ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಹ್ಯಾರಿಸ್ ರೌಫ್‌ಗೆ ಕನಸಲ್ಲೂ ಕಾಡುತ್ತಿದೆ ವಿರಾಟ್ ಕೊಹ್ಲಿಯ ಆ 2 ಸಿಕ್ಸರ್‌ಗಳು!

Haris Rauf Opens Up About 2 Sixes By Virat Kohli In Pak vs Ind T20 World Cup Match

2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ 10 ವಿಕೆಟ್‌ಗಳಿಂದ ಸೋಲಿಸಿದ ನಂತರ ಟೀಂ ಇಂಡಿಯಾದ ಐಸಿಸಿ ಟ್ರೋಫಿ ಎತ್ತುವ ದಶಕದ ಕನಸು ಮತ್ತೆ ಕನಸಾಗಿಯೇ ಉಳಿಯಿತು.

ಇಡೀ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತಮ್ಮ ಐದು ಸೂಪರ್-12 ಹಂತದ ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಗಳಿಸುವ ಮೂಲಕ ಅದ್ಭುತ ಫಾರ್ಮ್‌ನಲ್ಲಿತ್ತು. ಆದರೆ ಸೆಮಿಫೈನಲ್‌ನಲ್ಲಿ ಸೋತು ಹೊರಬಿತ್ತು.

IND vs SL 1st ODI: ಶ್ರೀಲಂಕಾ ವಿರುದ್ಧ ಮೊದಲ ಪಂದ್ಯಕ್ಕೆ ಭಾರತದ ಬಲಿಷ್ಠ ಸಂಭಾವ್ಯ ಆಡುವ 11ರ ಬಳಗ

ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ದಾಖಲಿಸುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿತು. 160 ರನ್‌ಗಳನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 31 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ವಿರಾಟ್ ಕೊಹ್ಲಿ ತಂಡದ ರಕ್ಷಣೆಗೆ ಬಂದರು ಮತ್ತು 53 ಎಸೆತಗಳಲ್ಲಿ 82 ರನ್ ಗಳಿಸಿ ರೋಮಾಂಚಕ ಗೆಲುವು ಒದಗಿಸಿದರು.

ಎರಡು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳನ್ನು ಹೊಡೆದ ವಿರಾಟ್ ಕೊಹ್ಲಿ

ಎರಡು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳನ್ನು ಹೊಡೆದ ವಿರಾಟ್ ಕೊಹ್ಲಿ

ಚೇಸಿಂಗ್ ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ಹ್ಯಾರಿಸ್ ರೌಫ್ ಎಸೆದ 19ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳನ್ನು ಹೊಡೆದರು. ವಿರಾಟ್ ಕೊಹ್ಲಿ ನೇರವಾಗಿ ಸಿಕ್ಸರ್‌ಗೆ ಬಾರಿಸಿದ ಆ ಶಾಟ್ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಎನಿಸಿತು ಮತ್ತು ಭಾರೀ ಚರ್ಚೆಯಾಯಿತು. ಇದೇ ವೇಳೆ ಅಭಿಮಾನಿಗಳು ಮತ್ತು ಅನೇಕ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿಯ ಫಿಟ್ನೆಸ್‌ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಆದರೆ, ಪಾಕಿಸ್ತಾನದ ಜನಪ್ರಿಯ ಕಾರ್ಯಕ್ರಮ 'ಹಸ್ನಾ ಮನ ಹೈ' ಶೋ ನಲ್ಲಿ ಅಭಿಮಾನಿಯೊಬ್ಬರು ಆ ಸಿಕ್ಸರ್ ಬಗ್ಗೆ ಕೇಳಿದಾಗ, ಪಾಕ್ ವೇಗದ ಬೌಲರ್ ಹ್ಯಾರಿಸ್ ರೌಫ್ ಉತ್ತರಿಸಿ, ಕ್ರಿಕೆಟ್‌ನಲ್ಲಿ ಇಂತಹ ಹೊಡೆತಗಳು ಅಪರೂಪದ ಸಂಗತಿ ಮತ್ತು ವಿರಾಟ್ ಕೊಹ್ಲಿಗೆ ಮತ್ತೆ ಆ ಶಾಟ್ ಅನ್ನು ಆಡಲು ಸಾಧ್ಯವಿಲ್ಲ ಎಂದು ಹೇಳಿದರು.

ಆತನಿಂದಲೂ ಅದನ್ನು ಮತ್ತೆ ಆಡಬಹುದೆಂದು ನಾನು ಭಾವಿಸುವುದಿಲ್ಲ

ಆತನಿಂದಲೂ ಅದನ್ನು ಮತ್ತೆ ಆಡಬಹುದೆಂದು ನಾನು ಭಾವಿಸುವುದಿಲ್ಲ

"ಸಹಜವಾಗಿ ಐದನೇ ಬಾಲ್ ನೇರವಾಗಿ ಸಿಕ್ಸರ್‌ಗೆ ಹೋದಾಗ ಅದು ನೋವುಂಟು ಮಾಡಿತು. ನಾನು ಏನನ್ನೂ ಹೇಳಲಿಲ್ಲ, ಆದರೆ ವೈಯಕ್ತಿಕವಾಗಿ ನನಗೆ ನೋವಾಯಿತು. ಉತ್ತಮ ಬಾಲ್ ಅನ್ನು ಹೇಗೆ ಸಿಕ್ಸರ್‌ಗೆ ಬಾರಿಸಿದ ಎಂದುಕೊಂಡೆ, ಏನೋ ತಪ್ಪಾಗಿದೆ ಎಂದು ನಾನು ಭಾವಿಸಿದೆ. ಕ್ರಿಕೆಟ್ ತಿಳಿದಿರುವ ಯಾರಿಗಾದರೂ ವಿರಾಟ್ ಕೊಹ್ಲಿ ಎಂತಹ ಆಟಗಾರ ಎಂದು ತಿಳಿದಿರುತ್ತಾರೆ".

"ವಿರಾಟ್ ಕೊಹ್ಲಿ ಅಂದು ಆ ಶಾಟ್ ಅನ್ನು ಆಡಿದ್ದಾನೆ. ಆದರೆ ಈಗ ಆತನಿಂದಲೂ ಆ ರೀತಿ ಮತ್ತೆ ಆಡಬಹುದೆಂದು ನಾನು ಭಾವಿಸುವುದಿಲ್ಲ. ಅಂತಹ ಹೊಡೆತಗಳು ತುಂಬಾ ಅಪರೂಪ, ನೀವು ಅವುಗಳನ್ನು ಮತ್ತೆ ಮತ್ತೆ ಹೊಡೆಯಲು ಸಾಧ್ಯವಿಲ್ಲ. ಅವರ ಸಮಯವು ಪರಿಪೂರ್ಣವಾಗಿತ್ತು ಮತ್ತು ಅದು ಸಿಕ್ಸರ್‌ಗೆ ಹೋಯಿತು," ಎಂದು ಹ್ಯಾರಿಸ್ ರೌಫ್ ತಿಳಿಸಿದರು.

2-1 ಅಂತರದಿಂದ ಸರಣಿ ಗೆದ್ದ ಆತಿಥೇಯ ಭಾರತ

2-1 ಅಂತರದಿಂದ ಸರಣಿ ಗೆದ್ದ ಆತಿಥೇಯ ಭಾರತ

34 ವರ್ಷದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದರು ಮತ್ತು ಆತಿಥೇಯ ಭಾರತ 2-1 ಅಂತರದಿಂದ ಸರಣಿ ಗೆದ್ದರು.

ಮಂಗಳವಾರ, ಜನವರಿ 10ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತೆ ಮೈದಾನಕ್ಕೆ ಮರಳಲಿದ್ದಾರೆ.

Story first published: Monday, January 9, 2023, 15:49 [IST]
Other articles published on Jan 9, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X