ಮಡದಿಯ ಆರೋಪಗಳನ್ನು ಸಾರಾಸಗಟು ತಳ್ಳಿ ಹಾಕಿದ ಶಮಿ

Posted By:
I have enough evidence to prove my innocence: Mohammad Shami

ನವ ದೆಹಲಿ, ಮಾರ್ಚ್ 16: ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಕಟ್ಟಿಕೊಂಡ ಮಡದಿಯೇ ಮುಳ್ಳಾಗಿ ಚುಚ್ಚುತ್ತಿದ್ದಾಳೆ. ಕಳೆದ ಒಂದು ವಾರದಿಂದಲೂ ಮೊಹಮ್ಮದ್ ಶಮಿ ಮೇಲೆ ಪುಂಖಾನುಪುಂಖಾನುವಾಗಿ ಗಂಭೀರ ಆರೋಪಗಳ ಸುರಿಮಳೆಯನ್ನೇ ಶಮಿ ಮಡದಿ ಹಸೀನ್ ಜಹಾನ್ ಮಾಡಿದ್ದಾರೆ.

ಆದರೆ ಇವೆಲ್ಲಾ ಆರೋಪಗಳನ್ನೂ ಸಾರಾಸಗಟಾಗಿ ತಳ್ಳಿ ಹಾಕಿರುವ ಮೊಹಮ್ಮದ್ ಶಮಿ, 'ನಾನು ನಿರಪರಾಧಿ ಎಂದು ಸಾಬೀತು ಮಾಡಲು ನನ್ನ ಬಳಿ ಸಾಕಷ್ಟು ಸಾಕ್ಷ್ಯಗಳಿವೆ' ಎಂದಿದ್ದಾರೆ.

ಶಮಿ-ಪತ್ನಿಗಾಗಲಿ, ಭಾರತಕ್ಕಾಗಲಿ ಮೋಸ ಮಾಡಲಾರ : ಧೋನಿ

ಒಂದು ವಾರದಿಂದಲೂ ದಾಂಪತ್ಯದಲ್ಲಿ ಮೂಡಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದ ಮೊಹಮ್ಮದ್ ಶಮಿ 'ಅದು ಇನ್ನು ಮುಂದೆ ಸಾಧ್ಯವಿಲ್ಲ' ಎಂದಿದ್ದಾರೆ.

ವಿವಾಹೇತರ ಸಂಬಂಧ, ಮ್ಯಾಚ್ ಫಿಕ್ಸಿಂಗ್‌, ಕೌಟುಂಬಿಕ ದೌರ್ಜನ್ಯ ಹಾಗೂ ಅವರ ಸಹೋದರ ಸಹ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ ಎಂಬೆಲ್ಲಾ ಗಂಭೀರ ಆರೋಪಗಳನ್ನು ಮೊಹಮ್ಮದ್ ಶಮಿ ಅವರ ಪತ್ನಿ ಶಮಿ ಮೇಲೆ ಮಾಡಿದ್ದರು.ಈ ಬಗ್ಗೆ ದೂರು ಸಹ ದಾಖಲಿಸಿದ್ದಾರೆ. ದೂರುಗಳ ಪ್ರತಿಯನ್ನು ಬಿಸಿಸಿಐಗೂ ಹಸೀನ್ ಜಹಾನ್ ಅವರು ಕಳುಹಿಸಿಕೊಟ್ಟಿದ್ದಾರೆ.

ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಪತ್ನಿಯಿಂದಲೇ ಆರೋಪ

ಮೊಹಮ್ಮದ್ ಶಮಿ ಅವರ ಬೆನ್ನಿಗೆ ನಿಂತಿರುವ ಕ್ರಿಕೆಟ್ ಸ್ಟಾರ್ ಧೋನಿ 'ಶಮಿ, ಪತ್ನಿಗಾಗಲಿ ಅಥವಾ ದೇಶಕ್ಕಾಗಲಿ ದ್ರೋಹ ಮಾಡುವ ವ್ಯಕ್ತಿಯಲ್ಲ' ಎಂದು ಹೇಳಿದ್ದರು. ಮಾಜಿ ನಾಯಕ ಕಪಿಲ್ ದೇವ್ ಸಹ ಶಮಿ ಅವರ ಬೆಂಬಲಕ್ಕೆ ನಿಂತಿದ್ದು ಶಮಿ ಪರವಾಗಿ ಮಾತನಾಡಿದ್ದರು.

ಮೊಹಮ್ಮದ್ ಶಮಿ ವಿರುದ್ಧ ಕೊಲ್ಕತ್ತದಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, March 16, 2018, 12:51 [IST]
Other articles published on Mar 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ