ಎಬಿಡಿ ನಿವೃತ್ತಿ: ಕೊನೆಗೂ ಆರ್‌ಸಿಬಿ ಅಭಿಮಾನಿಗಳಿಗೆ ಕೊಟ್ಟ ಆ ಮಾತನ್ನು ಉಳಿಸಿಕೊಂಡೇಬಿಟ್ಟರಲ್ಲ ಎಬಿಡಿ

ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಆಟಗಾರರಲ್ಲಿ ಒಬ್ಬರಾಗಿದ್ದ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಇಂದು ( ನವೆಂಬರ್‌ 17 ) ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಪಡೆದುಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಬೇಸರವನ್ನು ಮೂಡಿಸಿದ್ದಾರೆ. ಯಾವುದೇ ಮುನ್ಸೂಚನೆಯನ್ನೂ ನೀಡದೆ ಎಬಿ ಡಿವಿಲಿಯರ್ಸ್ ದಿಢೀರನೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸುವುದರ ಮೂಲಕ ಬೇಸರ ತಂದಿದ್ದಾರೆ.

ಗಪ್ಟಿಲ್‌ರನ್ನು ಗುರಾಯಿಸಿದ ದೀಪಕ್ ಚಹರ್‌ಗೆ ಸಿಕ್ಕಿತು 1 ಲಕ್ಷ; ಕಾರಣವೇನು ಗೊತ್ತಾ?ಗಪ್ಟಿಲ್‌ರನ್ನು ಗುರಾಯಿಸಿದ ದೀಪಕ್ ಚಹರ್‌ಗೆ ಸಿಕ್ಕಿತು 1 ಲಕ್ಷ; ಕಾರಣವೇನು ಗೊತ್ತಾ?

ಅಂತಾರರಾಷ್ಟ್ರೀಯ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಎಬಿ ಡಿವಿಲಿಯರ್ಸ್ 2017ರಲ್ಲಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು ಮತ್ತು 2018ರ ಮೇ ತಿಂಗಳಿನಲ್ಲಿ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ 3 ವರ್ಷಗಳ ಹಿಂದೆಯೇ ನಿವೃತ್ತಿ ಪಡೆದಿದ್ದ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದರು. ಈ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ಎಬಿ ಡಿವಿಲಿಯರ್ಸ್ ಹಲವಾರು ವರ್ಷಗಳಿಂದ ಬೆಂಗಳೂರು ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದರು.

ಕೊಹ್ಲಿ ನನಗಾಗಿ 3ನೇ ಕ್ರಮಾಂಕ ಬಿಟ್ಟರು; ಕಿವೀಸ್ ವಿರುದ್ಧದ ಉತ್ತಮ ಪ್ರದರ್ಶನದ ನಂತರ ಯಾದವ್ ಪ್ರತಿಕ್ರಿಯೆಕೊಹ್ಲಿ ನನಗಾಗಿ 3ನೇ ಕ್ರಮಾಂಕ ಬಿಟ್ಟರು; ಕಿವೀಸ್ ವಿರುದ್ಧದ ಉತ್ತಮ ಪ್ರದರ್ಶನದ ನಂತರ ಯಾದವ್ ಪ್ರತಿಕ್ರಿಯೆ

ಇನ್ನು ಎಬಿ ಡಿ ವಿಲಿಯರ್ಸ್ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಆಟಗಾರನಾದರೂ ಸಹ ವಿಶ್ವದ ಮೂಲೆ ಮೂಲೆಯಲ್ಲಿ ಎಬಿ ಡಿವಿಲಿಯರ್ಸ್ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು. ಎಬಿ ಡಿವಿಲಿಯರ್ಸ್ ಸ್ಫೋಟಕ ಆಟಕ್ಕೆ ಮನ ಸೋಲದ ಕ್ರಿಕೆಟ್ ಅಭಿಮಾನಿಗಳು ಯಾರೂ ಸಹ ಇರಲಿಲ್ಲ. ಅದರಲ್ಲಿಯೂ ಭಾರತದಲ್ಲಿ ಎಬಿ ಡಿವಿಲಿಯರ್ಸ್ ಅವರಿಗೆ ಅಪಾರವಾದ ಅಭಿಮಾನಿ ಬಳಗವಿತ್ತು. ಅದಕ್ಕೂ ಮಿಗಿಲಾಗಿ ಕರ್ನಾಟಕದಾದ್ಯಂತ ಎಬಿ ಡಿವಿಲಿಯರ್ಸ್ ಅವರಿಗೆ ಅಭಿಮಾನಿ ಬಳಗದ ಜೊತೆ ಹೃದಯ ತುಂಬಿ ಪ್ರೀತಿಸುವ ಅಭಿಮಾನಿಗಳು ಕೂಡ ಇದ್ದರು. ಇದಕ್ಕೆ ಮೂಲ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಹೌದು, 2011ನೇ ಸಾಲಿನ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯನಾಗಿದ್ದ ಎಬಿ ಡಿವಿಲಿಯರ್ಸ್ ಈ ಒಂದು ದಶಕದಲ್ಲಿ ಗಳಿಸಿದ ಅಭಿಮಾನಿಗಳ ಸಂಖ್ಯೆ ಅಪಾರ.

ಹೀಗಾಗಿ ಎಬಿ ಡಿವಿಲಿಯರ್ಸ್ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳು ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿರುವುದು ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ತಂಡದ ಅಭಿಮಾನಿಗಳಲ್ಲಿ ಬೇಸರವನ್ನುಂಟುಮಾಡಿರುವುದು ನಿಜ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಎಬಿ ಡಿವಿಲಿಯರ್ಸ್ ಅವರ ವಿಶೇಷ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ಈ ಕೆಳಕಂಡಂತೆ ಬರೆದುಕೊಂಡಿದೆ. ಹಾಗೂ ಈ ನಿವೃತ್ತಿಯ ಮೂಲಕ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ನೀಡಿದ್ದ ಆ ಒಂದು ಮಾತನ್ನು ಅಂತಿಮವಾಗಿಯೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ..

ಜೀವನಪೂರ್ತಿ ಆರ್‌ಸಿಬಿಯ ಸದಸ್ಯನಾಗಿರುತ್ತಾನೆ ಎಂದ ಎಬಿಡಿ

ಜೀವನಪೂರ್ತಿ ಆರ್‌ಸಿಬಿಯ ಸದಸ್ಯನಾಗಿರುತ್ತಾನೆ ಎಂದ ಎಬಿಡಿ

"ನನ್ನ ಜೀವನ ಪೂರ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗನಾಗಿರುತ್ತಾನೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರತಿಯೊಬ್ಬ ಸದಸ್ಯರೂ ಕೂಡ ನನ್ನ ಕುಟುಂಬದ ಸದಸ್ಯರಾಗಿದ್ದಾರೆ. ಜೀವನದಲ್ಲಿ ಹಲವಾರು ವ್ಯಕ್ತಿಗಳು ಬರುತ್ತಾರೆ ಮತ್ತು ಹೋಗುತ್ತಾರೆ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಾವು ಪರಸ್ಪರ ಹೊಂದಿರುವ ಪ್ರೀತಿ ಎಂದೆಂದಿಗೂ ಶಾಶ್ವತ" ಎಂದು ಎಬಿ ಡಿವಿಲಿಯರ್ಸ್ ಹೇಳಿಕೆ ನೀಡಿದ್ದಾರೆ.

ಅಂದು ಕೊಟ್ಟ ಮಾತನ್ನು ಕೊನೆಗೂ ಉಳಿಸಿಕೊಂಡ ಎಬಿಡಿ

ಅಂದು ಕೊಟ್ಟ ಮಾತನ್ನು ಕೊನೆಗೂ ಉಳಿಸಿಕೊಂಡ ಎಬಿಡಿ

ಎಬಿ ಡಿವಿಲಿಯರ್ಸ್ ಈ ಹಿಂದೆ ಸಾಕಷ್ಟು ಬಾರಿ ಎಂದೆಂದಿಗೂ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ಇರುತ್ತೇನೆ, ಬೇರೆ ಯಾವುದೇ ತಂಡದ ಪರವೂ ಆಡುವುದನ್ನು ಯೋಚನೆ ಕೂಡ ಮಾಡಿಕೊಳ್ಳಲು ನನ್ನಿಂದ ಆಗುವುದಿಲ್ಲ ಎಂಬ ಹೇಳಿಕೆಗಳನ್ನು ನೀಡಿದ್ದರು. ಇದೀಗ ಎಬಿ ಡಿವಿಲಿಯರ್ಸ್ ಅಂದು ಕೊಟ್ಟಿದ್ದ ಈ ಮಾತನ್ನು ಕೊನೆಗೂ ಉಳಿಸಿಕೊಂಡು ಬಿಟ್ಟಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಮೆಗಾ ಹರಾಜು ನಡೆಯಲಿದ್ದು ಎಬಿ ಡಿವಿಲಿಯರ್ಸ್ ಬೇರೆ ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಿಸುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸದಸ್ಯನಾಗಿಯೇ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಕೋಚ್ ವೃತ್ತಿಯತ್ತ ಮುಖ ಮಾಡುತ್ತಾರಾ ಎಬಿ ಡಿವಿಲಿಯರ್ಸ್?

ಕೋಚ್ ವೃತ್ತಿಯತ್ತ ಮುಖ ಮಾಡುತ್ತಾರಾ ಎಬಿ ಡಿವಿಲಿಯರ್ಸ್?

ಆಟಗಾರನಾಗಿ ಕ್ರಿಕೆಟ್ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿರುವ ಎಬಿ ಡಿವಿಲಿಯರ್ಸ್ ಮುಂದಿನ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತುದಾರನಾಗಿ ಮತ್ತೆ ತಂಡ ಸೇರಲಿದ್ದಾರೆ ಎಂಬ ಚರ್ಚೆಯೂ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಇದೀಗ ತಾನೆ ನಿವೃತ್ತಿ ಪಡೆದುಕೊಂಡಿರುವ ಎಬಿ ಡಿವಿಲಿಯರ್ಸ್ ಕೆಲವೊಂದಷ್ಟು ವರ್ಷಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ತರಬೇತುದಾರನಾಗಿ ಮೈದಾನಕ್ಕಿಳಿದರೆ ಯಾವುದೇ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.

For Quick Alerts
ALLOW NOTIFICATIONS
For Daily Alerts
Story first published: Friday, November 19, 2021, 16:21 [IST]
Other articles published on Nov 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X