ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ರಿಂದ ಕೈಫ್ ತನಕ ಪೃಥ್ವಿ ಶಾ ಪಡೆ ಹೊಗಳಿದ ಕ್ರಿಕೆಟರ್ಸ್

By Mahesh
ICC U19 WC: From Tendulkar to Kaif, cricketers congratulate India colts for entering finals

ಬೆಂಗಳೂರು, ಜನವರಿ 30 : ವಿಶ್ವಕಪ್ ಅಂಡರ್ 19 ಟೂರ್ನಮೆಂಟ್ ನಲ್ಲಿ ಟೀಂ ಇಂಡಿಯಾದ ಯುವ ತಂಡ ಫೈನಲ್ ತಲುಪುತ್ತಿದ್ದಂತೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ.

ಐಸಿಸಿ ಅಂಡರ್ 19 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ 203ರನ್ ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.

278ರನ್ ಗುರಿ ಬೆನ್ನು ಹತ್ತಿದ ಪಾಕಿಸ್ತಾನಕ್ಕೆ ಭಾರತದ ವೇಗಿ ಇಶಾನ್ ಪೊರೆಲ್ ಮಾರಕವಾದರು. ಆರಂಭದ ನಾಲ್ಕು ವಿಕೆಟ್ ಗಳನ್ನು ಕಿತ್ತ ಇಶಾನ್ ಅವರು ಪಾಕಿಸ್ತಾನದ ಬ್ಯಾಟ್ಸ್ ಮನ್ ಗಳನ್ನು ಕಾಡಿದರು.

ವಿಶ್ವಕಪ್ : ಪಾಕಿಸ್ತಾನವನ್ನು ಬಗ್ಗುಬಡಿದು ಫೈನಲ್ ತಲುಪಿದ ಭಾರತ ವಿಶ್ವಕಪ್ : ಪಾಕಿಸ್ತಾನವನ್ನು ಬಗ್ಗುಬಡಿದು ಫೈನಲ್ ತಲುಪಿದ ಭಾರತ

6 ಬಾರಿ ಫೈನಲ್ ಪ್ರವೇಶಿಸಿರುವ ಭಾರತ ಮೂರು ಬಾರಿ ವಿಶ್ವಕಪ್ ಎತ್ತಿ ಹಿಡಿದಿದೆ. ಇನ್ನೊಂದೆಡೆ ಅಫ್ಘಾನಿಸ್ತಾನವನ್ನು 6 ವಿಕೆಟ್ ಗಳಿಂದ ಸೋಲಿರುವ ಆಸ್ಟ್ರೇಲಿಯಾ ಕೂಡಾ ನಾಲ್ಕನೇ ಬಾರಿ ಕಪ್ ಎತ್ತಲು ಭಾರತದ ವಿರುದ್ಧ ಸೆಣಸಲು ಸಜ್ಜಾಗಿದೆ.

ಸಚಿನ್ ತೆಂಡೂಲ್ಕರ್ ರಿಂದ ಮೊಹಮ್ಮದ್ ಕೈಫ್ ತನಕ ಪೃಥ್ವಿ ಶಾ ಪಡೆ ಸಾಧನೆಯನ್ನು ಹಾಲಿ, ಮಾಜಿ ಕ್ರಿಕೆಟರ್ಸ್ ಹಾಡಿ ಹೊಗಳಿದ್ದಾರೆ. ಟ್ವೀಟ್ ಗಳಲ್ಲಿ ಶುಭ ಹಾರೈಕೆ ಸಂದೇಶ ಓದಿ...

ಸಚಿನ್ ತೆಂಡೂಲ್ಕರ್ ಅವರಿಂದ ಶುಭಹಾರೈಕೆ

ಎಲ್ಲಾ ವಿಭಾಗಗಳಲ್ಲೂ ಉತ್ತಮ ಕಾರ್ಯ ನಿರ್ವಹಣೆ ತೋರಿ, ಗುಣಮಟ್ಟದ ಆಟ ಪ್ರದರ್ಶಿಸಿದ್ದಾರೆ. ಗುಡ್ ಲಕ್ ಎಂದ ಸಚಿನ್ ತೆಂಡೂಲ್ಕರ್.

ಸುರೇಶ್ ರೈನಾ ಅವರಿಂದ ಶುಭ ಹಾರೈಕೆ

ದೊಡ್ಡ ಮೈಲಿಗಲ್ಲು ದಾಟಲು ಇನ್ನೊಂದೇ ಹೆಜ್ಜೆ ಸಾಕು, ಅದ್ಭುತ ಪ್ರದರ್ಶನ ನೀಡುತ್ತಿದ್ದೀರಿ. ವಿಶ್ವಕಪ್ ನಲ್ಲಿ ಆಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಉತ್ತಮವಾಗಿ ಆಡಿ ಎಂದು ಕ್ರಿಕೆಟರ್ ಸುರೇಶ್ ರೈನಾ ಶುಭ ಹಾರೈಸಿದ್ದಾರೆ.

ಮೊಹಮ್ಮದ್ ಕೈಫ್

ಅಂಡರ್ 19 ವಿಶ್ವಕಪ್ ಮೂಲಕ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಪ್ರತಿಭೆ ಮೊಹಮ್ಮದ್ ಕೈಫ್ ಅವರು ಹಾಲಿ ಯುವ ತಂಡದ ಸಾಧನೆಯನ್ನು ಮೆಚ್ಚಿ ಶುಭ ಹಾರೈಸಿದ್ದಾರೆ.

ಬಿಸಿಸಿಐನಿಂದ ಶುಭ್ ಮನ್ ಗಿಲ್

ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 94 ಎಸೆತಗಳಲ್ಲಿ 102 ರನ್ ಚೆಚ್ಚಿದ ಶುಭ್ ಮನ್ ಗಿಲ್ ಗೆ ಶುಭ ಹಾರೈಸಿದ ಬಿಸಿಸಿಐ.

ಹರ್ಭಜನ್ ಸಿಂಗ್

ಶುಭ್ ಮನ್ ಗಿಲ್ ಅವರ ಶತಕವನ್ನು ಹೊಗಳಿರುವ ಹರ್ಭಜನ್ ಸಿಂಗ್ ಅವರು ಫೈನಲ್ ನಲ್ಲಿ ಗೆಲುವು ಸಾಧಿಸಿ ಎಂದು ಹಾರೈಸಿದ್ದಾರೆ.

ವಿವಿಎಸ್ ಲಕ್ಷ್ಮಣ್

ಅಂಡರ್ 19 ತಂಡದ ಫೀಲ್ಡಿಂಗ್ ಉತ್ತಮವಾಗಿದೆ. ಬ್ಯಾಟಿಂಗ್, ಬೌಲಿಂಗ್ ಶಕ್ತವಾಗಿದೆ. ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದ ವಿವಿಎಸ್ ಲಕ್ಷ್ಮಣ್.

ಸೆಹ್ವಾಗ್ ರಿಂದ ಶುಭ ಹಾರೈಕೆ

ಫೈನಲ್ ತಲುಪಿದ ಭಾರತದ ಅಂಡರ್ 19 ತಂಡಕ್ಕೆ ಶುಭ ಹಾರೈಸಿದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್.

Story first published: Tuesday, January 30, 2018, 13:34 [IST]
Other articles published on Jan 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X