ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಪಾಂಡ್ಯ-ಮ್ಯಾಕ್ಸ್‌ವೆಲ್‌ ನಡುವೆ ಈತನೇ ಉತ್ತಮ ಆಲ್‌ರೌಂಡರ್ ಎಂದ ರಿಕಿ ಪಾಂಟಿಂಗ್

Hardik Pandya vs Maxwell : Ricky Ponting Named This Cricketer As Best All Rounder In T20 World Cup

ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ತಮ್ಮ ಪುನರಾಗಮನ ಮಾಡಿದ ರೀತಿಗಾಗಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಶ್ಲಾಘಿಸಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ ನಂತರ ಹಾರ್ದಿಕ್ ಪಾಂಡ್ಯ ತಮ್ಮ ಫಿಟ್ನೆಸ್ ಮತ್ತು ಆಟವನ್ನು ಉತ್ತಮಪಡಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು.

IND Vs SA ODI: ಹರಿಣಗಳ ವಿರುದ್ಧ ಏಕದಿನ ಪಂದ್ಯದಲ್ಲಿ ಭಾರತ ಕೊನೆಯ ಬಾರಿಗೆ ಗೆದ್ದದ್ದು ಯಾವಾಗ ಗೊತ್ತಾ?IND Vs SA ODI: ಹರಿಣಗಳ ವಿರುದ್ಧ ಏಕದಿನ ಪಂದ್ಯದಲ್ಲಿ ಭಾರತ ಕೊನೆಯ ಬಾರಿಗೆ ಗೆದ್ದದ್ದು ಯಾವಾಗ ಗೊತ್ತಾ?

2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದ ರೀತಿ ಶ್ಲಾಘನೀಯ. ತಂಡ ಮೊದಲನೇ ಸೀಸನ್‌ನಲ್ಲೇ ಚಾಂಪಿಯನ್ ಪಟ್ಟಕ್ಕೇರಿಸಿದ ಪಾಂಡ್ಯ ಯಶಸ್ವಿ ನಾಯಕ ಎನಿಸಿಕೊಂಡರು.

ಐಪಿಎಲ್‌ಗೂ ಮುನ್ನ ಸಾಕಷ್ಟು ವಿಶ್ರಾಂತಿ ಪಡೆದಿದ್ದ ಹಾರ್ದಿಕ್ ಪಾಂಡ್ಯ ನಂತರ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವಿಶ್ರಾಂತಿ ಪಡೆದ ನಂತರ ಪಾಂಡ್ಯ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅವರು 140 ಕಿಲೋ ಮೀಟರ್ ಗಿಂತ ವೇಗವಾಗಿ ಬೌಲಿಂಗ್ ಮಾಡಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಐಸಿಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮಾತನಾಡಿದ ರಿಕಿ ಪಾಂಟಿಂಗ್, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಲ್‌ರೌಂಡರ್‌ಗಳ ನಡುವೆ ಯಾರು ಉತ್ತಮ ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಪಾಂಡ್ಯ ಉತ್ತಮ ಆಲ್‌ರೌಂಡರ್ ಎಂದ ಪಾಂಟಿಂಗ್

ಪಾಂಡ್ಯ ಉತ್ತಮ ಆಲ್‌ರೌಂಡರ್ ಎಂದ ಪಾಂಟಿಂಗ್

ಮ್ಯಾಕ್ಸ್‌ವೆಲ್-ಪಾಂಡ್ಯ ಎಂದು ಆಲ್‌ರೌಂಡರ್‍‌ ಗಳ ನಡುವೆ ಹೋಲಿಕೆ ಮಾಡಿದಾಗ ಪಾಂಡ್ಯ ಅಗ್ರಸ್ಥಾನದಲ್ಲಿ ಬರುತ್ತಾರೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

"ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳುಗಳಿಂದ, ನಿರ್ದಿಷ್ಟವಾಗಿ, ಬಹುಶಃ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಆಡುತ್ತಿರುವ ವಿಧಾನವನ್ನು ನೋಡಿದರೆ, ಹಾರ್ದಿಕ್ ಬಹುಶಃ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ ಮತ್ತು ಬ್ಯಾಟಿಂಗ್‌ನಲ್ಲಿ ಕೂಡ ಪಾಂಡ್ಯ ಅತ್ಯುತ್ತಮ ಪ್ರಭಾವ ಬೀರುತ್ತಾರೆ" ಎಂದು ಪಾಂಟಿಂಗ್ ಹೇಳಿದ್ದಾರೆ.

ಭಾರತ ಹೆಚ್ಚು ಪ್ರತಿಭೆಗಳನ್ನು ಹೊಂದಿದೆ, ಒಮ್ಮೆಲೆ 4-5 ತಂಡಗಳನ್ನು ಆಡಿಸಬಹುದು; ದಕ್ಷಿಣ ಆಫ್ರಿಕಾ ಸ್ಪಿನ್ನರ್

ಮ್ಯಾಕ್ಸ್‌ವೆಲ್‌ ಕೂಡ ಉತ್ತಮ ಆಲ್‌ರೌಂಡರ್

ಮ್ಯಾಕ್ಸ್‌ವೆಲ್‌ ಕೂಡ ಉತ್ತಮ ಆಲ್‌ರೌಂಡರ್

ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಲ್‌ರೌಂಡರ್ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ವಾದಯೋಗ್ಯವಾಗಿ ಭಾರತದ ಎಕ್ಸ್-ಫ್ಯಾಕ್ಟರ್ ಆಗಿದ್ದರೆ, ಆಸ್ಟ್ರೇಲಿಯಾವು ಗ್ಲೆನ್ ಮ್ಯಾಕ್ಸ್‌ವೆಲ್‌ನಲ್ಲಿ ತಮ್ಮದೇ ಆದ ಸ್ಫೋಟಕ ಆಲ್‌ರೌಂಡರ್ ಅನ್ನು ಹೊಂದಿದೆ.

ಹಾರ್ದಿಕ್ ಪಾಂಡ್ಯಗೆ ಹೋಲಿಕೆ ಮಾಡಿದರೆ ಮ್ಯಾಕ್ಸ್‌ವೆಲ್ ಕಡಿಮೆ ಎಸೆತಗಳನ್ನು ಎದುರಿಸುತ್ತಾರೆ. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಎಲ್ಲಾ ಪಂದ್ಯಗಳಲ್ಲೂ ಅವರು ಬೌಲಿಂಗ್ ಮಾಡುವುದು ಕಡಿಮೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

 ಇಬ್ಬರ ಪರವಾಗಿ ಪಾಂಟಿಂಗ್ ಬ್ಯಾಟಿಂಗ್

ಇಬ್ಬರ ಪರವಾಗಿ ಪಾಂಟಿಂಗ್ ಬ್ಯಾಟಿಂಗ್

ಆದಾಗ್ಯೂ, ಟಿ 20 ವಿಶ್ವಕಪ್‌ನಲ್ಲಿ ಇಬ್ಬರು ಆಲ್‌ರೌಂಡರ್‌ಗಳ ನಡುವೆ ಯಾರು ಹೆಚ್ಚು ಪ್ರಭಾವ ಬೀರುತ್ತಾರೆ ಎಂದು ಕೇಳಿದಾಗ, ಆಸ್ಟ್ರೇಲಿಯಾದ ಮಾಜಿ ನಾಯಕ ಬ್ಯಾಟಿಂಗ್‌ನಲ್ಲಿ ಮ್ಯಾಕ್ಸ್‌ವೆಲ್‌, ಬೌಲಿಂಗ್‌ನಲ್ಲಿ ಪಾಂಡ್ಯ ಮಿಂಚಲಿದ್ದಾರೆ ಎಂದು ಹೇಳಿದ್ದಾರೆ.

"ಮ್ಯಾಕ್ಸ್‌ವೆಲ್ ಟಿ20 ಕ್ರಿಕೆಟ್‌ನಲ್ಲಿ ಸಾಕಷ್ಟು ಕಡಿಮೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ, ಮ್ಯಾಕ್ಸ್‌ವೆಲ್ ಹಾರ್ದಿಕ್‌ಗಿಂತ ಹೆಚ್ಚು ರನ್ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಮತ್ತು ಹಾರ್ದಿಕ್ ಮ್ಯಾಕ್ಸ್‌ವೆಲ್‌ಗಿಂತ ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಾನೆ ಎಂದು ನಾನು ಭಾವಿಸುತ್ತೇನೆ." ಎಂದು ರಿಕಿಪಾಂಟಿಂಗ್ ಹೇಳಿದ್ದಾರೆ.

ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಪಾಂಡ್ಯ

ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಪಾಂಡ್ಯ

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತ ತಂಡಕ್ಕೆ ವಾಪಸಾದ ಪಾಂಡ್ಯ ಈಗ ಪ್ರಮುಖ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ದ ಗೆಲುವಿನ ಇನ್ನಿಂಗ್‌ ಆಡಿದ್ದ ಪಾಂಡ್ಯ, ಬೌಲಿಂಗ್‌ನಲ್ಲೂ ಮಿಂಚಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಕೂಡ ಪಾಂಡ್ಯ ಮಿಂಚು ಹರಿಸಿದ್ದರು. ಸ್ಫೋಟಕ್ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ ಗಳನ್ನು ಕಂಗೆಡಿಸುವ ಪಾಂಡ್ಯ, ತಮ್ಮ ವೇಗದ ಬೌಲಿಂಗ್‌ನಲ್ಲಿ ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಂಡ್ಯ ಮೇಲೆ ಟೀಂ ಇಂಡಿಯಾ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.

Story first published: Saturday, October 8, 2022, 21:46 [IST]
Other articles published on Oct 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X