ICC Test Ranking: ಅಗ್ರ ಸ್ಥಾನಿ ಸ್ಮಿತ್‌ಗೆ ಅತೀ ಹತ್ತಿರದಲ್ಲಿ ವಿರಾಟ್ ಕೊಹ್ಲಿ!

Virat Kohli Narrow Gap With Steve Smith In Test Rankings | Oneindia Kannada

ಬೆಂಗಳೂರು, ನವೆಂಬರ್ 26: ಐಸಿಸಿ ಟೆಸ್ಟ್ ರ್ಯಾಂಕ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್‌ಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಸಮೀಪವಾಗುತ್ತಿದ್ದಾರೆ. ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದು, ರ್ಯಾಂಕಿಂಗ್‌ನಲ್ಲಿ ಮೇಲೇಳಲು ಸಹಾಯ ನೀಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ!

ಹಿಂದಿನ ಐಸಿಸಿ ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ಕೊಹ್ಲಿ, ಸ್ಮಿತ್‌ಗಿಂತ 25 ಪಾಯಿಂಟ್ ಹಿಂದಿದ್ದರು. ಆದರೆ ಡೇ-ನೈಟ್ ಟೆಸ್ಟ್ ಬಳಿಕ ಸದ್ಯದ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಸ್ಮಿತ್, ಕೊಹ್ಲಿಗಿಂತ ಕೇವಲ 3 ಪಾಯಿಂಟ್‌ ಅಷ್ಟೇ ಮುಂದಿದ್ದಾರೆ. ಅಂದ್ಹಾಗೆ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಕೊಹ್ಲಿ 136 ರನ್ ಕಲೆ ಹಾಕಿದ್ದರು.

ಟೆಸ್ಟ್ ಕ್ರಿಕೆಟ್ ಲೋಕದ ಅಧಿಪತಿ ಟೀಮ್ ಇಂಡಿಯಾ

ನೂತನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಕೊಹ್ಲಿಯ ಜೊತೆ ಇನ್ನೂ ಇಬ್ಬರು ಭಾರತೀಯರು ಟಾಪ್ 5ನಲ್ಲಿ ಕಾಣಿಸಿಕೊಂಡಿದ್ದಾರೆ.

4ನೇ ಸ್ಥಾನದಲ್ಲಿ ಪೂಜಾರ

4ನೇ ಸ್ಥಾನದಲ್ಲಿ ಪೂಜಾರ

ಪ್ರಸ್ತುತ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 931 ರೇಟಿಂಗ್ ಪಾಯಿಂಟ್ ಗಳಿಸಿದ್ದರೆ, ದ್ವಿತೀಯ ಸ್ಥಾನಿ ವಿರಾಟ್ ಕೊಹ್ಲಿ 928 ಪಾಯಿಂಟ್‌ ಹೊಂದಿದ್ದಾರೆ. 3ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ 877 ಪಾಯಿಂಟ್‌ ಹೊಂದಿದ್ದಾರೆ. ಇನ್ನು 4ನೇ ಸ್ಥಾನದಲ್ಲಿ ಚೇತೇಶ್ವರ ಪೂಜಾರ (791 ಪಾಯಿಂಟ್ಸ್‌), 5ರಲ್ಲಿ ಅಜಿಂಕ್ಯ ರಹಾನೆ (759) ಇದ್ದಾರೆ. ಮಯಾಂಕ್ ಅಗರ್ವಾಲ್ 10ನೇ ಸ್ಥಾನ ಪಡೆದಿದ್ದಾರೆ.

ಟೀಮ್ ಇಂಡಿಯಾ ಭರ್ಜರಿ ಮುನ್ನಡೆ

ಟೀಮ್ ಇಂಡಿಯಾ ಭರ್ಜರಿ ಮುನ್ನಡೆ

ಪುರುಷರ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಮುನ್ನಡೆಯಲ್ಲಿದೆ. ನಂ.1 ಸ್ಥಾನಿ ಭಾರತ 119 ರೇಟಿಂಗ್ ಪಾಯಿಂಟ್ಸ್‌ ಗಳಿಸಿದೆ. ದ್ವಿತೀಯ ಸ್ಥಾನದಲ್ಲಿ ನ್ಯೂಜಿಲೆಂಡ್ (109) ಇದೆ. ಇನ್ನುಳಿದ ಶ್ರೇಯಾಂಕಗಳಲ್ಲಿ ಇಂಗ್ಲೆಂಡ್ (104), ದಕ್ಷಿಣ ಆಫ್ರಿಕಾ (102), ಆಸ್ಟ್ರೇಲಿಯಾ (99) ಇದೆ.

ಕಮಿನ್ಸ್ ಬೆಸ್ಟ್ ಟೆಸ್ಟ್ ಬೌಲರ್

ಕಮಿನ್ಸ್ ಬೆಸ್ಟ್ ಟೆಸ್ಟ್ ಬೌಲರ್

ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (907 ರೇಟಿಂಗ್ ಪಾಯಿಂಟ್ಸ್), ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡ (839), ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ (816), ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ (814), ಭಾರತದ ಜಸ್‌ಪ್ರೀತ್‌ ಬೂಮ್ರಾ (794) ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಆರ್ ಅಶ್ವಿನ್ 10ರಲ್ಲಿದ್ದಾರೆ.

ಆಲ್ ರೌಂಡರ್‌ಗಳಲ್ಲಿ ಹೋಲ್ಡರ್ ಟಾಪರ್

ಆಲ್ ರೌಂಡರ್‌ಗಳಲ್ಲಿ ಹೋಲ್ಡರ್ ಟಾಪರ್

ಟೆಸ್ಟ್ ಆಲ್‌ ರೌಂಡರ್‌ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ (472), ಭಾರತದ ರವೀಂದ್ರ ಜಡೇಜಾ (406), ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (401), ದಕ್ಷಿಣ ಆಫ್ರಿಕಾದ ವರ್ನಾನ್ ಫಿಲಾಂಡರ್ (315), ಭಾರತದ ಆರ್ ಅಶ್ವಿನ್ (308) ಅಗ್ರ ಐದು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, November 26, 2019, 17:32 [IST]
Other articles published on Nov 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X