ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಆಟಗಾರನನ್ನು ಮೈದಾನದಲ್ಲಿ ನೋಡಲು ಕಾತರನಾಗಿದ್ದೇನೆ ಎಂದ ಪಾಟ್ ಕಮಿನ್ಸ್

ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ಮೊಹಾಲಿಯಲ್ಲಿ ತಮ್ಮ ತಯಾರಿಯನ್ನು ಆರಂಭಿಸಿದೆ. ಸೆಪ್ಟೆಂಬರ್ 20 ರಂದು ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಹಾಲಿ ಟಿ20 ವಿಶ್ವಕಪ್ ಚಾಂಪಿಯನ್‌ ತಂಡ ಆಸ್ಟ್ರೇಲಿಯಾ ಭಾರತದಲ್ಲಿ ತಮ್ಮ ಕೊನೆಯ ಮೂರು ಟಿ20 ಪಂದ್ಯಗಳನ್ನು ಗೆದ್ದಿದ್ದು ಭಾರತದ ವಿರುದ್ಧ ಕಠಿಣ ಸವಾಲು ಹಾಕಲಿದ್ದಾರೆ.

ಭಾರತದ ಪ್ರವಾಸಕ್ಕೆ ಮುನ್ನ ಆರನ್ ಫಿಂಚ್ ಬಳಗಕ್ಕೆ ಗಾಯಯ ಸಮಸ್ಯೆ ಎದುರಾಯಿತು. ವೇಗಿ ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್ ಗಾಯದ ಸಮಸ್ಯೆಯಿಂದ ಭಾರತದ ಪ್ರವಾಸವನ್ನು ತಪ್ಪಿಸಿಕೊಂಡರು. ಮುಂಬರವ ಪಂದ್ಯಗಳಲ್ಲಿ ಈಗ ಮೊದಲ ಬಾರಿಗೆ ಟಿಮ್ ಡೇವಿಡ್ ಆಸ್ಟ್ರೇಲಿಯಾ ತಂಡದ ಪರವಾಗಿ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದಾರೆ. ಟಿಮ್ ಡೇವಿಡ್ ಮೇಲೆ ಆಸ್ಟ್ರೇಲಿಯಾ ತಂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.

IND vs AUS: ಮೊದಲ ಟಿ20 ಪಂದ್ಯಕ್ಕೆ ಭಾರತ vs ಆಸ್ಟ್ರೇಲಿಯ ಸಂಭಾವ್ಯ ಆಡುವ 11ರ ಬಳಗIND vs AUS: ಮೊದಲ ಟಿ20 ಪಂದ್ಯಕ್ಕೆ ಭಾರತ vs ಆಸ್ಟ್ರೇಲಿಯ ಸಂಭಾವ್ಯ ಆಡುವ 11ರ ಬಳಗ

ಸಿಂಗಾಪುರದಲ್ಲಿ ಜನಿಸಿದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಟಿ20 ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜಗತ್ತಿನಾದ್ಯಂತ ಪ್ರತಿನಿಧಿಸುವ ಹಲವಾರು ಫ್ರಾಂಚೈಸಿಗಳೊಂದಿಗೆ ಅವರ ಅಂಕಿ ಅಂಶಗಳನ್ನು ನೋಡಿದರೆ ಟಿಮ್ ಡೇವಿಡ್ ಬ್ಯಾಟಿಂಗ್ ಬಗ್ಗೆ ತಿಳಿಯಲಿದೆ.

 ಟಿಮ್ ಡೇವಿಡ್ ಆಟಕ್ಕಾಗಿ ಕಾಯುತ್ತಿದ್ದೇನೆ

ಟಿಮ್ ಡೇವಿಡ್ ಆಟಕ್ಕಾಗಿ ಕಾಯುತ್ತಿದ್ದೇನೆ

ಭಾರತಕ್ಕೆ ಆಗಮಿಸಿದ ನಂತರ ಆಸ್ಟ್ರೇಲಿಯಾದ ಮೊದಲ ತರಬೇತಿ ಅವಧಿಯ ನಂತರ ಮಾತನಾಡಿದ ಪಾಟ್‌ ಕಮಿನ್ಸ್ ತಾವು ಟಿಮ್ ಡೇವಿಡ್ ಆಟ ನೋಡಲು ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ.

"ನಾವು ಮೊಹಾಲಿಯಲ್ಲಿದ್ದೇವೆ, ಓವೆಲ್‌ನ ಹೊರಗಡೆ ಮೊದಲ ಬಾರಿಗೆ ತರಬೇತಿ ಅವಧಿಯನ್ನು ಹೊಂದಿದ್ದೇವೆ. ತುಂಬಾ ಒಳ್ಳೆಯ ಸೆಷನ್, ಹೊಸ ಮುಖಗಳನ್ನು ನೋಡುವುದಕ್ಕೆ ಸಂತೋಷವಾಗಿದೆ. ಹೊಸ ಆಟಗಾರ ಟಿಮ್‌ ಡೇವಿಡ್ ತುಂಬಾ ದೂರಕ್ಕೆ ಬಾಲ್‌ಗಳನ್ನು ಹೊಡೆಯುತ್ತಿದ್ದಾರೆ. ಅವರ ಆಟವನ್ನು ನೋಡಲು ನಾನು ಕಾಯುತ್ತಿದ್ದೇನೆ" ಎಂದು ಹೇಳಿದ್ದಾರೆ.

T20 World Cup: ಟಾಪ್-5ರಲ್ಲಿ ಆಸಕ್ತಿ ಇಲ್ಲ; ದಿನೇಶ್ ಕಾರ್ತಿಕ್ ಬಗ್ಗೆ ಗೌತಮ್ ಗಂಭೀರ್ ದೊಡ್ಡ ಹೇಳಿಕೆ

ಭಾರತದಲ್ಲಿ ಆಡುವುದು ಅದ್ಭುತ ಅನುಭವ

ಭಾರತದಲ್ಲಿ ಆಡುವುದು ಅದ್ಭುತ ಅನುಭವ


"ಕೋವಿಡ್ ನಂತರ ಮೊದಲ ಬಾರಿಗೆ ಭಾರತಕ್ಕೆ ಮರಳಿರುವುದು ಅದ್ಭುತವಾಗಿದೆ. ಅಭಿಮಾನಿಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಕ್ರಿಕೆಟ್‌ ಬಗ್ಗೆ ಅಭಿಮಾನಿಗಳು ಯಾವಾಗಲೂ ಹೆಚ್ಚಿನ ಕ್ರೇಜ್ ಹೊಂದಿದ್ದಾರೆ. ಕೆಲವು ಕಿಕ್ಕಿರಿದ ಕ್ರೀಡಾಂಗಣಗಳಲ್ಲಿ ಆಡಲು ತುಂಬಾ ಖುಷಿಯಾಗುತ್ತದೆ. ಕೋಟ್ಯಂತರ ಜನ ನಮ್ಮ ಆಟವನ್ನು ನೋಡುತ್ತಿರುತ್ತಾರೆ, ನಾನು ಇಲ್ಲಿ ಕ್ರಿಕೆಟ್ ಆಡಲು ಕಾತರದಿಂದ ಕಾಯುತ್ತಿದ್ದೇನೆ" ಎಂದು ಹೇಳಿದ್ದಾರೆ.

ಫ್ರಾಂಚೈಸ್ ಲೀಗ್ ಕ್ರಿಕೆಟ್‌ನಲ್ಲಿ ಕೆಳ-ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಟಿಮ್ ಡೇವಿಡ್ ಅವರನ್ನು ಆಸ್ಟ್ರೇಲಿಯಾದ ಆಯ್ಕೆ ಸಮಿತಿಯು ಟಿ20 ವಿಶ್ವಕಪ್ 2022 ತಂಡದಲ್ಲಿ ಹೆಸರಿಸಲಾಯಿತು. ಅವರು 2019 ರಲ್ಲಿ ಪಾದಾರ್ಪಣೆ ಮಾಡಿದ ನಂತರ 14 ಟಿ20 ಪಂದ್ಯಗಳಲ್ಲಿ ಸಿಂಗಾಪುರವನ್ನು ಪ್ರತಿನಿಧಿಸಿದ್ದಾರೆ.

ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಆಸ್ಟ್ರೇಲಿಯಾ

ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಕೊನೆಯ ಬಾರಿಗೆ 2017 ರಲ್ಲಿ ಭಾರತದಲ್ಲಿ ಟಿ20 ಸರಣಿಯಲ್ಲಿ ಸೋತಿತ್ತು
2019 ರಲ್ಲಿ ಭಾರತದಲ್ಲಿ ನಡೆದ ಕೊನೆಯ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಆಸೀಸ್ ಭಾರತದ ವಿರುದ್ಧ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಅದಕ್ಕೂ ಮೊದಲು, ಅವರು 2017 ರಲ್ಲಿ ಎರಡು ಪಂದ್ಯಗಳ ಸರಣಿಯಲ್ಲಿ 1-1 ಡ್ರಾ ಮಾಡಿಕೊಂಡಿದ್ದರು.

ಈ ಬಾರಿಯ ಭಾರತದ ಪ್ರವಾಸದಲ್ಲಿ ಆಸ್ಟ್ರೇಲಿಯಾ 3 ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ಸರಣಿಯ ಮೊದಲನೇ ಪಂದ್ಯ ನಡೆಯಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 23ರಂದು ನಾಗ್ಪುರ ಮತ್ತು ಸೆಪ್ಟೆಂಬರ್ 25ರಂದು ಮೂರನೇ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ.

8.25 ಕೋಟಿ ರುಪಾಯಿಗೆ ಖರೀದಿಸಿದ್ದ ಮುಂಬೈ ಇಂಡಿಯನ್ಸ್

8.25 ಕೋಟಿ ರುಪಾಯಿಗೆ ಖರೀದಿಸಿದ್ದ ಮುಂಬೈ ಇಂಡಿಯನ್ಸ್

2022 ರ ಐಪಿಎಲ್ ಹರಾಜಿನಲ್ಲಿ ಟಿಮ್ ಡೇವಿಡ್ 8.25 ಕೋಟಿ ರುಪಾಯಿಗೆ ಹರಾಜಾಗಿದ್ದರು. ಮುಂಬೈ ಇಂಡಿಯನ್ಸ್ ತಂಡ ಅವರನ್ನು ಕೊಂಡಿಕೊಂಡಿತ್ತು. ಆರ್ ಸಿಬಿ ಪರವಾಗಿ ಕೂಡ ಟಿಮ್ ಡೇವಿಡ್ ಆಡಿದ್ದಾರೆ. ಕಳೆದ ವರ್ಷದಿಂದ ವಿಶ್ವದ ಹಲವು ಲೀಗ್‌ಗಳಲಲ್ಲಿ ಟಿಮ್ ಡೇವಿಡ್ ಬಹು ಬೇಡಿಕೆಯ ಆಟಗಾರರಾಗಿದ್ದಾರೆ. ಸಿಂಗಾಪುರದಲ್ಲಿ ಜನಿಸಿದ ಟಿಮ್ ಡೇವಿಡ್ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಬೆಳೆದರು.

ಟಿಮ್ ಡೇವಿಡ್ ಹೆಚ್ಚಾಗಿ ಫಿನಿಷರ್ ಪಾತ್ರವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಬಿಗ್ ಹಿಟ್‌ಗಳನ್ನು ಹೊಡೆಯುವುದರಲ್ಲಿ, ವೇಗವಾಗಿ ರನ್ ಗಳಿಸುವ ಮೂಲಕ ಲೀಗ್‌ ಗಳಲ್ಲಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ.

Story first published: Sunday, September 18, 2022, 16:44 [IST]
Other articles published on Sep 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X