ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL 1st ODI: ಶ್ರೀಲಂಕಾ ವಿರುದ್ಧ ಮೊದಲ ಪಂದ್ಯಕ್ಕೆ ಭಾರತದ ಬಲಿಷ್ಠ ಸಂಭಾವ್ಯ ಆಡುವ 11ರ ಬಳಗ

IND vs SL: Indias Strongest Probable Playing XI For 1st ODI Match Against Sri Lanka

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮುಗಿದ ನಂತರ, ಇದೀಗ ಎಲ್ಲರ ಕಣ್ಣುಗಳು ಮೂರು ಪಂದ್ಯಗಳ ಏಕದಿನ ಸರಣಿಯ ಮೇಲೆ ನೆಟ್ಟಿವೆ.

ಇದೇ 2023ರಲ್ಲಿ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್‌ಗೆ ಪೂರ್ಣ ಆತಿಥ್ಯ ವಹಿಸಲು ಭಾರತ ತಂಡ ಸಜ್ಜಾಗಿರುವುದರಿಂದ, ಈಗ ಗಮನವು 50 ಓವರ್‌ಗಳ ಸ್ವರೂಪದತ್ತ ಹರಿಯುತ್ತಿದೆ.

ಗಾಯದಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ ಅವರು ಶ್ರೀಲಂಕಾ ತಂಡದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡವನ್ನು ಮುನ್ನಡೆಸಲು ಆಟಕ್ಕೆ ಮರಳಲಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದ ನಂತರ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಆರು ತಿಂಗಳ ನಂತರ ವೇಗಿ ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಹಿಂದಿರುಗಲಿದ್ದಾರೆ.

IND vs SL: ತಮ್ಮ 3ನೇ ಟಿ20 ಶತಕದೊಂದಿಗೆ ಸೂರ್ಯಕುಮಾರ್ ಯಾದವ್ ಸ್ಥಾಪಿಸಿದ ದಾಖಲೆಗಳಿವುIND vs SL: ತಮ್ಮ 3ನೇ ಟಿ20 ಶತಕದೊಂದಿಗೆ ಸೂರ್ಯಕುಮಾರ್ ಯಾದವ್ ಸ್ಥಾಪಿಸಿದ ದಾಖಲೆಗಳಿವು

ಮೊದಲ ಏಕದಿನ ಪಂದ್ಯ ಜನವರಿ 10ರಂದು ಗುವಾಹಟಿಯಲ್ಲಿ ನಡೆಯಲಿದ್ದರೆ, ಎರಡು ಮತ್ತು ಮೂರನೇ ಪಂದ್ಯಗಳು ಜನವರಿ 12 ಮತ್ತು 15ರಂದು ಕೋಲ್ಕತ್ತಾ ಮತ್ತು ತಿರುವನಂತಪುರದಲ್ಲಿ ನಡೆಯಲಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ಆಡುವ 11ರ ಬಳಗ ಹೇಗಿರಲಿದೆ?

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ಆಡುವ 11ರ ಬಳಗ ಹೇಗಿರಲಿದೆ?

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅವರು ಭಾರತ ತಂಡದ ಇನ್ನಿಂಗ್ಸ್ ತೆರೆಯಲಿದ್ದಾರೆ. ಇನ್ನು ಶಿಖರ್ ಧವನ್ ಅವರನ್ನು ತಂಡದಿಂದ ಕೈಬಿಡುವುದರೊಂದಿಗೆ, ಶುಭಮನ್ ಗಿಲ್ ಅಥವಾ ಇಶಾನ್ ಕಿಶನ್ ನಡುವೆ ಇನ್ನಿಂಗ್ಸ್ ಆರಂಭಿಸುವ ಸ್ಪರ್ಧೆಯಲ್ಲಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಪ್ರದರ್ಶನವನ್ನು ಪರಿಗಣಿಸಿ ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಕಿಶನ್ ಅವರು ಭಾರತದ ಇನ್ನಿಂಗ್ಸ್ ಆರಂಭಿಸುವುದರ ಜೊತೆಗೆ ವಿಕೆಟ್‌ ಕೀಪಿಂಗ್ ಗ್ಲೌಸ್ ಧರಿಸುವ ಸಾಧ್ಯತೆಯಿದೆ.

ಸೂರ್ಯಕುಮಾರ್ ನಂ.5, ಹಾರ್ದಿಕ್ ಪಾಂಡ್ಯ ನಂ.6

ಸೂರ್ಯಕುಮಾರ್ ನಂ.5, ಹಾರ್ದಿಕ್ ಪಾಂಡ್ಯ ನಂ.6

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದೇ ರೀತಿ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ.

ಇತ್ತೀಚಿಗೆ 50 ಓವರ್‌ಗಳ ಸ್ವರೂಪದಲ್ಲಿ ಯುವ ಆಟಗಾರ ಶ್ರೇಯಸ್ ಅಯ್ಯರ್ ಭಾರತದ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ ಮತ್ತು ಅವರು ಆ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದೆ ವೇಳೆ ಸೂರ್ಯಕುಮಾರ್ ಯಾದವ್ ನಂ.5ರಲ್ಲಿ ಬ್ಯಾಟಿಂಗ್‌ಗೆ ಇಳಿದರೆ, ಹಾರ್ದಿಕ್ ಪಾಂಡ್ಯ ನಂ.6 ರಲ್ಲಿ ಬ್ಯಾಟ್ ಮಾಡುವ ನಿರೀಕ್ಷೆಯಿದೆ. ಹಾರ್ದಿಕ್ ಪಾಂಡ್ಯ ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಅಕ್ಷರ್ ಪಟೇಲ್ 7ನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತಾರೆ

ಅಕ್ಷರ್ ಪಟೇಲ್ 7ನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತಾರೆ

ಟಿ20 ಸರಣಿಯಲ್ಲಿನ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಿ ಅಕ್ಷರ್ ಪಟೇಲ್ ಅವರು ವಾಷಿಂಗ್ಟನ್ ಸುಂದರ್ ಅವರಿಗಿಂತ ಮುನ್ನ 7ನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಕುಲದೀಪ್ ಯಾದವ್ ಕೂಡ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಆಡುವ ಸಾಧ್ಯತೆಯಿದೆ. ಅವರು ಏಕದಿನ ಪಂದ್ಯಗಳಲ್ಲಿ ಯೋಗ್ಯ ಫಾರ್ಮ್‌ನಲ್ಲಿದ್ದಾರೆ ಮತ್ತು ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.

ಎಲ್ಲಾ ಮೂರು ಸ್ವರೂಪಗಳಲ್ಲಿ ಬಾಲ್‌ನೊಂದಿಗೆ ಅಸಾಧಾರಣವಾಗಿರುವ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ಅವರು ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ 11ರ ಬಳಗ

ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ 11ರ ಬಳಗ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್.

Story first published: Monday, January 9, 2023, 1:45 [IST]
Other articles published on Jan 9, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X