ವಿಶ್ವಕಪ್‌ ಸೆಮಿಫೈನಲ್‌: ಮ್ಯಾಂಚೆಸ್ಟರ್‌ನಲ್ಲಿ ಹೊಳೆದ ಜಡೇಜಾ ಖಡ್ಗ!

By ಆರ್. ಕೌಶಿಕ್‌, ಲಂಡನ್‌
ICC World Cup 2019 : ಎಲ್ಲವನ್ನು ಮೆಟ್ಟಿನಿಂತು ಕೆಚ್ಚೆದೆಯ ಆಟವಾಡಲು ಇದೇ ಸ್ಪೂರ್ತಿ..? | Ravindra Jadeja
ICC WC 2019: India vs New Zealand: Bitten Jadeja pieces together a masterclass

ಮ್ಯಾಂಚೆಸ್ಟರ್‌, ಜುಲೈ 11: ಓಲ್ಡ್‌ಟ್ರಾಫರ್ಡ್‌ ಅಂಗಣದಲ್ಲಿ ಬುಧವಾರ (ಜುಲೈ 10) ಖಡ್ಗದ ರೀತಿಯಲ್ಲಿ ಕ್ರಿಕೆಟ್‌ ಬ್ಯಾಟ್‌ ಝಳಪಿಸಿತ್ತು. ರಜಪೂತಿನ ವೀರ ತಮ್ಮ ಖಡ್ಗ ಬದಲಾಗಿ ಬ್ಯಾಟ್‌ ಬಳಕೆಗೆ ತಂದಿದ್ದರು. ಎದುರಾಳಿಯ ದಾಳಿಗೆ ಪ್ರತಿ ಹೋರಾಟ ನಡೆಸುವ ಮೂಲಕ ಬೇಟೆಗಾರನನ್ನೇ ಅವರು ಬೇಟೆಯಾಡಿದ್ದರು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ತಮ್ಮ ಸರ್ವವನ್ನೂ ಪಣಕ್ಕಿಟ್ಟು ಅದ್ಭುತ ಅರ್ಧಶತಕ ಬಾರಿಸಿದ ರವೀಂದ್ರ ಜಡೇಜಾ ಅಭಿಮಾನಿಗಳ ಮನ ಗೆದ್ದಿದ್ದರು. ಸೋಲಿನ ಸುಳಿಯಲ್ಲಿದ್ದ ಟೀಮ್‌ ಇಂಡಿಯಾ ಪರ ಜಡೇಜಾ ನಡೆಸಿದ ಹೋರಾಟ ನಿಜಕ್ಕೂ ಪ್ರಶಂಸಾರ್ಹ.

ಅಂದಹಾಗೆ ಕಳೆದ ಒಂದು ವಾರ ರವೀಂದ್ರ ಜಡೇಜಾ ಪಾಲಿಗೆ ನಿಜಕ್ಕೂ ಅದ್ಭುತವಾಗಿ ಮುಡಿಬಂದಿದೆ. ಅಂದಹಾಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ತ್ರಿಶತಕಗಳನ್ನು ಬಾರಿಸಿರುವ ಸೌರಾಷ್ಟ್ರದ ಆಲ್‌ರೌಂಡರ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 192 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲೂ 176 ವಿಕೆಟ್‌ಗಳನ್ನು ಉರುಳಿಸಿದ ಕೀರ್ತಿ ಅವರದ್ದು.

ಬೌನ್ಸರ್‌ ಪೆಟ್ಟಿನಿಂದ ರಕ್ತ ಹರಿದರೂ ಆಸೀಸ್‌ ಪರ ಹೋರಾಡಿದ ಕ್ಯಾರಿ!

ಬ್ಯಾಟಿಂಗ್‌ನಲ್ಲಿ ಟೆಸ್ಟ್‌ ಮತ್ತು ಏಕದಿನದಲ್ಲಿ ಕ್ರಮವಾಗಿ 32.28 ಮತ್ತು 30.60ರ ಸರಾಸರಿ ಹೊಂದಿದ್ದಾರೆ. ಇದೇ ಮಾದರಿಗಳಲ್ಲಿ ಅವರ ಬೌಲಿಂಗ್‌ ಕ್ರಮವಾಗಿ 23.68 ಮತ್ತು 35.90ರ ಸರಾಸರಿ ಹೊಂದಿದೆ. ಹೀಗಿರುವಾಗ ತಮ್ಮದೇ ದೇಶದ ಮಾಜಿ ಅಂತಾರಾಷ್ಟ್ರೀಯ ಆಟಗಾರರೊಬ್ಬರು ಜಡೇಜಾರನ್ನು "ಚೂರು ಪಾರು" ಪಾರು ಆಟಗಾರ ಎಂದು ಸಂಭೋದಿಸಿದಾಗ ನೋವಾಗದೇ ಇರುತ್ತದೆಯೇ. ಖಂಡಿತಾ ನೋವಾಗುತ್ತದೆ.

ಇದಕ್ಕೆ ಉತ್ತರವಾಗಿ ರವೀಂದ್ರ ಜಡೇಜಾ ತಮ್ಮಿಂದ ಸಾಧ್ಯವಾಗಬಲ್ಲ ಅತ್ಯುತ್ತಮ ಹಾದಿಯಲ್ಲೇ ಉತ್ತರ ನೀಡಿದ್ದಾರೆ. ಶಿಸ್ತಿನಿಂದ ನಿಖರವಾಗಿ ಬೌಲಿಂಗ್‌ ದಾಳಿ ನಡೆಸಿದರೆ, ಬ್ಯಾಟಿಂಗ್‌ನಲ್ಲಿ ಮುಕ್ತವಾಗಿ ಬ್ಯಾಟ್‌ ಬೀಸಿದರು. ಇನ್ನು ಕ್ಷೇತ್ರರಕ್ಷಣೆಯಲ್ಲಂತೂ ತಮ್ಮ ಜೀವವೇ ಅಡಗಿದೆ ಎಂಬಂತೆ ದಿಟ್ಟತನ ಪ್ರದರ್ಶಿಸುತ್ತಾರೆ. ಹಾ... ಜಡೇಜಾ ಫೀಲ್ಡಿಂಗ್‌ ಮಾಡುತ್ತಾರ! ಕ್ರೀಡಾಂಗಣದಲ್ಲಿ ಅವರೊಬ್ಬರ ಫೀಲ್ಡಿಂಗ್‌ ವೀಕ್ಷಣೆಗೆ ಜನ ಸಾಗರ ಸೇರಬಲ್ಲದು. ಅಷ್ಟು ಚುರುಕಿನ ಫೀಲ್ಡರ್‌ ಜಡೇಜಾ. ಹುಲ್ಲು ಹಾಸಿನ ಮೇಲೆ ರಾಕೆಟ್‌ ಹೋಗುವಂತೆ ಜಾರಬಲ್ಲರು. ಕಿಂಚಿತ್ತೂ ಅಳುಕಿಲ್ಲ ಚೆಂಡನ್ನು ಯಾವುದೇ ಸಂದರ್ಭದಲ್ಲಿ ತಡೆದುನಿಲ್ಲಿಸಬಲ್ಲರು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸೆಮಿಫೈನಲ್‌ ಪಂದ್ಯದಲ್ಲಿ ರಾಸ್‌ ಟೇಲರ್ ಅವರನ್ನು ಜಡೇಜಾ ರನ್‌ಔಟ್‌ ಮಾಡಿದ ರೀತಿ. 70 ಗಜ ದೋರದಿಂದ ಸ್ಟಂಪ್ಸ್‌ಗೆ ನೇರವಾಗಿ ಗುರಿಯಿಟ್ಟು ಅದ್ಭುತ ರೀತಿಯಲ್ಲಿ ರನ್‌ಔಟ್‌ ಮಾಡಿದ್ದರು.

ಕ್ರಿಕೆಟ್‌ ವಿಶ್ವಕಪ್‌: ವಿರಾಟ್‌ ಕೊಹ್ಲಿ-ಕೇನ್‌ ವಿಲಿಯಮ್ಸನ್‌ ಯಶಸ್ಸಿನ ಹಾದಿ

ಇದಕ್ಕೂ ಮುನ್ನ ತಮ್ಮ ಬೌಲಿಂಗ್‌ನಲ್ಲೂ ಕರಾಮತ್ತು ಪ್ರದರ್ಶಿಸಿದ್ದ ಜಡೇಜಾ 10 ಓವರ್‌ಗಳಲ್ಲಿ 34 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು. ಚೆಂಡಿನ ಮೇಲೆ ಅದ್ಭುತ ರೀತಿಯಲ್ಲಿ ಹತೋಟಿ ಕಂಡುಕೊಂಡಿದ್ದ ಜಡೇಜಾ, ಪಿಚ್‌ನ ಸಂಪೂರ್ಣ ಲಾಭ ಪಡೆದು ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ ಹೆನ್ರಿ ನಿಕೋಲ್ಸ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಅವರ ಈ ಭರ್ಜರಿ ಪ್ರದರ್ಶನ ಕಂಡು ಕಳೆದ ಒಂದೂವರೆ ವರ್ಷದಿಂದ ಜಡೇಜಾರನ್ನು ಏಕದಿನ ಕ್ರಿಕೆಟ್‌ ತಂಡದಲ್ಲಿ ಆಡಿಸಿಲ್ಲವೇಕೆ ಎಂಬ ಅಚ್ಚರಿ ಎದುರಾಗುತ್ತದೆ.

ಇದಾದ ಬಳಿಕ ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ ಆಡಿದ ಅತ್ಯಂತ ಅದ್ಭುತ ಇನಿಂಗ್ಸ್ ಒಂದನ್ನು ಅವರು ಆಡಿದ್ದರು. ರೋಹಿತ್‌ ಶರ್ಮಾ ಟೂರ್ನಿಯಲ್ಲಿ 5 ಶತಕ ಸಿಡಿಸಿದ್ದಾರೆ ಹೌದು. ಪ್ರತಿಯೊಂದು ಶತಕವೂ ಅದರದ್ದೇ ಆದ ಮಹತ್ವವನ್ನು ಪಡೆದಿದೆ. ವಿರಾಟ್‌ ಕೊಹ್ಲಿ ಕೂಡ ಸತತ 5 ಅರ್ಧಶತಕ ದಾಖಲಿಸಿದ್ದಾರೆ. ಕೆ.ಎಲ್‌ ರಾಹುಲ್‌ ಕೂಡ 360 ರನ್‌ಗಳನ್ನು ಗಳಿಸಿದ್ದಾರೆ. ಈ ಎಲ್ಲಾ ರನ್‌ಗಳು ಹರಿದು ಬಂದಿರುವುದು ನಾಲ್ಕನೇ ಅಥವಾ 1ನೇ ಕ್ರಮಾಂಕದಲ್ಲಿ. ಆದರೆ, ಜಡೇಜಾಗೆ ಈ ಪಂದ್ಯಕ್ಕೂ ಮುನ್ನ ಆಡಲು ಸಿಕ್ಕಿದ್ದು ಒಂದು ಪಂದ್ಯ ಮಾತ್ರ. ಆಡುವ 11ರ ಬಳಗದಲ್ಲಿ ಅವಕಾಶ ಕೊನೆಗೂ ಗಿಟ್ಟಿಸಿದ ಜಡೇಜಾ ಉಳಿದವರ ಎಲ್ಲಾ ಸಾಧನೆಯನ್ನು ಮರೆಮಾಚಿಸುವಂತಹ ಅದ್ಭುತ ಇನಿಂಗ್ಸ್‌ ಆಡಿದರು.

ವಿಶ್ವಕಪ್‌ ಸೆಮಿಫೈನಲ್‌ ಸೋಲಿಗೆ ಕಾರಣ ಹೇಳಿದ ವಿರಾಟ್‌ ಕೊಹ್ಲಿ

ಜಡೇಜಾ ಸಿಡಿಸಿದ 59 ಎಸೆತಗಳಲ್ಲಿನ 77 ರನ್‌ಗಳ ಅರ್ಧಶತಕ ಅತ್ಯಂತ ಒತ್ತಡದ ಸಂದರ್ಭದಲ್ಲಿ ಎಲ್ಲವು ಮುಗಿದೇ ಹೋಯಿತು ಎನ್ನುವ ಸಂದರ್ಭದಲ್ಲಿ ಎಂಬುದು ವಿಶೇಷ. ಆದರೂ ಅವರ ಅರ್ಧಶತಕ ವ್ಯರ್ಥವಾಯಿತು. 5 ರನ್‌ಗಳಿಸುವ ಹೊತ್ತಿಗಾಗಲೇ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡ ಹೀನಾಯ ಸೋಲಿನ ಮುಖಭಂಗ ತಪ್ಪಿಸಿಕೊಂಡಿತು ಎಂದರೆ ಅದು ಜಡೇಜಾ ಅವರ ಅದ್ಭುತ ಇನಿಂಗ್ಸ್‌ನಿಂದ. "ಚೂರು-ಪಾರು" ಆಟಗಾರ ಎಂದೆಲ್ಲ ಅಪಮಾನ ಎದುರಿಸಿದ್ದ ಆಟಗಾರನ ಮನಸಿನಲ್ಲಿ ಅಡಗಿದ್ದ ಆಕ್ರೋಶವೆಲ್ಲವೂ ಅವರ ಬ್ಯಾಟ್‌ ಮೂಲಕ ಹೊರಬಂದು ಎಲ್ಲರಿಗೂ ರೋಮಾಂಚನ ತಂದ ಅದ್ಭುತ ಹೊಡೆತಗಳು ಮೂಡಿದವು.

ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಡಬೇಕೆಂಬ ದಿಟ್ಟ ತನದಿಂದಲೇ ಜಡೇಜಾ ಬ್ಯಾಟಿಂಗ್‌ಗೆ ಇಳಿದಿದ್ದರು. ಅದು ತಮಗಾಗಿಯೂ ಅಥವಾ ಬೇರೆಯವರಿಗಾಗಿಯೂ ಆಗಿರಬಹುದು. ಅರ್ಧಶತಕ ಸಿಡಿಸಿದ ಬಳಿಕ ಬ್ಯಾಟ್‌ ಅನ್ನು ಖಡ್ಗದಂತೆ ಝಳಪಿಸಿದ ಜಡೇಜಾ ಅವರ ಮುಖದಲ್ಲಿ ಮಂದಹಾಸದ ಬದಲಾಗಿ ಸಿಟ್ಟು ಕಾಣಿಸಿದ್ದು ಇದಕ್ಕೇ ಇರಬಹುದು. ಹಾ.. ನನ್ನ ಕೆಲಸ ಇಲ್ಲಿಗೇ ಮುಗಿದಿಲ್ಲ. ತಂಡವನ್ನು ಗೆಲುವಿನ ದಡ ಮುಟ್ಟಿಸುವ ಕೆಲಸ ಬಾಕಿ ಎಂದೂ ಕೂಡ ಅವರ ಮುಖದಲ್ಲಿ ನಗು ಇಲ್ಲವಾಗಿತ್ತೇನೊ. ಏಕೆಂದರೆ ಅವರ ಮುಂದಿನ ಹಾದಿ ಮತ್ತಷ್ಟು ಕಠಿಣವಾಗಿತ್ತು.

ಸೆಮಿಫೈನಲ್‌ ಗೆದ್ದ ಬಳಿಕ ಕಿವೀಸ್‌ ನಾಯಕ ವಿಲಿಯಮ್ಸನ್‌ ಹೇಳಿದ್ದಿದು

"ಕಳೆದ ಒಂದು ವಾರದಲ್ಲಿ ಏನೆಲ್ಲಾ ಆಯಿತು ಎಂಬುದನ್ನು ತಿಳಿದಿರುವಾಗ ಜಡೇಡಾ ಬಗ್ಗೆ ನಾವೇನೂ ಹೇಳುವ ಹಾಗಿಲ್ಲ. ಕಣಕ್ಕಿಳಿದು ಅಬ್ಬರಿಸಲು ಅವರು ಸಂಪೂರ್ಣ ಸಜ್ಜಾಗಿದ್ದರು. ಅವರ ಆಟದಲ್ಲಿ ಕಂಡ ಉತ್ಸಾಹವೇ ಇದಕ್ಕೆ ಸಾಕ್ಷಿ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೆಲ ಬಾರಿ ಅವರು ಇಂಥದ್ದೇ ಆಟವಾಡಿದ್ದಾರೆ. ಒತ್ತಡದಲ್ಲಿ ಅದ್ಭುತ ಆಟವಾಡಿದ್ದಾರೆ. ನಾನು ಕಳೆದ 10 ವರ್ಷಗಳಿಂದ ಜಡೇಜಾ ಅವರನ್ನು ಕಂಡಂತೆ, ಅವರ ಜೊತೆಯಲ್ಲಿ ಆಡಿದಾಗಲೆಲ್ಲಾ ಅವರಿಂದ ಮೂಡಿಬಂದಂತಹ ಅತ್ಯಂತ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವಿದು. ಏಕೆಂದರೆ ಇಲ್ಲಿ ಅಷ್ಟು ಒತ್ತಡವಿತ್ತು. ಒಂದು ಹಂತದಲ್ಲಿ ನಮ್ಮ ತಂಡ ಸಂಪೂರ್ಣ ಶರಣಾದಂತಿತ್ತು. ಈ ಸಂದರ್ಭದಲ್ಲಿ ಅವರು ಇಂಥದ್ದೊಂದು ಅದ್ಭುತ ಇನಿಂಗ್ಸ್‌ ಆಡಿದರು. ಸ್ಫೂರ್ತಿಯುತ ಪ್ರದರ್ಶನವಿದು," ಎಂದು ಪಂದ್ಯದ ಬಳಿಕ ಮಾತನಾಡಿದ ನಾಯಕ ವಿರಾಟ್‌ ಕೊಹ್ಲಿ ಆಲ್‌ರೌಂಡ್‌ ಆಟವಾಡಿದ ಜಡೇಜಾ ಅವರ ಪ್ರದರ್ಶನವನ್ನು ಹೊಗಳಿದರು.

ಹೊಗಳಿಕೆಯಾಗಲೀ ಅಥವಾ ತೆಗಳಿಕೆಯಾಗಲೀ ಅದರಿಂದ ಸ್ಫೂರ್ತಿ ಪಡೆದು ಕೆಚ್ಚೆದೆಯ ಪ್ರದರ್ಶನ ನೀಡಿದರೆ ಎಲ್ಲಾ ಚೂರು ಪಾರು ವಿಷಯಗಳು ಮರೆತುಹೋಗುತ್ತವೆ. ಜಡೇಜಾ ಆಡಿದಂತಹ ಅದ್ಭುತ ಆಟವೇ ಶಾಶ್ವತವಾಗುತ್ತದೆ.

(ಕಳೆದ ಮೂರು ದಶಕಗಳಿಂದ ಕ್ರಿಕೆಟ್‌ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಆರ್‌. ಕೌಶಿಕ್‌ ಅವರು ಈವರೆಗೆ 7 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳನ್ನು ವರದಿ ಮಾಡಿದ್ದಾರೆ. ಕ್ರಿಕಟ್‌ ಆಟವನ್ನು ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದಾರೆ)

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, July 11, 2019, 19:51 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more