ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS: ನಿರ್ಣಾಯಕ 3ನೇ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತದ ಆಡುವ 11ರ ಬಳಗ; ಪಂತ್ ಬದಲಿಗೆ ಭುವಿ?

IND vs AUS: Indias Prediction Playing 11 Against Australia In The Crucial 3rd T20 Match

ಹೈದರಾಬಾದ್‌ನಲ್ಲಿ ಭಾನುವಾರ ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿತ್ತು ಮತ್ತು ನಾಗ್ಪುರದ ಕಡಿಮೆ ಓವರ್‌ಗಳ 2ನೇ ಪಂದ್ಯದಲ್ಲಿ ಭಾರತ ಗೆಲ್ಲುವುದರೊಂದಿಗೆ ಮರಳಿದ್ದು, ಮೂರನೇ ಪಂದ್ಯವು ಸರಣಿ-ನಿರ್ಣಾಯಕವಾಗಲಿದೆ.

ಭಾರತ ತಂಡವು ನಾಗ್ಪುರದಲ್ಲಿ ಉಮೇಶ್ ಯಾದವ್‌ ಬದಲಿಯಾಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಂಡಕ್ಕೆ ಮರಳಿ ತಂದಿತು ಮತ್ತು ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಭುವನೇಶ್ವರ್ ಕುಮಾರ್ ಬದಲಿಗೆ ರಿಷಭ್ ಪಂತ್ ಅವರನ್ನು ಆಡಿಸಿತು. ಆದರೆ ಅದು ಪ್ರತಿ ತಂಡಕ್ಕೆ ಎಂಟು ಓವರ್‌ಗಳಿಗೆ ಕಡಿಮೆಯಾದ ಪಂದ್ಯವಾದ್ದರಿಂದ, ಭಾರತವು ಒಬ್ಬ ಬೌಲರ್ ಅನ್ನು ಕಡಿಮೆ ಮಾಡಿದ್ದು ಉಪಯೋಗವಾಯಿತು.

ಟೀಂ ಇಂಡಿಯಾ ಅಂತಿಮ ಟಿ20 ಪಂದ್ಯ ಗೆದ್ರೆ, ಪಾಕಿಸ್ತಾನದ ಈ ವಿಶ್ವದಾಖಲೆ ನುಚ್ಚುನೂರುಟೀಂ ಇಂಡಿಯಾ ಅಂತಿಮ ಟಿ20 ಪಂದ್ಯ ಗೆದ್ರೆ, ಪಾಕಿಸ್ತಾನದ ಈ ವಿಶ್ವದಾಖಲೆ ನುಚ್ಚುನೂರು

ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತವು ಆರು ಬೌಲಿಂಗ್ ಆಯ್ಕೆಗಳನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳಲು ಅವರು ಭುವನೇಶ್ವರ್ ಕುಮಾರ್ ಅವರನ್ನು ಮರಳಿ ಕರೆತರುವ ಸಾಧ್ಯತೆ ಹೆಚ್ಚಿದೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಹೆಚ್ಚಿನ ರನ್ ಸೋರಿಕೆ ಮಾಡಿರುವ ಹರ್ಷಲ್ ಪಟೇಲ್ ಅಥವಾ ರಿಷಭ್ ಪಂತ್ ಬದಲಿಗೆ ಭುವನೇಶ್ವರ್ ಕುಮಾರ್ ಮರಳುವ ನಿರೀಕ್ಷೆ ಇದೆ.

3ನೇ ಟಿ20 ಪಂದ್ಯದಲ್ಲಿ ಭಾರತದ ಸಂಭಾವ್ಯ ಆಡುವ 11ರ ಬಳಗ

3ನೇ ಟಿ20 ಪಂದ್ಯದಲ್ಲಿ ಭಾರತದ ಸಂಭಾವ್ಯ ಆಡುವ 11ರ ಬಳಗ

ರೋಹಿತ್ ಶರ್ಮಾ: ಭಾರತ ತಂಡದ ನಾಯಕ ರೋಹಿತ್ ಶರ್ಮಾ 20 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿ ನಾಗ್ಪುರದಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಮೂರನೇ ಪಂದ್ಯದಲ್ಲಿ ರೋಹಿತ್ ಅಗ್ರ ಕ್ರಮಾಂಕದಲ್ಲಿ ಆಕ್ರಮಣಕಾರಿಯಾಗಿ ಮುಂದುವರಿಯಲು ನೋಡುತ್ತಾರೆ.

ಕೆಎಲ್ ರಾಹುಲ್: ಮೊದಲ ಟಿ20 ಪಂದ್ಯದಲ್ಲಿ 35 ಎಸೆತಗಳಲ್ಲಿ 55 ರನ್ ಗಳಿಸುವ ಮೂಲಕ ಆರಂಭಿಕ ಆಟಗಾರ ತಮ್ಮ ಸ್ಟ್ರೈಕ್ ರೇಟ್‌ನ ಟೀಕೆಗಳನ್ನು ತಪ್ಪಿಸಿದರು. ಆದರೆ ಎರಡನೇ ಪಂದ್ಯದಲ್ಲಿ 10 ರನ್ ಮಾತ್ರ ಗಳಿಸಿದರು. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿ ಮುಂದುವರಿಯಲು ರಾಹುಲ್ ಎದುರು ನೋಡುತ್ತಿದ್ದಾರೆ.

ಮತ್ತೆ ಫಾರ್ಮ್‌ಗೆ ಮರಳಲು ಕಾಯುತ್ತಿರುವ ವಿರಾಟ್ ಕೊಹ್ಲಿ

ಮತ್ತೆ ಫಾರ್ಮ್‌ಗೆ ಮರಳಲು ಕಾಯುತ್ತಿರುವ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ: 2022ರ ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದರು ಮತ್ತು ಆಸ್ಟ್ರೇಲಿಯಾ ವಿರುದ್ಧ ಎರಡು ಕಡಿಮೆ ಸ್ಕೋರ್‌ಗಳ ಹೊರತಾಗಿಯೂ, ಅವರು ಆಸ್ಟ್ರೇಲಿಯ ವಿರುದ್ಧ ಉತ್ತಮ ದಾಖಲೆ ಹೊಂದಿದ್ದು, ಮತ್ತೆ ಫಾರ್ಮ್‌ಗೆ ಮರಳಲು ಕಾಯುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್: ಮೊದಲ ಟಿ20 ಪಂದ್ಯದಲ್ಲಿ 25 ಎಸೆತಗಳಲ್ಲಿ 46 ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್, ಭಾರತದ ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ಆಧಾರಸ್ತಂಭವಾಗಿದ್ದಾರೆ. ಸರಣಿ ನಿರ್ಣಾಯಕ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ರನ್ ಬರಬೇಕಿದೆ.

ಹಾರ್ದಿಕ್ ಪಾಂಡ್ಯ: ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ ಅಜೇಯ 71 ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅವರ ಆಲ್‌ರೌಂಡ್ ಸಾಮರ್ಥ್ಯ ಭಾರತ ತಂಡಕ್ಕೆ ಅಗತ್ಯವಿರುವ ಸಮತೋಲನವನ್ನು ಒದಗಿಸುತ್ತದೆ. ಆದರೆ ಬೌಲಿಂಗ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಬೇಕಿದೆ.

ಎರಡನೇ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿದ ದಿನೇಶ್ ಕಾರ್ತಿಕ್

ಎರಡನೇ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿದ ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್: ಭಾರತದ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಆಡುವ 11ರ ಬಳಗ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಎರಡನೇ ಪಂದ್ಯದಲ್ಲಿ ಎರಡು ಎಸೆತಗಳಲ್ಲಿ 10 ರನ್‌ಗಳನ್ನು ಗಳಿಸಿದ್ದರಿಂದ ಭಾರತ ಅಮೋಘ ಗೆಲುವು ಸಾಧಿಸಲು ಸಹಾಯ ಮಾಡಿತು. ದಿನೇಶ್ ಕಾರ್ತಿಕ್ ರಾಷ್ಟ್ರೀಯ ತಂಡಕ್ಕೆ ಮರಳಿದ ನಂತರ ಅವರು ಸಾಮಾನ್ಯವಾಗಿ ಫಿನಿಶರ್ ಪಾತ್ರವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ.

ಅಕ್ಷರ್ ಪಟೇಲ್: ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಬೌಲಿಂಗ್‌ನಲ್ಲಿ ಸೊಗಸಾದ ಫಾರ್ಮ್‌ನಲ್ಲಿದ್ದಾರೆ ಮತ್ತು ಅಗತ್ಯವಿದ್ದರೆ ಬ್ಯಾಟ್‌ನೊಂದಿಗೆ ರನ್ ಗಳಿಸಲು ಸಹ ಎದುರು ನೋಡುತ್ತಾರೆ.

ಸರಣಿ ಕೈವಶ ಮಾಡಿಕೊಳ್ಳಬೇಕಾದರೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಅಗತ್ಯ

ಸರಣಿ ಕೈವಶ ಮಾಡಿಕೊಳ್ಳಬೇಕಾದರೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಅಗತ್ಯ

ಭುವನೇಶ್ವರ್ ಕುಮಾರ್: ಭುವನೇಶ್ವರ್ ಕುಮಾರ್ ಡೆತ್ ಓವರ್‌ಗಳಲ್ಲಿ ದುಬಾರಿಯಾಗುತ್ತಿದ್ದಾರೆ. ಇದು ಟಿ20 ವಿಶ್ವಕಪ್ ದೃಷ್ಟಿಯಿಂದ ತಂಡಕ್ಕೆ ಒಳ್ಳೆಯದಲ್ಲ ಮತ್ತು ಇತ್ತೀಚಿನ ಪಂದ್ಯಗಳಲ್ಲಿ ಹೊಸ ಚೆಂಡಿನೊಂದಿಗೆ ಹೆಚ್ಚಿನ ವಿಕೆಟ್‌ಗಳನ್ನು ಪಡೆದಿಲ್ಲ. ಆದರೆ ಅನುಭವಿ ವೇಗಿ ತಂಡಕ್ಕೆ ಅವಶ್ಯಕವಿದ್ದು, ರಿಷಭ್ ಪಂತ್ ಬದಲಿಗೆ ತಂಡಕ್ಕೆ ಮರಳುವ ಸಾಧ್ಯತೆಯಿದೆ.

ಜಸ್ಪ್ರೀತ್ ಬುಮ್ರಾ: ಗಾಯದಿಂದ ಹೊರಗುಳಿದ ನಂತರ ಮರಳಿದ ಜಸ್ಪ್ರೀತ್ ಬುಮ್ರಾ ಅವರು ಆರೋನ್ ಫಿಂಚ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಆಕರ್ಷಕ್ ಯಾರ್ಕರ್ ಮೂಲಕ ಔಟ್ ಮಾಡಿದರು. ಭಾರತದ ಸ್ಟಾರ್ ವೇಗಿ ಸರಣಿ ಕೈವಶ ಮಾಡಿಕೊಳ್ಳಬೇಕಾದರೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಲಯ ಕಂಡುಕೊಳ್ಳಲು ಪರದಾಡುತ್ತಿರುವ ಹರ್ಷಲ್ ಪಟೇಲ್

ಲಯ ಕಂಡುಕೊಳ್ಳಲು ಪರದಾಡುತ್ತಿರುವ ಹರ್ಷಲ್ ಪಟೇಲ್

ಹರ್ಷಲ್ ಪಟೇಲ್: ಗಾಯದಿಂದ ವಾಪಸಾಗಿರುವ ಮತ್ತೊಬ್ಬ ವೇಗಿ ಹರ್ಷಲ್ ಪಟೇಲ್ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಆದಾಗ್ಯೂ, ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಅವರು ಪ್ರಮುಖ ಪಾತ್ರ ವಹಿಸುವುದರಿಂದ ಅವರು ಶೀಘ್ರವಾಗಿ ಫಾರ್ಮ್ ಅನ್ನು ಮರಳಿ ಪಡೆಯಬೇಕೆಂದು ಭಾರತ ಬಯಸುತ್ತದೆ.

ಯುಜ್ವೇಂದ್ರ ಚಹಾಲ್: ಲೆಗ್-ಸ್ಪಿನ್ನರ್‌ ಯುಜ್ವೇಂದ್ರ ಚಹಾಲ್ ಫಾರ್ಮ್‌ನಲ್ಲಿನ ಕುಸಿತವು ಆತಂಕಕಾರಿಯಾಗಿದೆ ಮತ್ತು ಭಾರತವು ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ವಿಶ್ವಕಪ್‌ಗೆ ಮೊದಲು ತನ್ನ ಫಾರ್ಮ್ ಅನ್ನು ಕಂಡುಕೊಳ್ಳಬೇಕಿದೆ.

Story first published: Sunday, September 25, 2022, 12:08 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X