ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿರಾಜ್ ಆಕ್ರಮಣಕಾರಿ ಆಟಕ್ಕೆ ತಡೆ ಹಾಕಬೇಡಿ: ಜೆಫ್ರಿ ಬಾಯ್ಕಾಟ್ ಮನವಿ

Geoffrey Boycott praises Mohammed Siraj says Don’t curb his aggression

ಲಂಡನ್, ಆಗಸ್ಟ್ 19: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಲಾರ್ಡ್ಸ್ ಪಂದ್ಯವನ್ನು ಗೆದ್ದು ಈಗ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ನೀಡಿರುವ ಪ್ರದರ್ಶನ ದಿಗ್ಗಜ ಆಟಗಾರರನ್ನು ಕೂಡ ಮೆಚ್ಚಿಸಿದೆ. ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ ಮೊಹಮ್ಮದ್ ಸಿರಾಜ್ ಬೌಲಿಂಗ್ ಪ್ರದರ್ಶನಕ್ಕೆ ಮಾರುಹೋಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ ಜೆಫ್ರಿ ಬಾಯ್ಕಾಟ್.

ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ಕೊನೆಯ ದಿನ ಬೌಲಿಂಗ್‌ನಲ್ಲಿ ಸಿರಾಜ್ ಪಾತ್ರ ಮಹತ್ವದ್ದಾಗಿತ್ತು. ಆಕ್ರಮಣಕಾರಿ ಬೌಲಿಂಗ್ ದಾಳಿಯ ಮೂಲಕ ಸಿರಾಜ್ ಇಂಗ್ಲೆಂಡ್‌ನ 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಭರ್ಜರಿ ಗೆಲುವನ್ನಾಚರಿಸಿತ್ತು. ಈ ಪಂದ್ಯದಲ್ಲಿ ಸಿರಾಜ್ ಎರಡು ಇನ್ನಿಂಗ್ಸ್‌ನಲ್ಲಿಯೂ ತಲಾ ನಾಲ್ಕು ವಿಕೆಟ್ ಕಬಳಿಸಿದ್ದು ಒಟ್ಟಾರೆ 126 ರನ್‌ಗಳನ್ನು ನೀಡಿ 8 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಇದು ಮೊಹಮ್ಮದ್ ಸಿರಾಜ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

ಟಿ20ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರಟಿ20ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರ

ಸಿರಾಜ್ ಆಟಕ್ಕೆ ಅಡ್ಡಿ ಬೇಡ

ಸಿರಾಜ್ ಆಟಕ್ಕೆ ಅಡ್ಡಿ ಬೇಡ

ಲಾರ್ಡ್ಸ್ ಅಂಗಳದಲ್ಲಿ ನೀಡಿದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಬಾಯ್ಕಾಟ್ ಪ್ರತಿಕ್ರಿಯಸಿದ್ದಾರೆ, ಈ ಸಂದರ್ಭದಲ್ಲಿ ಅವರು ಮೊಹಮ್ಮದ್ ಸಿರಾಜ್ ಹೊಂದಿರುವ ಆಕ್ರಮಣಕಾರಿ ಮನೋಭಾವದ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಆಕ್ರಮಣಕಾರಿ ಆಟಕ್ಕೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ತಡೆ ನೀಡಬಾರದು. ಆತನ ಸಹಜ ಶೈಲಿಯಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಬೇಕು ಎಂದಿದ್ದಾರೆ.

"ನನಗೆ ಸಿರಾಜ್ ಇಷ್ಟವಾಗಿದ್ದಾರೆ. ಆತನೋರ್ವ ಬಹಳಷ್ಟು ಹುರುಪುಹೊಂದಿರುವ ಆಟಗಾರ. ಆತನಿಗೆ ಯಾರೂ ಕೂಡ ಏನನ್ನೂ ಕಡಿಮೆ ಮಾಡಿಕೊಳ್ಳುವಂತೆ ಸಲಹೆಯನ್ನು ನೀಡಬಾರದು. ಆತನದೇ ಶೈಲಿಯಲ್ಲಿ ಆತ ಮಿಂಚಲು ಅವಕಾಶ ನೀಡಬೇಕು. ಆತ ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಅಸ್ತ್ರ. ಆತನ ದಾಳಿಯಲ್ಲಿ ಹೊಸತನವಿದೆ" ಎಂದು ಜೆಫ್ರಿ ಬಾಯ್ಕಾಟ್ ಪ್ರತಿಕ್ರಿಯೆ ನೀಡಿದ್ದಾರೆ.

ಟೀಮ್ ಇಂಡಿಯಾ ಬೌಲಿಂಗ್ ಬಗ್ಗೆ ಮೆಚ್ಚುಗೆ

ಟೀಮ್ ಇಂಡಿಯಾ ಬೌಲಿಂಗ್ ಬಗ್ಗೆ ಮೆಚ್ಚುಗೆ

ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಇಡೀ ಬೌಲಿಂಗ್ ವಿಭಾಗದ ಪ್ರದರ್ಶನಕ್ಕೆ ಬಾಯ್ಕಾಟ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಆರ್ ಅಶ್ವಿನ್ ಅವರನ್ನು ಆಡಿಸಿದೇ ಇರುವುದು ತಂಡಕ್ಕೆ ಸ್ವಲ್ಪ ಹಿನ್ನೆಡೆಯಾಯಿತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಟೀಮ್ ಇಂಡಿಯಾ ಈಗ ಅದ್ಭುತವಾದ ಬೌಲಿಂಗ್ ದಾಳಿಯನ್ನು ಹೊಂದಿದೆ. ಆದರೆ ನಾನು ಆರ್ ಅಶ್ವಿನ್ ಅವರನ್ನು ತಂಡದಲ್ಲಿ ಹೊಂದುವುದಕ್ಕೆ ಬಯಸುತ್ತೇನೆ. ಇಬ್ಬರು ಅಗ್ರ ಸ್ಪಿನ್ನರ್‌ಗಳು ಹಾಗೂ ಮೂವರು ವೇಗಿಗಳು ನನ್ನ ಆಯ್ಕೆಯಾಗಿದೆ" ಎಂದಿದ್ದಾರೆ ಜೆಫ್ರಿ ಬಾಯ್ಕಾಟ್.

KCA ನಿಂದ ರಣಜಿ ಆಟಗಾರನಿಗೆ ಅವಮಾನ ! | Oneindia Kannada
ಇಂಗ್ಲೆಂಡ್ ಬ್ಯಾಟಿಂಗ್ ಬಗ್ಗೆ ಟೀಕೆ

ಇಂಗ್ಲೆಂಡ್ ಬ್ಯಾಟಿಂಗ್ ಬಗ್ಗೆ ಟೀಕೆ

ಇನ್ನು ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಪ್ರದರ್ಶನಕ್ಕೆ ಬಾಯ್ಕಾಟ್ ಕಟು ಟೀಕೆಯನ್ನು ಮಾಡಿದ್ದಾರೆ. ತನ್ನ ತಾಯಿ ಕೂಡ ಇಂಗ್ಲೆಂಡ್ ತಂಡದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಿಗಿಂತ ಉತ್ತಮವಾಗು ಬ್ಯಾಟಿಂಗ್ ನಡೆಸಬಲ್ಲರು ಎಂದು ಎಂದಿದ್ದಾರೆ ಬಾಯ್ಕಾಟ್. "ನನಗೆ ಇಂಗ್ಲೀಷ್ ಬ್ಯಾಟಿಂಗ್ ಲೈನ್‌ಅಪ್‌ನ ಬಗ್ಗೆ ಆತಂಕವಾಗುತ್ತಿದೆ. ಇಂಗ್ಲೆಂಡ್‌ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳ ಪ್ರದರ್ಶನಕ್ಕಿಂತ ನನ್ನ ತಾಯಿ ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲರು. ಇದು ತುಂಬಾ ಬೇಸರದ ಸಂಗತಿ. ಕೌಶಲ್ಯದಲ್ಲಿನ ಕೊರತೆಯೇ ಇದಕ್ಕೆ ಕಾರಣ" ಎಂದಿದ್ದಾರೆ ಬಾಯ್ಕಾಟ್.

ಇನ್ನು ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ 15 ಸದಸ್ಯರ ಬಳಗವನ್ನು ಬುಧವಾರ ಪ್ರಕಟಿಸಲಾಗಿದೆ. ಕೆಲ ಪ್ರಮುಖ ಬದಲಾವಣೆಯೊಂದಿಗೆ ಈ ತಂಡ ಪ್ರಕಟವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿದ ಡಾಮ್ ಸಿಬ್ಲಿ ಹಾಗೂ ಜಾಕ್ ಕ್ರಾವ್ಲೆ ಈ ಔಟ್ ಆಗಿದ್ದಾರೆ.
3ನೇ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಯಾಗಿರುವ ಇಂಗ್ಲೆಂಡ್ ತಂಡ ಹೀಗಿದೆ: ಜೋ ರೂಟ್ (ನಾಯಕ), ಮೊಯೀನ್ ಅಲಿ, ಡೇವಿಡ್ ಮಲನ್, ಜಾನಿ ಬೈರ್‌ಸ್ಟೊವ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರನ್, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಸಾಕಿಬ್ ಮಹಮೂದ್, ಜೇಮ್ಸ್ ಆಂಡರ್ಸನ್, ಕ್ರೇಗ್ ಓವರ್‌ಟನ್, ಓಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್

Story first published: Friday, August 20, 2021, 0:36 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X