ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಹೊಸ ಆರಂಭದ ಮುನ್ನುಡಿ ಬರೆಯುವರಾ ಕೆಎಲ್ ರಾಹುಲ್?

By R Kaushik, London
ICC Cricket World Cup: KL Rahul, looking to open a fresh path

ನಾಟಿಂಗ್‌ಹ್ಯಾಂ, ಜೂನ್ 13: ನಾಟಿಂಗ್‌ಹ್ಯಾಂ ಇದು ಕಳ್ಳರ ರಾಜ ರಾಬಿನ್ ಹುಡ್ ರಾಜಧಾನಿಯಾಗಿತ್ತು. 1970 ಹಾಗೂ 80 ದಶಕಗಳಲ್ಲಿ ನಾಟಿಂಗಹ್ಯಾಂಶೈರ್ ಕೌಂಟಿ ಕ್ರಿಕೆಟ್ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಮಾಜಿ ಆಲ್ ರೌಂಡರಗಳಾದ ಸರ್ ರಿಚರ್ಡ ಹ್ಯಾಡ್ಲಿ ಹಾಗೂ ಕ್ಲೈವ್ ರೈಸ್ ಅವರಂಥ ಮಹಾನುಭಾವರು ಜನಿಸಿದ ಪುಣ್ಯಭೂಮಿಯೂ ಹೌದು ಈ ನಾಟಿಂಗ್‌ಹ್ಯಾಂ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇನ್ನು ಇಲ್ಲಿನ ಫೇಮಸ್ ಕ್ರಿಕೆಟ್ ಮೈದಾನ ಟ್ರೆಂಟ್ ಬ್ರಿಜ್ ಬಗ್ಗೆ ಕೇಳದೆ ಇರುವವರು ಯಾರೂ ಇರಲಿಕ್ಕಿಲ್ಲ. ಆಧುನಿಕ ಹಾಗೂ ಪುರಾತನ ಶೈಲಿಗಳೆರಡರ ಮಿಶ್ರಣದ ನೋಟ, ಬ್ರಿಟಿಷ್ ಛಾಯೆಯ ಶ್ರೀಮಂತಿಕೆಯ ಲಕ್ಷಣಗಳು ಹೀಗೆ ತನ್ನ ವಿಶೇಷತೆಗಳಿಂದ ಎಲ್ಲರ ಗಮನಸೆಳೆಯುವ ಟ್ರೆಂಟ್ ಬ್ರಿಜ್, ಬ್ರಿಟನ್‌ನ ಎಲ್ಲ ಕ್ರಿಕೆಟ್ ಮೈದಾನಗಳಿಗಿಂತಲೂ ಒಂದಿಷ್ಟು ಹೆಚ್ಚೇ ಸುಂದರವಾಗಿದೆ. ಮೈದಾನದ ಹೊರಗೆ ಲಾರ್ವುಡ್ ಆಂಡ್ ವೋಸ್ ಪಬ್ ಇದೆ. ಈ ಲಾರ್ವುಡ್ ಆಂಡ್ ವೋಸ್ ಎಂಬಿಬ್ಬರು ಯಾರು, ಇವರ ಹೆಸರನ್ನೇಕೆ ಪಬ್‌ಗೆ ಇಟ್ಟಿದ್ದಾರೆ ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿ.

ಭಾರತ vs ನ್ಯೂಜಿಲ್ಯಾಂಡ್, ಜೂನ್ 13, Live ಸ್ಕೋರ್‌ಕಾರ್ಡ್

1
43661

1932 ರಿಂದ 33 ಅವಧಿಯಲ್ಲಿ ಇಂಗ್ಲೆಂಡ್‌ನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಡಾನ್ ಬ್ರಾಡಮನ್ ಅವರನ್ನು ನಿಯಂತ್ರಿಸಲು ಡಗ್ಲಾಸ್ ಜಾರ್ಡಿನ್ ಬಾಡಿಲೈನ್ ಬೌಲಿಂಗ್ ಕಂಡು ಹಿಡಿದಿದ್ದರು. ಆದರೆ ಈ ಬಾಡಿಲೈನ್ ಬೌಲಿಂಗ್ ಅನ್ನು ಅವರಿಗೆ ಹೇಳಿಕೊಟ್ಟವರೇ ಈ ಹ್ಯಾರೊಲ್ಡ್ ಲಾರ್ವುಡ್ ಮತ್ತು ಬಿಲ್ ವೋಸ್. ಅವರ ಗೌರವಾರ್ಥ ಇಲ್ಲಿನ ಪಬ್‌ಗೆ ಅವರ ಹೆಸರನ್ನು ಇಡಲಾಗಿದೆ.

ಆಗಸ್ಟ್ 2002 ರಲ್ಲಿ 17 ವರ್ಷದ ಬಾಲಕರಾಗಿದ್ದ ಪಾರ್ಥಿವ್ ಪಟೇಲ ಇದೇ ಮೈದಾನದಲ್ಲಿ ತಮ್ಮ ಮೊಟ್ಟ ಮೊದಲ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು. ಆಗ ಮ್ಯಾಥ್ಯೂ ಹೊಗಾರ್ಡ್, ಆಂಡ್ರ್ಯೂ ಫ್ಲಿಂಟಾಫ್, ಸ್ಟೀವ್ ಹರ್ಮಿಸನ್, ಡೊಮಿನಿಕ್ ಕಾರ್ಕ್, ಮೈಕೆಲ್ ವಾಹನ್ ಮತ್ತು ಕ್ರೇಗ್ ವೈಟ್ ಅವರಂಥ ಘಟಾನುಘಟಿ ಬೌಲರಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ಎದುರಿಸಿ ಆಟದ ಕೊನೆಯ ದಿನ ಭಾರತವು ಪಂದ್ಯ ಡ್ರಾ ಮಾಡಿಕೊಂಡು ಮರ್ಯಾದೆ ಉಳಿಸಿಕೊಳ್ಳಲು ಪಾರ್ಥಿವ್ ನೆರವಾಗಿದ್ದರು. ಈಗ ಇವತ್ತು ಅಂದರೆ ಜೂನ್ 13 ರಂದು ಮತ್ತೊಂದು ಇತಿಹಾಸ ಈ ಮೈದಾನದಲ್ಲಿ ಘಟಿಸಲು ಹೊರಟಿದೆ. ಭಾರತದ ಕೆ.ಎಲ್. ರಾಹುಲ್ ತಂಡದ ಒನ್ ಡೇ ಓಪನರ್ ಆಗಿ ಪ್ರಥಮ ಬಾರಿಗೆ ಮೈದಾನಕ್ಕಿಳಿಯಲಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ವಾರ್ನರ್ ಮಾಡಿದ್ದೇನು ಗೊತ್ತೇ?ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ವಾರ್ನರ್ ಮಾಡಿದ್ದೇನು ಗೊತ್ತೇ?

ರಾಹುಲ್ ಅವರ ಕ್ರೀಡಾ ಜೀವನ ಸಾಕಷ್ಟು ಏಳು ಬೀಳಿನಿಂದ ಕೂಡಿದ್ದು, ಈ ಬಾರಿ ಅವರ ಫಾರ್ಮ ಹೇಗಿದೆ ಎಂಬುದನ್ನು ನೋಡಲು ಭಾರತೀಯರು ಕಾತರರಾಗಿದ್ದಾರೆ. 2017 ರ ಆರಂಭದಲ್ಲಿ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಅದೇ ವರ್ಷ ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ ಆ ದೇಶದ ವಿರುದ್ಧದ ಸರಣಿಯಲ್ಲಿ ಆಟವಾಡಿದ್ದ ರಾಹುಲ್, 11 ಇನ್ನಿಂಗ್ಸ್‌ಗಳಲ್ಲಿ 9 ಅರ್ಧಶತಕ ಬಾರಿಸಿದ್ದರು. ಆದರೆ ವಿಚಿತ್ರವೆಂದರೆ ಅದರ ನಂತರ ಅವರಾಡಿದ 15 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧ ಶತಕ ಮಾತ್ರ ಬಂದಿತು.

ಟೆಸ್ಟ್‌ನಲ್ಲಿ 35.27 ಸರಾಸರಿ ರನ್ ಗಳಿಕೆ ಹೊಂದಿರುವ ರಾಹುಲ್ ಅವರ ಕ್ಲಾಸ್ ಅದಕ್ಕೂ ಹೆಚ್ಚಾಗಿದೆ ಎಂಬುದು ಅವರ ಆಟ ನೋಡಿದರೆ ತಿಳಿಯುತ್ತದೆ. ಬರೀ ಅಂಕಿ ಸಂಖ್ಯೆಗಳೇ ಯೋಗ್ಯತೆಯ ಮಾನದಂಡವಾಗಲಾರವು ಎಂಬುದು ರಾಹುಲ್ ವಿಷಯದಲ್ಲಿ ನಿಜವಾಗಿದೆ.

ಇನ್ನು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34.54 ಸಾಧಾರಣ ರನ್ ಸರಾಸರಿಯನ್ನು ರಾಹುಲ್ ಹೊಂದಿದ್ದಾರೆ. ಆಟದ ಕ್ರಮಾಂಕಗಳಲ್ಲಿ ಒಂದು ನಿರ್ದಿಷ್ಟ ಸ್ಥಾನವನ್ನು ನೀಡದಿರುವುದು ಕೂಡ ಇವರ ಆಟದ ಮೇಲೆ ಪರಿಣಾಮ ಬೀರಿದೆ. ತಮ್ಮ ಪ್ರಥಮ 16 ಪಂದ್ಯಗಳಲ್ಲಿ ರಾಹುಲ್ ಪ್ರಥಮ ಪಂದ್ಯದಲ್ಲಿ ಓಪನರ್ ಆಗಿ ಬಂದರೂ ನಂತರದ ಪಂದ್ಯಗಳಲ್ಲಿ ನಂಬರ 3,4,5,6 ಸ್ಥಾನಗಳಲ್ಲಿ ಆಟವಾಡಿದರು.

ಭಾರತ vs ನ್ಯೂಜಿಲ್ಯಾಂಡ್: ವಿಶ್ವದಾಖಲೆಗೆ ಕೊಹ್ಲಿಗೆ ಕೇವಲ 57 ರನ್‌ ಬೇಕು!ಭಾರತ vs ನ್ಯೂಜಿಲ್ಯಾಂಡ್: ವಿಶ್ವದಾಖಲೆಗೆ ಕೊಹ್ಲಿಗೆ ಕೇವಲ 57 ರನ್‌ ಬೇಕು!

ಈಗ ಗಾಯದ ಕಾರಣದಿಂದ ಹೊರಗಿರುವ ಶಿಖರ ಧವನ್ ಕನಿಷ್ಠ ಮೂರು ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆ. ಅವರ ಸ್ಥಾನಕ್ಕೆ ರಾಹುಲ್ ಓಪನರ್ ಆಗಿ ಬ್ಯಾಟ್ ಹಿಡಿಯಲಿದ್ದು, ಅವರು ತಮ್ಮ ಮಧ್ಯಮ ಕ್ರಮಾಂಕದ ಆಟದ ಶೈಲಿಯ ಗುಂಗಿನಿಂದ ಹೊರಬರಬೇಕಿದೆ. ತಾಂತ್ರಿಕವಾಗಿ ಹಾಗೂ ಮಾನಸಿಕವಾಗಿ ರಾಹುಲ್ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಇಂದಿನ ಪಂದ್ಯದಲ್ಲಿ ಅವರಿಂದ ಶ್ರೇಷ್ಠ ಇನ್ನಿಂಗ್ಸ್ ವೊಂದನ್ನು ನಾವು ನಿರೀಕ್ಷಿಸಬಹುದು.

{headtohead_cricket_3_4}

ಈಗ ತಾನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಲೂರುತ್ತಿರುವ ಆಟಗಾರನನ್ನು ಪದೆ ಪದೆ ಕ್ರಮಾಂಕಗಳಲ್ಲಿ ವ್ಯತ್ಯಾಸ ಮಾಡುವುದು ಬಹುದೊಡ್ಡ ಪರಿಣಾಮ ಬೀರುತ್ತದೆ. ಕಳೆದ ವಾರ ಸೌಥಾಂಪ್ಟನ್ ನಲ್ಲಿ ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರಿಗೆ ಆರಂಭಿಕ ಆಟಗಾರನ ಕ್ರಮಾಂಕ ನೀಡಲಾಗಿತ್ತು. ಅಂದಿನ ಬೌನ್ಸ್ ಟ್ರಾಕನಲ್ಲಿ ಅವರಿಗೆ ಒಂದಿಷ್ಟು ಅಭ್ಯಾಸವಾಗಿದ್ದು ಕೂಡ ಅನುಕೂಲವಾಗಿದೆ.

ಕ್ರಮಾಂಕದಲ್ಲಿ ಏನೇ ಏರಿಳಿತ ಮಾಡಿದರೂ ಟೀಂ ಮ್ಯಾನೇಜಮೆಂಟ್ ರಾಹುಲ್ ಅವರಲ್ಲಿ ದೊಡ್ಡ ಭರವಸೆ ಇರಿಸಿಕೊಂಡಿದ್ದು ಮಾತ್ರ ಸುಳ್ಳಲ್ಲ. ತಂಡದ ಅಸಿಸ್ಟಂಟ್ ಕೋಚ್ ಸಂಜಯ ಬಂಗಾರ ಅವರು ಕೆ.ಎಲ್. ರಾಹುಲ್ ಅವರ ಆಟವನ್ನು ರಾಹುಲ್ ದ್ರಾವಿಡ್ ಅವರ ಆಟಕ್ಕೆ ಹೋಲಿಸಿದ್ದನ್ನು ಈ ಸಂದರ್ಭದಲ್ಲಿ ಮುಖ್ಯವಾಗಿ ಗಮನಿಸಬೇಕಾಗುತ್ತದೆ. ವಿವಿಧ ಕ್ರಮಾಂಕಗಳಲ್ಲಿ ಆಡುವುದರಿಂದ ಆಟವನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಈ ಹಿಂದೆಯೂ ಅನೇಕ ಪ್ರಮುಖ ಆಟಗಾರರು ವಿಭಿನ್ನ ಕ್ರಮಾಂಕಗಳಲ್ಲಿ ಆಡುತ್ತ ಬಂದಿದ್ದಾರೆ. ರಾಹುಲ್ ದ್ರಾವಿಡ್ ಅವರು ಎಲ್ಲ ಕ್ರಮಾಂಕಗಳಲ್ಲಿ ಆಟವಾಡಿದ್ದು ತಂಡಕ್ಕೆ ಅನುಕೂಲವೇ ಆಗಿದೆ ಎನ್ನುತ್ತಾರೆ ಸಂಜಯ ಬಂಗಾರ.

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್‌ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Thursday, June 13, 2019, 12:52 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X