ಒಂದು ವೇಳೆ ನೀವು ರನ್ ಗಳಿಸಿದರೆ, ತಂಡದಲ್ಲಿರುತ್ತೀರಿ: ಜಾನಿ ಬೇರ್ಸ್ಟೋವ್

ಲಾರ್ಡ್ಸ್: ನೀವು ಉತ್ತಮ ರನ್ ಗಳಿಸಿದರೆ ಮಾತ್ರ ತಂಡದಲ್ಲಿರುತ್ತೀರಿ. ಹೀಗಾಗಿ ಅವಕಾಶ ಸಿಕ್ಕಾಗೆಲ್ಲ ಒಳ್ಳೆಯ ರನ್ ಗಳಿಸಲು ಯೋಚಿಸುತ್ತಿದ್ದೇನೆ ಎಂದು ಇಂಗ್ಲೆಂಡ್ ಅನುಭವಿ ಬ್ಯಾಟ್ಸ್‌ಮನ್‌ ಜಾನಿ ಬೇರ್ಸ್ಟೋವ್ ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಲಂಡನ್‌ನ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ ವಿಚಾರವಾಗಿ ಬೇರ್ಸ್ಟೋವ್ ಈ ಹೇಳಿಕೆ ನೀಡಿದ್ದಾರೆ.

ಐಪಿಎಲ್ ದ್ವಿತೀಯ ಹಂತದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ಆಟಗಾರರ ಪಟ್ಟಿಐಪಿಎಲ್ ದ್ವಿತೀಯ ಹಂತದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ಆಟಗಾರರ ಪಟ್ಟಿ

ದ್ವಿತೀಯ ಟೆಸ್ಟ್‌ ಪಂದ್ಯದ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ 57 ರನ್‌ ಗಳಿಸಿದ್ದರು. ಇದಕ್ಕೂ ಮುನ್ನ ಬೇರ್ಸ್ಟೋವ್ ಒಂದಿಷ್ಟು ಪಂದ್ಯಗಳಲ್ಲಿ ರನ್ ಗಳಿಸದೆ ಪರದಾಡಿದ್ದರು. ಹೀಗಾಗಿಯೆ ಮುಂದೆ ಅವಕಾಶ ಸಿಕ್ಕಾಗೆಲ್ಲ ತಾನು ಒಳ್ಳೆಯ ರನ್ ಸಂಪಾದಿಸಲು ನೋಡುತ್ತೇನೆ ಎಂದು ಬೇರ್ಸ್ಟೋವ್ ಹೇಳಿದ್ದಾರೆ.

ಎರಡು ವರ್ಷಗಳ ಬಳಿಕ ಟೆಸ್ಟ್‌ ಮೊದಲ ಅರ್ಧ ಶತಕ ಬಾರಿಸಿದ ಬೇರ್ಸ್ಟೋವ್

ಎರಡು ವರ್ಷಗಳ ಬಳಿಕ ಟೆಸ್ಟ್‌ ಮೊದಲ ಅರ್ಧ ಶತಕ ಬಾರಿಸಿದ ಬೇರ್ಸ್ಟೋವ್

ಭಾರತ ವಿರುದ್ಧದ ಮೊದಲನೇ ಟೆಸ್ಟ್‌ ಮೂಲಕ ಜಾನಿ ಬೇರ್ಸ್ಟೋವ್ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದರು. ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಅರ್ಧ ಶತಕ ಬಾರಿಸಿದ್ದರು. ದ್ವಿತೀಯ ಟೆಸ್ಟ್‌ನಲ್ಲಿ ನಾಯಕ ಜೋ ರೂಟ್‌ ಕೂಡ ಅಜೇಯ 180 ರನ್ ಬಾರಿಸಿದ್ದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 27 ರನ್ ಮುನ್ನಡೆ ಸಾಧಿಸಲು ಸಾಧ್ಯವಾಗಿತ್ತು. ಭಾರತ ಈಗ ದ್ವಿತೀಯ ಇನ್ನಿಂಗ್ಸ್ ಆಡುತ್ತಿದ್ದು, ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭಾನುವಾರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 82 ಓವರ್‌ಗಳಲ್ಲಿ 6 ವಿಕೆಟ್ ಕಳೆದು 181 ರನ್ ಗಳಿಸಿ 154 ರನ್ ಮುನ್ನಡೆಯಲ್ಲಿತ್ತು. ರಿಷಭ್ ಪಂತ್ 14, ಇಶಾಂತ್ ಶರ್ಮಾ 4 ರನ್‌ನೊಂದಿಗೆ ಕ್ರೀಸ್‌ನಲ್ಲಿದ್ದರು. ಈ ರನ್ ನೋಡಿದರೆ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆ ಹಾಕೋದು ಅನುಮಾನವಾಗಿದೆ.

ತಂಡದಲ್ಲಿ ಮಾನಸಿಕ ಸಮತೋಲನ ಕಾಪಾಡೋದು ತುಂಬಾ ಮುಖ್ಯ

ತಂಡದಲ್ಲಿ ಮಾನಸಿಕ ಸಮತೋಲನ ಕಾಪಾಡೋದು ತುಂಬಾ ಮುಖ್ಯ

ನೀವು ಆಡಲು ಬಯಸಿದರೆ ಅಥವಾ ಆಡಿ ಉತ್ತಮ ರನ್ ಗಳಿಸಿದರೆ ನೀವು ತಂಡದಲ್ಲಿರುತ್ತೀರಿ. ತಂಡದಲ್ಲಿ ಮಾನಸಿಕ ಸಮತೋಲನ ಕಾಪಾಡೋದು ತುಂಬಾ ಮುಖ್ಯ. ನನ್ನ ಮಾನಸಿಕ ಆರೋಗ್ಯ ಈಗ ಚೆನ್ನಾಗಿರುವುದರಿಂದ ನಾನೀಗ ತಂಡದಲ್ಲಿದ್ದೇನೆ. ಬ್ಯಾಟಿಂಗ್ ತಂತ್ರಗಾರಿಕೆ ಮತ್ತು ನಾವು ಅದನ್ನು ಬಳಸಿಕೊಳ್ಳೋದು ಕೂಡ ಮುಖ್ಯ. ಹಾಗಾಗಿ ನಾನು ಟೆಸ್ಟ್‌ನಲ್ಲಿ ಇನ್ನೊಂದಿಷ್ಟು ಕಾಲ ಮುಂದುವರೆಯುವ ಭರಸೆ ಹೊಂದಿದ್ದೇನೆ," ಎಂದು 2019ರ ಆ್ಯಷಸ್ ಸರಣಿಯಲ್ಲಿ ಅರ್ಧ ಶತಕ (52 ರನ್) ಬಾರಿಸಿದ್ದ ಬೇರ್ಸ್ಟೋವ್ ಹೇಳಿದ್ದಾರೆ. ಬೇರ್ಸ್ಟೋವ್ ಬಾರಿಸಿದ ಹಿಂದಿನ ಕೊನೇ ಟೆಸ್ಟ್ ಅರ್ಧ ಶತಕ ಅದಾಗಿತ್ತು. ವೈಟ್‌ಬಾಲ್ ಕ್ರಿಕೆಟ್‌ನ ಸ್ಪೆಷಾಲಿಸ್ಟ್ ಆಗಿರುವ ಜಾನಿ ಈಚೆಗೇಕೋ ಟೆಸ್ಟ್‌ ಕ್ರಿಕೆಟ್‌ನಿಂದ ಕಡೆಗಣಿಸಲ್ಪಟ್ಟಿದ್ದರು. ಇದೇ ಕಾರಣಕ್ಕೆ ಕೊಂಚ ಸಮಯದ ಬಳಿಕ ಬೇರ್ಸ್ಟೋವ್ ಟೆಸ್ಟ್‌ ತಂಡಕ್ಕೆ ವಾಪಸ್ ಆಗಿದ್ದರು. ಅದೂ ಕೂಡ ಆಲ್ ರೌಂಡರ್ ಬೆನ್ ಸ್ಟೋಕ್ಸ್, ವೇಗಿ ಜೋಫ್ರಾ ಆರ್ಚರ್ ಅನಿವಾರ್ಯವಾಗಿ ತಂಡದಿಂದ ಹೊರಗುಳಿದಿರುವುದರಿಂದ ಅನುಭವಿ ಜಾನಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಸಿಕ್ಕಿದೆ.

ಭಾರತಕ್ಕೆ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಆಸರೆ

ಭಾರತಕ್ಕೆ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಆಸರೆ

ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಬಿಟ್ಟು ಯಾರಿಂದಲೂ ಗಮನಾರ್ಹ ರನ್ ಬರಲಿಲ್ಲ. ಕೆಎಲ್ ರಾಹುಲ್ 5, ರೋಹಿತ್ ಶರ್ಮಾ 21, ಚೇತೇಶ್ವರ್ 45, ನಾಯಕ ವಿರಾಟ್ ಕೊಹ್ಲಿ 20, ಅಜಿಂಕ್ಯ ರಹಾನೆ 61, ರವೀಂದ್ರ ಜಡೇಜಾ 3 ರನ್ ಬಾರಿಸಿ ವಿಕೆಟ್ ನೀಡಿದ್ದಾರೆ. ರಿಷಭ್ ಪಂತ್ 14, ಇಶಾಂತ್ ಶರ್ಮಾ 4 ರನ್‌ನೊಂದಿಗೆ ಭಾನುವಾರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿದ್ದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದಿಂದ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ಚೇತೇಶ್ವರ್ ಪೂಜಾರ 9, ವಿರಾಟ್ ಕೊಹ್ಲಿ 42, ಅಜಿಂಕ್ಯ ರಹಾನೆ 1, ರಿಷಭ್ ಪಂತ್ 37, ರವೀಂದ್ರ ಜಡೇಜಾ 40, ಮೊಹಮ್ಮದ್ ಶಮಿ ೦, ಇಶಾಂತ್ ಶರ್ಮಾ 8 ರನ್‌ ಬಾರಿಸಿದರು. ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ ಪ್ರಮುಖ 5 ವಿಕೆಟ್‌ ಉರುಳಿಸಿ ಗಮನ ಸೆಳೆದರು. 29 ಓವರ್‌ ಎಸೆದಿದ್ದ ಆ್ಯಂಡರ್ಸನ್ 62 ರನ್ ನೀಡಿ 5 ವಿಕೆಟ್ ಮುರಿದಿದ್ದರು. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್‌ ಬೂಮ್ರಾ ವಿಕೆಟ್ ಗಳನ್ನು ಆ್ಯಂಡರ್ಸನ್ ಕೆಡವಿದರು.

ಭಾರತ ಈ ಟೆಸ್ಟ್‌ ಸರಣಿ ಗೆದ್ದರೆ ಇತಿಹಾಸ. ಆದರೆ ಗೆಲ್ಲೋದು ಕಷ್ಟ

ಭಾರತ ಈ ಟೆಸ್ಟ್‌ ಸರಣಿ ಗೆದ್ದರೆ ಇತಿಹಾಸ. ಆದರೆ ಗೆಲ್ಲೋದು ಕಷ್ಟ

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೊಂದನ್ನು ಗೆಲ್ಲದೆ ಭಾರತ ತಂಡ ಬರೋಬ್ಬರಿ 14 ವರ್ಷಗಳನ್ನು ಕಳೆದಿದೆ. ಕಳೆದ ಬಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. 2007ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದಿತ್ತು. ಈ ವೇಳೆ ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್ ಜಯ ಗಳಿಸಿತ್ತು. ಅದಾದ ಬಳಿಕ 2011, 2014 ಮತ್ತು 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿತ್ತು. ಇದರಲ್ಲಿ ಯಾವುದರಲ್ಲೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲ್ಲಲು ತಂಡಕ್ಕೆ ಅವಕಾಶವಿದೆ. ಆದರೆ ದ್ವಿತೀಯ ಪಂದ್ಯದಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ ರನ್ ನೋಡಿದರೆ ಭಾರತ ಸರಣಿ ಗೆಲ್ಲೋದು ಅನುಮಾನವೆನಿಸಿದೆ. ಮೊದಲ ಪಂದ್ಯವಂತೂ ಮಳೆಯ ಕಾರಣ ಡ್ರಾ ಅನ್ನಿಸಲ್ಪಟ್ಟಿತ್ತು. ಆದರೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಒಂದೇ ಭಾರತಕ್ಕಿರುವ ಕೊನೇ ಆಶಾ ಭಾವನೆ. ಪಂತ್ ಚೆನ್ನಾಗಿ ಆಡಿದರೆ ಭಾರತ ಆಂಗ್ಲರಿಗೆ ಉತ್ತಮ ಗುರಿ ನೀಡಲು ಸಾಧ್ಯವಿದೆ.

Mohammed Siraj ತಮ್ಮ celebration ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ | Oneindia Kannada
ಇಂಗ್ಲೆಂಡ್ ಪ್ಲೇಯಿಂಗ್ XI/ಭಾರತ ಪ್ಲೇಯಿಂಗ್ XI

ಇಂಗ್ಲೆಂಡ್ ಪ್ಲೇಯಿಂಗ್ XI/ಭಾರತ ಪ್ಲೇಯಿಂಗ್ XI

ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ಡಬ್ಲ್ಯೂ), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.

ಬೆಂಚ್: ಝ್ಯಾಕ್ ಕ್ರಾಲಿ, ಡೇನಿಯಲ್ ಲಾರೆನ್ಸ್, ಕ್ರೇಗ್ ಓವರ್‌ಟನ್, ಸಾಕಿಬ್ ಮಹಮೂದ್, ಓಲ್ಲಿ ಪೋಪ್, ಜ್ಯಾಕ್ ಲೀಚ್.

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಬೆಂಚ್: ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ.

For Quick Alerts
ALLOW NOTIFICATIONS
For Daily Alerts
Story first published: Sunday, August 15, 2021, 23:59 [IST]
Other articles published on Aug 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X