ಸೂರ್ಯಕುಮಾರ್ ರೀತಿ ಕನಸಿನಲ್ಲೂ ನನ್ನಿಂದ ಆಡಲು ಅಸಾಧ್ಯ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ

ಟೀಮ್ ಇಂಡಿಯಾದ ಆಟಗಾರ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಪರವಾಗಿ ನೀಡುತ್ತಿರುವ ಅದ್ಭುತ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಶ್ವಕಪ್‌ನಲ್ಲಿಯೂ ಸೂರ್ಯಕುಮಾರ್ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಭಾರತದ ಮಧ್ಯಮ ಕ್ರಮಾಂಕದ ಈ ಆಟಗಾರನ ಪ್ರದರ್ಶನಕ್ಕೆ ಎದುರಾಳಿ ತಂಡದ ಆಟಗಾರರು ಕೂಡ ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾಗಿಯಾಗಿರುವ ಸೂರ್ಯಕುಮಾರ್ ಯಾದವ್ ಬಗ್ಗೆ ಕಿವಿಸ್ ತಂಡದ ಪ್ರತಿಭಾನ್ವಿತ ಆಟಗಾರ ಗ್ಲೆನ್ ಫಿಲಿಪ್ಸ್ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಭಾನುವಾರ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿತ್ತು. ಎರಡನೇ ಪಂದ್ಯ ಮೌಂಟ್ ಮೌಂಗುನ್ಯೂಯಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಗ್ಲೆನ್ ಫಿಲಿಪ್ಸ್ ಭಾರತೀಯ ಆಟಗಾರನ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

IND vs NZ: ಕಿವೀಸ್ ವಿರುದ್ಧ ಭಾರತದ ಟಿ20 ತಂಡದ ಬಗ್ಗೆ ಜಾಂಟಿ ರೋಡ್ಸ್ ದೊಡ್ಡ ಹೇಳಿಕೆIND vs NZ: ಕಿವೀಸ್ ವಿರುದ್ಧ ಭಾರತದ ಟಿ20 ತಂಡದ ಬಗ್ಗೆ ಜಾಂಟಿ ರೋಡ್ಸ್ ದೊಡ್ಡ ಹೇಳಿಕೆ

ಸೂರ್ಯಕುಮಾರ್ ಅವರು ಆಡುವ ಕೆಲ ವಿಭಿನ್ನ ಶಾಟ್‌ಗಳನ್ನು ತಾನು ಕನಸಿನಲ್ಲಿಯೂ ಯೋಚಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿದ್ದಾರೆ ಗ್ಲೆನ್ ಫಿಲಿಪ್ಸ್. "ಆತನೋರ್ವ ವಿಶೇಷ ಆಟಗಾರ. ಆತ ಬಾರಿಸಿರುವ ಕೆಲ ಹೊಡೆತಗಳನ್ನು ನಾನು ಕನಸು ಕಾಣಲೂ ಸಾಧ್ಯವಿಲ್ಲ. ಅಂಥಾ ಶಾಟ್‌ಗಳನ್ನು ಪ್ರಯತ್ನಿಸಲು ನನಗೆ ಇಷ್ಟ. ಆದರೆ ನಮಗೆ ಅದು ಬಹಳ ಭಿನ್ನವಾಗಿರುತ್ತದೆ. ಊಹಿಸಲೂ ಸಾಧ್ಯವಿಲ್ಲದಂತಾ ಸ್ಥಳದಿಂದ ಚೆಂಡನ್ನು ಆ ರೀತಿಯಾಗಿ ಬಾರಿಸಲು ಮೊಣಕೈಯಲ್ಲಿ ವಿಶೇಷ ಶಕ್ತಿ ಬೇಕಾಗುತ್ತದೆ" ಎಂದಿದ್ದಾರೆ ಗ್ಲೆನ್ ಫಿಲಿಪ್ಸ್.

ಸೂರ್ಯಕುಮಾರ್ ಯಾದವ್ 2022ರ ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದು ಪ್ರಸ್ತುತ ನಂಬರ್1 ಬ್ಯಾಟರ್ ಆಗಿದ್ದಾರೆ. ಈ ವರ್ಷ 43ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವ ಸೂರ್ಯಕುಮಾರ್ ಯಾದವ್ 186ರ ಅಮೋಘ ಸ್ಟ್ರೈಕ್ ರೇಟ್‌ನೊಂದಿಗೆ 1040 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಫಿಲಿಪ್ಸ್ ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದು 158ರ ಸ್ಟ್ರೈಕ್‌ರೇಟ್‌ನಲ್ಲಿ 650 ರನ್ ಗಳಿಸಿದ್ದಾರೆ.

ಇಷ್ಟೊಂದು ಬ್ರೇಕ್‌ನ ಅಗತ್ಯವೇನಿದೆ?: ಕೋಚ್ ರಾಹುಲ್ ದ್ರಾವಿಡ್ ನಿಲುವಿಗೆ ರವಿ ಶಾಸ್ತ್ರಿ ಕಿಡಿಇಷ್ಟೊಂದು ಬ್ರೇಕ್‌ನ ಅಗತ್ಯವೇನಿದೆ?: ಕೋಚ್ ರಾಹುಲ್ ದ್ರಾವಿಡ್ ನಿಲುವಿಗೆ ರವಿ ಶಾಸ್ತ್ರಿ ಕಿಡಿ

ನ್ಯೂಜಿಲೆಂಡ್ ಸ್ಕ್ವಾಡ್ ಹೀಗಿದೆ: ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಲಾಕ್ ಫರ್ಗುಸನ್, ಬ್ಲೇರ್ ಟಿಕ್ನರ್, ಮೈಕೆಲ್ ಬ್ರೇಸ್‌ವೆಲ್, ಇಶ್ ಸೋಧಿ

ಭಾರತ ಸ್ಕ್ವಾಡ್: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್

For Quick Alerts
ALLOW NOTIFICATIONS
For Daily Alerts
Story first published: Saturday, November 19, 2022, 23:31 [IST]
Other articles published on Nov 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X