ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಮಹಿಳಾ ಟಿ20 ಕ್ರಿಕೆಟರ್ ವಾರ್ಷಿಕ ಪ್ರಶಸ್ತಿಗೆ ಸತತ 2ನೇ ಬಾರಿಗೆ ಸ್ಮೃತಿ ಮಂಧಾನ ನಾಮಿನೇಟ್

ICC Womens T20I cricketer of the Year Award: Smriti Mandhana nominated for 2nd successive year

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ, ಉಪನಾಯಕಿ ಸ್ಮೃತಿ ಮಂಧಾನ 2022ರಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಂಧಾನ ಪ್ರದರ್ಶನ ಗಮನಾರ್ಹವಾಗಿತ್ತು. ಹೀಗಾಗಿ ಈ ಬಾರಿಯೂ ಐಸಿಸಿಯ ವಾರ್ಷಿಕ ಟಿ20 ಕ್ರಿಕೆಟರ್ ಪ್ರಶಸ್ತಿಗೆ ಮಹಿಳಾ ವಿಭಾಗದಿಂದ ನಾಮಿನೇಶ್ ಆಗಿದ್ದಾರೆ. ಕಳೆದ ವರ್ಷ ಕೂಡ ಮಂಧಾನ ಈ ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದರು.

ಈ ಪ್ರಶಸ್ತಿಗಾಗಿ ಸ್ಮೃತಿ ಮಂಧಾನ ಮೂವರು ಆಟಗಾರ್ತಿಯರಿಂದ ಪೈಪೊಟಿ ಎದುರಿಸುತ್ತಿದ್ದಾರೆ. ಪಾಕಿಸ್ತಾನದ ನಿದ ದಾರ್, ನ್ಯೂಜಿಲೆಂಡ್‌ನ ಸೋಫೀ ಡಿವೈನ್ ಹಾಗೂ ಆಸ್ಟ್ರೇಲಿಯಾದ ತಹ್ಲಿಯಾ ಮೆಕ್‌ಗ್ರಾಥ್ ಕೂಡ ಈ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದಾರೆ.

ಕಳೆದ ವರ್ಷ ಸ್ಮೃತಿ ಟಾಮ್ಮಿ ಬೈವ್ಮಾಂಟ್, ನ್ಯಾಟ್ ಸೈವರ್ ಹಾಗೂ ಗ್ಯಾಬಿ ಲೂಯಿಸ್ ಜೊತೆಗೆ ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಟಾಮ್ಮಿ ಬೈವ್ಮಾಂಟ್ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಕಳೆದ ವರ್ಷ ಈ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದವರ ಪೈಕಿ ಮಂಧಾನ ಹೆಸರು ಮಾತ್ರವೇ ಮತ್ತೊಮ್ಮೆ ಕಾಣಿಸಿಕೊಂಡಿದೆ.

Aus vs SA 2nd Test: ಹರಿಣಗಳಿಗೆ ಮುಖಭಂಗ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬೃಹತ್ ಜಯ ಸಾಧಿಸಿದ ಆಸ್ಟ್ರೇಲಿಯಾAus vs SA 2nd Test: ಹರಿಣಗಳಿಗೆ ಮುಖಭಂಗ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬೃಹತ್ ಜಯ ಸಾಧಿಸಿದ ಆಸ್ಟ್ರೇಲಿಯಾ

ಭಾರತದ ಉಪನಾಯಕಿ 2022ರಲ್ಲಿ ಅದ್ಭುತ ಫಾರ್ಮ್‌ ಪ್ರದರ್ಶಿಸಿದ್ದಾರೆ. ಒಟ್ಟಾರೆಯಾಗಿ ಈ ವರ್ಷ 23 ಪಂದ್ಯಗಳಲ್ಲಿ ಆಡಿರುವ ಮಂಧಾನ 5 ಅರ್ಧಶತಕಗಳನ್ನು ಸಿಡಿಸಿದ್ದು ಒಟ್ಟು 593 ರನ್ ಗಳಿಸಿದ್ದಾರೆ. ಇನ್ನು ಚುಟುಕು ಮಾದರಿಯಲ್ಲಿ ಸ್ಮೃತಿ 133 ರನ್ ಗಳಿಸಿದ್ದರೂ ಕೂಡ ಕಡಿಮೆ ಪಂದ್ಯಗಳನ್ನು ಆಡಿರುವ ಮಂಧಾನ ಈ ವರ್ಷ ಚುಟುಕು ಮಾದರಿಯಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ಕೂಡ ಸ್ಮೃತಿ 9 ಪಂದ್ಯಗಳಲ್ಲಿ 255 ರನ್‌ಗಳನ್ನು ಸಿಡಿಸಿ ಭಾರತದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದರು.

ಮಂಧಾನ ವೈಯಕ್ತಿಕವಾಗಿ ಹಲವು ಮೈಲಿಗಲ್ಲುಗಳನ್ನು ಈ ವರ್ಷ ದಾಟಿದ್ದಾರೆ. 23 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವುದರಿಂದ ಹಿಡಿದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2500 ರನ್‌ಗಳ ಗಡಿ ದಾಟಿದ ಸಾಧನೆಯನ್ನು ಕೂಡ ಮಾಡಿದ್ದಾರೆ ಮಂಧಾನ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಮಹಿಳೆಯರ ಟಿ20 ಏಷ್ಯಾಕಪ್‌ನಲ್ಲಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿಯೂ ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ.

Story first published: Thursday, December 29, 2022, 16:38 [IST]
Other articles published on Dec 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X