ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ಯಾಪ್ಟನ್ ಕೂಲ್ ಧೋನಿಗೆ ಬಹುಪರಾಕ್ ಎಂದ ಫ್ಯಾನ್ಸ್

By Mahesh

ಇಂದೋರ್, ಅ.14: ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರ ನೀಡಿದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಆಟಕ್ಕೆ ಅಭಿಮಾನಿಗಳು ಬಹುಪರಾಕ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಧೋನಿ ಅವರ ಆಟವನ್ನು ಟ್ವಿಟ್ಟರ್ ನಲ್ಲಿ ಸಂಭ್ರಮಿಸಲಾಗುತ್ತಿದೆ.

ಇಂದೋರ್ ನ ಹೋಲ್ಕರ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ಕ್ರೀಸ್ ಗೆ ಬಂದ ಧೋನಿ ಅವರು ತಮ್ಮ ಹಿಂದಿನ ಲಯ ಕಂಡುಕೊಂಡು ಆಕರ್ಷಕ ಸಿಕ್ಸರ್ ಗಳನ್ನು ಸಿಡಿಸಿದರು.[ಕೊಹ್ಲಿ-ಧೋನಿ ಫೈಟ್: ಭಾರತದ ಸೋಲಿಗೆ ನೈಜ ಕಾರಣ]

ಧೋನಿ ಅವರು ಲಯ ಕಳೆದುಕೊಂಡಿದ್ದಾರೆ, ಅವರು ನಾಯಕನಾಗಿ, ಆಟಗಾರನಾಗಿ ಉಳಿಯಲು ಅರ್ಹರಲ್ಲ, ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಿ ನಿವೃತ್ತಿ ಹೊಂದಲಿ ಎಂದು ಟೀಕಿಸಿದವರಿಗೆ ಧೋನಿ ತಮ್ಮ ಬ್ಯಾಟ್ ಮೂಲಕ ಉತ್ತರಿಸಿದ್ದಾರೆ. [ಇಂದೋರ್: ಏಕದಿನ ಪಂದ್ಯ ವರದಿ]

ಟಾಸ್ ಗೆದ್ದಿದ್ದು ಧೋನಿ ಪಾಲಿಗೆ ಲಕ್ಕಿಯಾಯಿತು. ಎಡಗೈನಿಂದ ಮೊದಲ ಬಾರಿಗೆ ನಾಣ್ಯವನ್ನು ಚಿಮ್ಮಿಸಿದ ಧೋನಿ ಅವರು ಮೊದಲ ಬಾರಿಗೆ ಟಾಸ್ ಗೆದ್ದುಕೊಂಡರು. ಜೊತೆಗೆ ಬ್ಯಾಟಿಂಗ್ ನಲ್ಲೂ ಮಿಂಚಿದರು. 86 ಎಸೆತಗಳಲ್ಲಿ 92ರನ್ (7 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್) ಸಿಡಿಸಿದರು. [ಧೋನಿ ಸಾಮರ್ಥ್ಯ ಪ್ರಶ್ನಿಸಿದ ಅಜಿತ್ ಗೆ ಟ್ವೀಟ್ ಗೂಸಾ!]

34 ವರ್ಷದ ಧೋನಿ ಅವರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ಧೋನಿ ಅವರು ಲಯಕ್ಕೆ ಮರಳಿದ್ದನ್ನು ಸಂಭ್ರಮಿಸುತ್ತಿದ್ದಾರೆ.

ಕ್ರಿಕೆಟರ್ಸ್ ಗಳಿಂದ ಪ್ರಶಂಸೆ

ಕ್ರಿಕೆಟರ್ಸ್ ಗಳಿಂದ ಪ್ರಶಂಸೆ

ವಿವಿಎಸ್ ಲಕ್ಷ್ಮಣ್, ಆಕಾಶ್ ಛೋಪ್ರಾ, ಸಂಜಯ್ ಮಂಜ್ರೇಕರ್, ಟಾಮ್ ಮೂಡಿ ಸೇರಿದಂತೆ ಅನೇಕ ಕ್ರಿಕೆಟರ್ಸ್ ಗಳು ಧೋನಿ ಆಟವನ್ನು ಮೆಚ್ಚಿದ್ದಾರೆ. ಅಜಿತ್ ಅಗರ್ಕರ್ ಪ್ರಸಂಗದ ನಂತರ ಅನೇಕ ಮಾಜಿ ಕ್ರಿಕೆಟರ್ಸ್ ಕಣ್ಣು ಧೋನಿ ಬ್ಯಾಟಿಂಗ್ ಹಾಗೂ ನಾಯಕತ್ವದ ಮೇಲೆ ಬಿದ್ದಿತ್ತು.

ಸಂಜಯ್ ಮಂಜ್ರೇಕರ್ ಟ್ವೀಟ್

ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಟ್ವೀಟ್ ಮಾಡಿ, ಧೋನಿ ಉತ್ತಮ ಆಟವಾಡಿದ್ದಾರೆ ಆದರೆ, ಟೀಂ ಇಂಡಿಯಾ ಇನ್ನೂ ಹೆಚ್ಚಿನ ರನ್ ಗಳಿಸಬೇಕಿತ್ತು. ಬೌಲರ್ ಗಳು ಹೆಚ್ಚಿನ ಶ್ರಮವಹಿಸಬೇಕು ಎಂದಿದ್ದಾರೆ.

ನಿಃಸ್ವಾರ್ಥಿ ಧೋನಿ ಬಗ್ಗೆ ಎಷ್ಟು ಹೇಳಿದ್ರು ಸಾಲದು

ನಿಃಸ್ವಾರ್ಥಿ ಧೋನಿ ಬಗ್ಗೆ ಎಷ್ಟು ಹೇಳಿದ್ರು ಸಾಲದು. ಕಳೆದ ಹಲವು ವರ್ಷಗಳಿಂದ ತಂಡಕ್ಕಾಗಿ ಆಡುತ್ತಿದ್ದಾರೆ. ಅವರು ಇನ್ಮುಂದೆ ಕೂಡಾ 4ನೇ ಕ್ರಮಾಂಕದಲ್ಲೇ ಆಡಲಿ.

ಟಾಮ್ ಮೂಡಿ ಅವರಿಂದ ಪ್ರಶಂಸೆ

ಆಸ್ಟ್ರೇಲಿಯಾದ ದಿಗ್ಗಜ ಟಾಮ್ ಮೂಡಿ ಅವರಿಂದ ಧೋನಿ ಬಗ್ಗೆ ಪ್ರಶಂಸೆ ಮಾತು. ಅಶ್ವಿನ್ ಇರಬೇಕಿತ್ತು ಎಂದ ಮೂಡಿ.

ಅಜಿತ್ ಅಗರ್ಕರ್ ಅವರನ್ನು ಕರೆ ತಂದ ಫ್ಯಾನ್ಸ್

ಅಜಿತ್ ಅಗರ್ಕರ್ ಎಲ್ಲಿದ್ದಾರೆ? ಎಂಎಸ್ ಧೋನಿ ಎಂದರೆ ಆಪದ್ಭಾಂದವ ಎಂದ ಫ್ಯಾನ್ಸ್

ಧೋನಿ ವಿರೋಧಿಗಳಿಗೆ ತಕ್ಕ ಉತ್ತರ ಸಿಕ್ಕಿದೆ

ಧೋನಿ ವಿರೋಧಿಗಳಿಗೆ ತಕ್ಕ ಉತ್ತರ ಸಿಕ್ಕಿದೆ. ತಂಡ ಕಷ್ಟದಲ್ಲಿದ್ದಾಗ ಯಾರು ಬ್ಯಾಟಿಂಗ್ ಮಾಡಿ ನೆರವಿಗೆ ಬಂದರೂ ಎಂಬುದು ತಿಳಿಯಲಿ.

ನಟಿ ಶ್ವೇತಾ ತಿವಾರಿ ಇಂದ ಖಡಕ್ ಟ್ವೀಟ್

ಯಾರು ಏನೇ ಹೇಳಲಿ ಎಲ್ಲಾ ರೀತಿಯಿಂದಲೂ ವಿರಾಟ್ ಕೊಹ್ಲಿಗಿಂತಲೂ ಧೋನಿಯೇ ಉತ್ತಮ ಆಟಗಾರ ಎಂದ ಬಿಗ್ ಬಾಸ್ 4 ಸ್ಪರ್ಧಿಯಾಗಿದ್ದ ನಟಿ ಶ್ವೇತಾ ತಿವಾರಿ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X