಲ

ಅಂಥಾ ಆಯ್ಕೆಗಾರರು ಭಾರತದಲ್ಲಿಲ್ಲ

ವಿರಾಟ್ ಕೊಹ್ಲಿಯನ್ನು ಕಳಪೆ ಪ್ರದರ್ಶನದ ಕಾರಣಕ್ಕೆ ಯಾವುದೇ ಆಯ್ಕೆಗಾರರು ಕೂಡ ತಂಡದಿಂದ ಕೈಬಿಡುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ರಶೀದ್ ಲತೀಫ್. "ಭಾರತದಲ್ಲಿ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವ ಯಾವುದೇ ಆಯ್ಕೆಗಾರರು ಹುಟ್ಟಿಲ್ಲ" ಎಂಬ ಹೇಳಿಕೆ ನೀಡಿದ್ದಾರೆ ರಶೀದ್ ಲತೀಪ್. ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ವಿರಾಟ್ ಕೊಹ್ಲಿಯನ್ನು ತಂಡದಿಂದ ಹೊರಗಿಡಬೇಕಾ ಎಂಬ ಎಂದು ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ ರಶೀದ್ ಲತೀಫ್.

ಕೊಹ್ಲಿಗೆ ಬೆಂಬಲವಾಗಿ ನಿಂತ ನಾಯಕ ರೋಹಿತ್

ಕೊಹ್ಲಿಗೆ ಬೆಂಬಲವಾಗಿ ನಿಂತ ನಾಯಕ ರೋಹಿತ್

ಇನ್ನು ವಿರಾಟ್ ಕೊಹ್ಲಿ ವೈಫಲ್ಯವನ್ನು ಅನುಭವಿಸುತ್ತಿದ್ದರೆ ನಾಯಕ ರೋಹಿತ್ ಶರ್ಮಾ ಮಾತ್ರ ಕೊಹ್ಲಿಗೆ ಬಲವಾಗಿ ಬೆಂಬಲವಾಗಿ ನಿಂತಿದ್ದಾರೆ. ಎರಡನೇ ಏಕದಿನ ಪಂದ್ಯದ ಮುಕ್ತಾಯದ ಬಳಿಕವೂ ರೋಹಿತ್ ಶರ್ಮಾಗೆ ಈ ವಿಚಾರವಾಗಿ ಪ್ರಶ್ನೆ ಎದುರಾಯಿತು. ಈ ಸಂದರ್ಭದಲ್ಲಿ ರೋಹಿತ್ ಆಟಗಾರರು ಫಾರ್ಮ್ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಆತನ ಆಟದಲ್ಲಿರುವ ಗುಣಮಟ್ಟ ಕಡಿಮೆಯಾಗಲಾರದು" ಎಂದು ಹೇಳಿಕೆ ನೀಡಿದ್ದಾರೆ.

ಈ ಸಮಯ ಸರಿದು ಹೋಗಲಿದೆ ಎಂದ ಪಾಕ್ ನಾಯಕ

ಈ ಸಮಯ ಸರಿದು ಹೋಗಲಿದೆ ಎಂದ ಪಾಕ್ ನಾಯಕ

ಇನ್ನು ಎರಡನೇ ಏಕದಿನ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಅಜಂ ಟ್ವೀಟ್‌ನಲ್ಲಿ ವಿಶೇಷ ಸಂದೇಷವೊಂದನ್ನು ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಬಾಬರ್ ಅಜಂ "ಈ ಸಮಯವೂ ಸರಿದು ಹೋಗಲಿದೆ" ಎಂದು ಬರೆದುಕೊಂಡಿದ್ದಾರೆ. ಈ ಮುಲಕ ವಿರಾಟ್ ಕೊಹ್ಲಿಗೆ ಬೆಂಬಲ ಸೂಚಿಸಿದ್ದಾರೆ.

Story first published: Friday, July 15, 2022, 19:03 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X