For Quick Alerts
ALLOW NOTIFICATIONS  
For Daily Alerts
 

ನಾನು ಬರೀ ಶೆಫಾಲಿ ವರ್ಮಾ ಆಗಿರುತ್ತೇನೆ, ಇನ್ಯಾರೂ ಬೇಕಾಗಿಲ್ಲ: ಶೆಫಾಲಿ

I want to be known as just Shafali Verma, not someones clone: Shafali Verma

ನವದೆಹಲಿ: ನಾನು ಬರೀ ಶೆಫಾಲಿ ವರ್ಮಾ ಆಗಿರುತ್ತೇನೆ, ಬೇರ್ಯಾರೂ ಆಗಲು ಬಯಸುತ್ತಿಲ್ಲ, ಬೇರಾರಿಗೂ ಹೋಲಿಸಬೇಕಾಗಿಲ್ಲ ಎಂದು ಭಾರತದ ಮಹಿಳಾ ಕ್ರಿಕೆಟ್ ತಂಡ ಆರಂಭಿಕ ಬ್ಯಾಟ್ಸ್‌ಮನ್‌, 17ರ ಹರೆಯದ ಶೆಫಾಲಿ ವರ್ಮಾ ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಶೆಫಾಲಿ ತನ್ನನ್ನು ಬೇರೆಯವರಿಗೆ ಹೋಲಿಸೋದು ಇಷ್ಟವಾಗಲ್ಲ ಎಂದಿದ್ದಾರೆ.

ಟೀನೇಜರ್ ಶೆಫಾಲಿ ವರ್ಮಾ ಇನ್ನೂ ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅರ್ಹರಾಗಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸದ್ಯ ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಳ್ಳಲು ಸರ್ಕಾರ ಮಾರ್ಗದರ್ಶನ ನೀಡಲಾಗಿರುವುದರಿಂದ ಶೆಫಾಲಿಗೆ ಇನ್ನೂ 18 ತುಂಬಿಲ್ಲವಾದ್ದರಿಂದ ಅವರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅರ್ಹರಾಗಿಲ್ಲ.

ಶೆಫಾಲಿ 18 ವರ್ಷ ತುಂಬಲು ಇನ್ನೂ 160 ದಿನಗಳು ಕಾಯಬೇಕಾಗಿದೆ. ಮುಂದಿನ ವರ್ಷ ಅಂದರೆ 2022 ಜನವರಿ 28ಕ್ಕೆ ಶೆಫಾಲಿಗೆ 18 ವರ್ಷ ತುಂಬಿದಂತಾಗುತ್ತದೆ. ಭಾರತದ ಪರ ಶೆಫಾಲಿ 1 ಟೆಸ್ಟ್ ಪಂದ್ಯದಲ್ಲಿ 159 ರನ್, 3 ಏಕದಿನ ಪಂದ್ಯಗಳಲ್ಲಿ 78 ರನ್, 25 ಟಿ20ಐ ಪಂದ್ಯಗಳಲ್ಲಿ 665 ರನ್ ಗಳಿಸಿದ್ದಾರೆ.

ನಿಮ್ಮನ್ನು ಕೆಲವರು ವೀರೇಂದ್ರ ಸೆಹ್ವಾಗ್‌ಗೆ ಹೋಲಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಶೆಫಾಲಿ, "ನಾನು ಬರೀ ಶೆಫಾಲಿ ವರ್ಮಾ ಆಗಿರಲು ಬಯಸುತ್ತೇನೆ. ನನ್ನ ಸ್ವಂತ ಶೈಲಿಯೇ ನನಗಿಷ್ಟ. ಅದರರ್ಥ ನಾನು ಬೇರೆಯವರ ಗೇಮ್ ಗಮನಿಸುವುದಿಲ್ಲವೆಂದಲ್ಲ. ನಾನೂ ಇರರನ್ನು ನೋಡಿ ಕಲಿಯುತ್ತೇನೆ. ಆದರೆ ಇತರರನ್ನು ಕಾಪಿ ಮಾಡೋದು ಇಷ್ಟವಿಲ್ಲ," ಎಂದು ಪ್ರತಿಕ್ರಿಯಿಸಿದ್ದಾರೆ.

Story first published: Monday, August 23, 2021, 18:50 [IST]
Other articles published on Aug 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+