ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಈ ಆಟಗಾರನಿಗೆ ಭಾರಿ ಬೇಡಿಕೆ ಇರುತ್ತದೆ ಎಂದ ಪ್ಯಾಟ್ ಕಮಿನ್ಸ್

Huge Demand For Cameron Green in IPL and Other League : Pat Cummins

ಇತ್ತೀಚೆಗೆ ಮುಕ್ತಾಯವಾದ ಭಾರತದ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯಾ ಎರಡು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಸರಣಿಯಲ್ಲಿ ಸೋತರೂ ಕೂಡ, ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಆಟಗಾರ ಕ್ಯಾಮರೂನ್ ಗ್ರೀನ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

T20 World Cup: ಬಹುಮಾನದ ಮೊತ್ತ ಘೋಷಣೆ ಮಾಡಿದ ಐಸಿಸಿ, ಕಪ್ ಗೆದ್ದ ತಂಡಕ್ಕೆ ಸಿಗುವ ಹಣ ಎಷ್ಟು ಗೊತ್ತಾ?T20 World Cup: ಬಹುಮಾನದ ಮೊತ್ತ ಘೋಷಣೆ ಮಾಡಿದ ಐಸಿಸಿ, ಕಪ್ ಗೆದ್ದ ತಂಡಕ್ಕೆ ಸಿಗುವ ಹಣ ಎಷ್ಟು ಗೊತ್ತಾ?

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆತನನ್ನು ಸೇರಿಸಿಕೊಳ್ಳಬೇಕು ಎಂದು ಹಲವು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಅಲ್ಲದೆ, ಮುಂಬರುವ ಐಪಿಎಲ್‌ನಲ್ಲಿ ಕ್ಯಾಮರೂನ್ ಗ್ರೀನ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಈತನನ್ನು ಖರೀದಿ ಮಾಡಲು ಹಲವು ತಂಡಗಳು ಪೈಪೋಟಿ ನಡೆಸುವುದರಿಂದ ದಾಖಲೆಯ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದೆಲ್ಲದರ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕ್ಯಾಮರೂನ್ ಗ್ರೀನ್ ಲೀಗ್‌ಗಳಲ್ಲಿ ಆಡುವ ಬಗ್ಗೆ ಮಾತನಾಡಿದ್ದಾರೆ. ವಿಶ್ವದ ಹಲವು ಲೀಗ್‌ಗಳಲ್ಲಿ ಆತ ಎಲ್ಲಿ ಆಡಿದರೂ ಭಾರಿ ಬೇಡಿಕೆಯ ಆಟಗಾರನಾಗಲಿದ್ದಾರೆ ಎಂದು ಕಮಿನ್ಸ್ ಒಪ್ಪಿಕೊಂಡಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಅವರು ದೊಡ್ಡ ಮೊತ್ತಕ್ಕೆ ಹರಾಜಾಗಬಹುದೆಂದು ಪರೋಕ್ಷವಾಗಿ ಸೂಚಿಸಿದ್ದಾರೆ.

ವಾರ್ನರ್ ಅನುಪಸ್ಥಿತಿ ಕೊರತೆ ನೀಗಿಸಿದ ಗ್ರೀನ್

ವಾರ್ನರ್ ಅನುಪಸ್ಥಿತಿ ಕೊರತೆ ನೀಗಿಸಿದ ಗ್ರೀನ್

ಭಾರತದ ವಿರುದ್ಧದ ಸರಣಿಯಿಂದ ಆಸ್ಟ್ರೇಲಿಯಾ ಹಿರಿಯ ಆಟಗಾರ ಡೇವಿಡ್ ವಾರ್ನರ್ ವಿಶ್ರಾಂತಿ ಪಡೆದಿದ್ದರು. ವಾರ್ನರ್ ಅನುಪಸ್ಥಿತಿಯಲ್ಲಿ ನಾಯಕ ಆರೊನ್ ಫಿಂಚ್ ಜೊತೆ ಇನ್ನಿಂಗ್ಸ್ ಆರಂಭಿಸಿದ 23 ವರ್ಷದ ಕ್ಯಾಮರೂನ್ ಗ್ರೀನ್ ಸ್ಟಾರ್ ಆಟಗಾರನಾಗಿ ಹೊರ ಹೊಮ್ಮಿದರು. ಸರಣಿಯ ಮೊದಲನೇ ಪಂದ್ಯದಲ್ಲೇ 30 ಎಸೆತಗಳಲ್ಲಿ 61 ರನ್ ಗಳಿಸಿ ಮಿಂಚಿದರು. ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 209 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಪಂದ್ಯವನ್ನು ಗೆದ್ದಿತ್ತು.

ನಂತರ ಸರಣಿಯ ಮೂರನೇ ಪಂದ್ಯದಲ್ಲಿ ಭಾರತದ ಬೌಲರ್ ಗಳನ್ನು ಕಾಡಿದ ಗ್ರೀನ್ ಭಾರತದ ವಿರುದ್ಧ ವೇಗವಾದ ಅರ್ಧಶತಕ ದಾಖಲಿಸಿದರು. 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರು ಅಂತಿಮವಾಗಿ 21 ಬಾಲ್‌ಗಳಲ್ಲಿ 52 ರನ್ ಗಳಿಸಿದರು.

ಇರಾನಿ ಕಪ್ 2022: ಸೌರಾಷ್ಟ್ರ ತಂಡಕ್ಕೆ ಪೂಜಾರ ಆಯ್ಕೆ, ಜಯದೇವ್ ಉನಾದ್ಕಟ್‌ಗೆ ನಾಯಕತ್ವ, ಸಂಪೂರ್ಣ ಸ್ಕ್ವಾಡ್‌

ಐಪಿಎಲ್‌ನಲ್ಲಿ ಕ್ಯಾಮರೂನ್‌ ಗ್ರೀನ್‌ಗೆ ಭಾರಿ ಬೇಡಿಕೆ

ಐಪಿಎಲ್‌ನಲ್ಲಿ ಕ್ಯಾಮರೂನ್‌ ಗ್ರೀನ್‌ಗೆ ಭಾರಿ ಬೇಡಿಕೆ

ಬರುವ ಡಿಸೆಂಬರ್ ತಿಂಗಳಿನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕ್ಯಾಮರೂನ್ ಗ್ರೀನ್ ಹರಾಜಿನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಅವರು ಹರಾಜಿಗೆ ಬಂದರೆ, ಹಲವು ಫ್ರಾಂಚೈಸಿಗಳು ಅವರನ್ನು ಖರೀದಿಸಲು ಭಾರಿ ಪೈಪೋಟಿ ನಡೆಸಲಿವೆ.

ಐಪಿಎಲ್‌ಗೆ ಹೋಗುವುದಕ್ಕಾಗಿ ನೀವು ನಿಜವಾಗಿಯೂ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಆತ ಎಲ್ಲಿ ಆಡಿದರೂ ಅವನಿಗೆ ದೊಡ್ಡ ಬೇಡಿಕೆ ಇರುತ್ತದೆ. ಈ ವರ್ಷ ಸಾಕಷ್ಟು ಪಂದ್ಯಗಳನ್ನಾಡುವುದಿದೆ. ನೋಡಿಕೊಂಡು ಆತ ಐಪಿಎಲ್‌ನಲ್ಲಿ ಆಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ನಾವು ಮೊದಲು ದೇಶಕ್ಕಾಗಿ ಆಡಲು ಬಯಸುತ್ತೇವೆ

ನಾವು ಮೊದಲು ದೇಶಕ್ಕಾಗಿ ಆಡಲು ಬಯಸುತ್ತೇವೆ

ಆಸೀಸ್ ಟೆಸ್ಟ್ ನಾಯಕ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಗೆ ಫ್ರಾಂಚೈಸ್ ಲೀಗ್‌ಗಳ ಸಂಖ್ಯೆಯನ್ನು ಪರಿಗಣಿಸಿ ಪೂರ್ವಭಾವಿ ವಿಧಾನವನ್ನು ಹೊಂದಲು ಒತ್ತಾಯಿಸಿದರು. ಆಸ್ಟ್ರೇಲಿಯಾ ಕ್ರಿಕೆಟ್ ಕ್ರಿಯಾಶೀಲರಾಗಿರಬೇಕು, ಪ್ರಪಂಚವು ಬದಲಾಗುತ್ತಿದೆ, ಈಗ ಪ್ರತಿ ತಿಂಗಳು ಹೊಸ ಲೀಗ್‌ಗಳು ಮತ್ತು ಅವಕಾಶಗಳು ಪ್ರಪಂಚದಾದ್ಯಂತ ಸೃಷ್ಟಿಯಾಗುತ್ತಿವೆ. ಆಸ್ಟ್ರೇಲಿಯಾದಲ್ಲಿ ನಾವು ಅದೃಷ್ಟವಂತರು ಮತ್ತು ನಮ್ಮೆಲ್ಲ ಆಟಗಾರರು ಮತ್ತು ಅಭಿಮಾನಿಗಳಿಗೆ ಟೆಸ್ಟ್ ಕ್ರಿಕೆಟ್ ನಂಬರ್ 1 ಆಗಿದೆ. ಟೆಸ್ಟ್ ಟೂರ್ ಇರುವಾಗ, ನಾವೆಲ್ಲರೂ ದೇಶಕ್ಕಾಗಿ ಆಡಲು ಬಯಸುತ್ತೇವೆ ಎಂದುರು.

ತವರಿನಲ್ಲಿ ಟಿ20 ವಿಶ್ವಕಪ್‌ನ ಹೊರತಾಗಿ, ಆಸ್ಟ್ರೇಲಿಯಾದ ಮುಂಬರುವ ಅಂತರರಾಷ್ಟ್ರೀಯ ವೇಳಾಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಐದು ತವರಿನ ಟೆಸ್ಟ್‌ಗಳು, ಭಾರತದಲ್ಲಿ ನಾಲ್ಕು ಟೆಸ್ಟ್‌ಗಳು, ಇಂಗ್ಲೆಂಡ್‌ನಲ್ಲಿ ಆಶಸ್ ಮತ್ತು 2023 ರಲ್ಲಿ ಏಕದಿನ ವಿಶ್ವಕಪ್ ಸೇರಿವೆ.

ಬೆನ್ನುನೋವಿಗೆ ತುತ್ತಾಗಿದ್ದ ಗ್ರೀನ್

ಬೆನ್ನುನೋವಿಗೆ ತುತ್ತಾಗಿದ್ದ ಗ್ರೀನ್

ಭಾರತದ ವಿರುದ್ಧದ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಜಗತ್ತಿನ ಗಮನ ಸೆಳೆದರೂ, ಆತನ ಗಾಯದ ಬಗ್ಗೆ ಇನ್ನೂ ಆತಂಕವಿದೆ. ಕ್ಯಾಮರೂನ್ ಗ್ರೀನ್‌ ಬೆನ್ನುನೋವಿನ ಇತಿಹಾಸವನ್ನು ಹೊಂದಿದ್ದು, ವೈದ್ಯಕೀಯ ತಂಡ ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ.

ಆಸ್ಟ್ರೇಲಿಯಾ ಅವರಿಗೆ ಸಾಧ್ಯವಾದಾಗ ವಿಶ್ರಾಂತಿ ನೀಡಲು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡಿದೆ. ಯುವ ಆಲ್‌ರೌಂಡರ್‌ನ ಫಿಟ್‌ನೆಸ್ ಬಗ್ಗೆ ಮಾತನಾಡಿದ ಕಮಿನ್ಸ್ ಆತನ ಗಾಯದ ಬಗ್ಗೆ ಚಿಂತೆ ಇರುವುದನ್ನು ಒಪ್ಪಿಕೊಂಡರು.

"ನಾನು ಅವನನ್ನು ಬೌಲ್ ಮಾಡಿದಾಗಲೆಲ್ಲಾ ಗಾಯದ್ದೇ ನನ್ನ ಮೊದಲ ಆಲೋಚನೆಯಾಗಿದೆ. ಈಗ ಗ್ರೀನ್ ಮೂರು ಫಾರ್ಮ್ಯಾಟ್‌ಗಳಲ್ಲಿದ್ದಾರೆ ಮತ್ತು ಫಿಟ್ನೆಸ್ ಇನ್ನಷ್ಟು ಮುಖ್ಯವಾಗುತ್ತದೆ. ಮುಂದಿನ ಕೆಲವು ತಿಂಗಳುಗಳಲ್ಲಿ 15 ಟೆಸ್ಟ್‌ಗಳು ಜೊತೆಗೆ ವಿಶ್ವಕಪ್, ಬಹಳಷ್ಟು ಕ್ರಿಕೆಟ್ ಆಡುವುದಿದೆ" ಎಂದು ಹೇಳಿದರು.

ಗ್ರೀನ್ ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ತಂಡದ ಭಾಗವಾಗಿಲ್ಲ. ಆದಾಗ್ಯೂ, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಆಯ್ಕೆದಾರರಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

Story first published: Friday, September 30, 2022, 15:27 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X