ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌'

Yuvraj Singh hits 22-ball 51

ಟೊರಾಂಟೊ, ಆಗಸ್ಟ್‌ 04: ಅಂತಾರಾಷ್ಟ್ರೀಯ ಮತ್ತು ಐಪಿಎಲ್‌ ಕ್ರಿಕೆಟ್‌ಗೆ ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ನಿವೃತ್ತಿ ಘೋಷಿಸಿರಬಹುದು. ಆದರೆ, ಅವರ ಬ್ಯಾಟ್‌ನಿಂದ ಹೊರಬರುವ ಸಿಕ್ಸರ್‌ಗಳು ಮಾತ್ರ ಇನ್ನೂ ನಿಂತಿಲ್ಲ.

ಭಾರತಕ್ಕೆ ಎರಡು ವಿಶ್ವಕಪ್‌ ಗೆದ್ದುಕೊಡುವುದರಲ್ಲಿ ಮಹತ್ವದ ಪಾತ್ರ ವಹಿಸಿರುವ ಪಂಜಾಬ್‌ನ ತಾರೆ ಯುವರಾಜ್‌ ಸಿಂಗ್‌, ಇದೀಗ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಟೊರಾಂಟೊ ನ್ಯಾಷನಲ್ಸ್‌ ಪರ ಆಡುತ್ತಿದ್ದಾರೆ. ಟೊರಾಂಟೊ ತಂಡದ ನಾಯಕತ್ವವನ್ನೂ ಪಡೆದಿರುವ ಯುವರಾಜ್‌, ಬ್ಯಾಟಿಂಗ್‌ನಲ್ಲೂ ಅಬ್ಬರಿಸಿ ತಂಡದ ಪರ ಗರಿಷ್ಠ ರನ್‌ ಸ್ಕೋರರ್‌ ಎನಿಸಿದ್ದಾರೆ.

ಖಾಲಿ ಜೇಬಿಂದ ಇಂಗ್ಲೆಂಡ್‌ ಪ್ರೇಕ್ಷಕರ ಮನ ಗೆದ್ದ ಡೇವಿಡ್‌ ವಾರ್ನರ್‌!ಖಾಲಿ ಜೇಬಿಂದ ಇಂಗ್ಲೆಂಡ್‌ ಪ್ರೇಕ್ಷಕರ ಮನ ಗೆದ್ದ ಡೇವಿಡ್‌ ವಾರ್ನರ್‌!

37 ವರ್ಷದ ಅನುಭವಿ ಆಟಗಾರ ಟೊರಾಂಟೊ ತಂಡದ ಪರ ಆಡಿದ ಮೊದಲ ಪಂದ್ಯದಲ್ಲಿ ಔಟ್‌ ಆಗದೇ ಇದ್ದರೂ ಪೆವಿಲಿಯನ್‌ ಸೇರಿ ನಿರಾಸೆ ಅನುಭವಿಸಿದ್ದರು. ಆದರೆ, ನಂತರ ಮೂರು ಪಂದ್ಯಗಳಲ್ಲಿ ಯುವರಾಜ್‌ ತಮ್ಮ ವಿಶ್ವರೂಪ ಅನಾವರಣ ಪಡಿಸಿದ್ದಾರೆ. ಅದರಲ್ಲೂ ಶನಿವಾರ ನಡೆದ ಬ್ರಾಂಪ್ಟನ್‌ ವೋಲ್ವ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 51 ರನ್‌ಗಳನ್ನು ಚೆಚ್ಚಿದ್ದಾರೆ. ಅವರ ಈ ಇನಿಂಗ್ಸ್‌ನಲ್ಲಿ 5 ಮನಮೋಹಕ ಸಿಕ್ಸರ್‌ಗಳು ಮೂಡಿಬಂದಿದ್ದವು. ಈ ಮೂಲಕ ಯುವರಾಜ್‌ ಸಿಂಗ್‌ ಸಿಕ್ಸರ್‌ ಕಿಂಗ್‌ ತಾವೇ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ದಿಲ್ಲಿ ಎಕ್ಸ್‌ಪ್ರೆಸ್‌ ನವದೀಪ್‌ ಸೈನಿ ಬಗ್ಗೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?ದಿಲ್ಲಿ ಎಕ್ಸ್‌ಪ್ರೆಸ್‌ ನವದೀಪ್‌ ಸೈನಿ ಬಗ್ಗೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬ್ರಾಂಪ್ಟನ್‌ ವೋಲ್ವ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಳಲ್ಲಿ 6 ವಿಕೆಟ್‌ಗೆ 222 ರನ್‌ಗಳ ಬೃಹತ್‌ ಮೊತ್ತವನ್ನು ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಟೊರಾಂಟೊ ನ್ಯಾಷನಲ್ಸ್‌ ತಂಡ 7 ಓವರ್‌ಗಳಲ್ಲಿ 75 ರನ್‌ಗಳನ್ನು ಗಳಿಸಿದ್ದಾ ಯುವರಾಜ್‌ ಬ್ಯಾಟಿಂಗ್‌ಗೆ ಇಳಿದರು. ನಂತರದ ಓವರ್‌ನ ಮೊದಲ ಎಸೆತದಲ್ಲೇ ಟೊರಾಂಟೊ ನ್ಯಾಷನಲ್ಸ್‌ ತಂಡ ಮೊಯ್ಸೆಸ್‌ ಹೆನ್ರಿಕ್ಸ್‌ ಅವರ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.

ಸೈನಿ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ನಾಚಿಕೆಯಾಗಬೇಕು: ಗಂಭೀರ್‌ಸೈನಿ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ನಾಚಿಕೆಯಾಗಬೇಕು: ಗಂಭೀರ್‌

ಈ ಸಂದರ್ಭದಲ್ಲಿ ಬ್ರಾಂಪ್ಟನ್‌ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ, ಯುವರಾಜ್‌ ತಾವು ಕ್ರೀಸ್‌ನಲ್ಲಿ ಇರುವವರೆಗೂ ಸೋಲುವ ಮಾತೇ ಇಲ್ಲ ಎಂಬಂತೆ ಬ್ಯಾಟ್‌ ಬೀಸುವ ಮೂಲಕ ಹೆನ್ರಿಚ್‌ ಕ್ಲಾಸನ್ ಜೊತೆಗೂಡಿ 44 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟವಾಡಿದರು. ಈ ಸಂದರ್ಭದಲ್ಲಿ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿಯೂ ಮಿಂಚಿದರು. ಪರಿಣಾಮ ಟೊರಾಂಟೊ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 211 ರನ್‌ಗಳನ್ನು ಗಳಿಸಿ 11 ರನ್‌ಗಳ ವೀರೋಚಿತ ಸೋಲುಂಡಿತ್ತು.

ಟೀಮ್‌ ಇಂಡಿಯಾ ವಿರುದ್ಧ ಮುಗ್ಗರಿಸಿದ ಬಳಿಕ ವಿಂಡೀಸ್‌ ನಾಯಕ ಹೇಳಿದ್ದಿದುಟೀಮ್‌ ಇಂಡಿಯಾ ವಿರುದ್ಧ ಮುಗ್ಗರಿಸಿದ ಬಳಿಕ ವಿಂಡೀಸ್‌ ನಾಯಕ ಹೇಳಿದ್ದಿದು

ಇದಕ್ಕೂ ಹಿಂದಿನ ಪಂದ್ಯಗಳಲ್ಲೂ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ಯುವಿ, 21 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌) ಮತ್ತು 26 ಎಸೆತಗಳಲ್ಲಿ 45 ರನ್‌ (2 ಸಿಕ್ಸರ್‌)ಗಳ ಅಮೋಘ ಇನಿಂಗ್ಸ್‌ ಆಡುವ ಮೂಲಕ ಕೆನಡಾದ ಕ್ರಿಕೆಟ್‌ ಪ್ರಿಯರಿಗೆ ಸ್ಫೋಟಕ ಬ್ಯಾಟಿಂಗ್‌ನ ರಸದೌತಣ ಬಡಿಸಿದ್ದರು. ಇದೇ ವೇಳೆ ಯುವರಾಜ್‌ ಅವರ ಭರ್ಜರಿ ಬ್ಯಾಟಿಂಗ್‌ಗೆ ಟ್ವಿಟರ್‌ನಲ್ಲಿ ಪ್ರಸಂಶೆಗಳ ಮಹಾಪೂರವೇ ಹರಿದು ಬಂದಿದೆ.

Story first published: Sunday, August 4, 2019, 19:50 [IST]
Other articles published on Aug 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X