ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS: "ಆಸೀಸ್ ಆಟಗಾರರ ತಲೆಯಲ್ಲಿ ಕೇವಲ ಭಾರತದ ಈ ಸ್ಪಿನ್ನರ್‌ನದ್ದೇ ಯೋಚನೆ"

IND vs AUS: Indias Spinner Ravichandran Ashwin Is Already In Australian Players Head Says Wasim Jaffer

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ.

ಭಾರತದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವ ಯೋಜನೆಯನ್ನು ತಿರಸ್ಕರಿಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡ, ವಿಶಿಷ್ಟ ರೀತಿಯಲ್ಲಿ ಟೆಸ್ಟ್ ಸರಣಿ ಗೆಲುವಿಗಾಗಿ ತಯಾರಿ ನಡೆಸುತ್ತಿದೆ.

IPL 2023: ಆರ್‌ಸಿಬಿ ತಂಡದಲ್ಲಿರುವ ಮೂವರು ದುಬಾರಿ ಆಟಗಾರರುIPL 2023: ಆರ್‌ಸಿಬಿ ತಂಡದಲ್ಲಿರುವ ಮೂವರು ದುಬಾರಿ ಆಟಗಾರರು

ಟೆಸ್ಟ್ ಸರಣಿಯಲ್ಲಿ ಭಾರತದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ದಾಳಿಯನ್ನು ಎದುರಿಸಲು, ಆಸ್ಟ್ರೇಲಿಯಾದ ಬ್ಯಾಟರ್‌ಗಳು ರವಿಚಂದ್ರನ್ ಅಶ್ವಿನ್ ಅವರಂತೆ ಬೌಲಿಂಗ್ ಮಾಡುವ ಮಹೇಶ್ ಪಿಥಿಯಾ ವಿರುದ್ಧ ಅಭ್ಯಾಸ ಮಾಡುತ್ತಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ತಂಡವು ನೆಟ್ ಬೌಲರ್ ಆಗಿ ಬೆಂಗಳೂರಿಗೆ ಕರೆಸಿಕೊಂಡಿದೆ.

ಕ್ರಿಕೆಟ್ ಆಸ್ಟ್ರೇಲಿಯಾವು ಆಸೀಸ್ ತಂಡ ಅಭ್ಯಾಸ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಮಹೇಶ್ ಪಿಥಿಯಾ ಪ್ರವಾಸಿ ತಂಡಕ್ಕೆ ನೆಟ್‌ನಲ್ಲಿ ಬೌಲಿಂಗ್ ಮಾಡುವುದನ್ನು ಕಾಣಬಹುದು. ಆಸ್ಟ್ರೇಲಿಯಾ ತಂಡವನ್ನು ಕೆಣಕಿರುವ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ಮೊದಲ ಟೆಸ್ಟ್‌ಗೆ ಇನ್ನೂ ಕೆಲವು ದಿನಗಳು ಬಾಕಿಯಿದೆ. ಆದರೆ ರವಿಚಂದ್ರನ್ ಅಶ್ವಿನ್ ಈಗಾಗಲೇ ಆಸ್ಟ್ರೇಲಿಯಾ ಆಟಗಾರರ ತಲೆಯಲ್ಲಿದ್ದಾರೆ ಎಂದು ಕಿಚಾಯಿಸಿದ್ದಾರೆ.

"ಮೊದಲ ಟೆಸ್ಟ್‌ ಪಂದ್ಯಕ್ಕೆ ಐದು ದಿನಗಳು ಬಾಕಿಯಿದೆ. ಈಗಾಗಲೇ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ಆಟಗಾರರ ತಲೆಯಲ್ಲಿದ್ದಾರೆ,"ಎಂದು ವಾಸಿಂ ಜಾಫರ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮಹೇಶ್ ಪಿಥಿಯಾ ಅವರು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಂತೆ ಬೌಲಿಂಗ್ ಮಾಡುತ್ತಾರೆ. ಇದು ಭಾರತದ ಅನುಭವಿ ಸ್ಪಿನ್ನರ್ ಬಗ್ಗೆ ಆಸ್ಟ್ರೇಲಿಯಾ ಆಟಗಾರರು ಎಷ್ಟು ತಲೆಕೆಡಿಸಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ.

ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ಈತ ಭಾರತದ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದ ಆರ್ ಅಶ್ವಿನ್ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ಈತ ಭಾರತದ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದ ಆರ್ ಅಶ್ವಿನ್

ಆಸ್ಟ್ರೇಲಿಯಾದ ಸಹಾಯಕ ಸಿಬ್ಬಂದಿಗೆ ಮಹೇಶ್ ಪಿಥಿಯಾ ಬೌಲಿಂಗ್‌ನ ತುಣುಕನ್ನು ಸಾಮಾಜಿಕ ಮಾಧ್ಯಮದ ಮೂಲಕ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಮಹೇಶ್ ಮತ್ತು ಅಶ್ವಿನ್ ನಡುವಿನ ಸಾಮಾನ್ಯ ಬೌಲಿಂಗ್ ಹೋಲಿಕೆಯನ್ನು ಇಷ್ಟಪಟ್ಟ ಪ್ರವಾಸಿ ತಂಡವು ಬೆಂಗಳೂರಿನ ಆಲೂರು ಮೈದಾನದಲ್ಲಿ ನಾಲ್ಕು ದಿನಗಳ ತರಬೇತಿ ಶಿಬಿರಕ್ಕಾಗಿ ಬೆಂಗಳೂರಿಗೆ ಕರೆಸಿಕೊಂಡಿದೆ.

IND vs AUS: Indias Spinner Ravichandran Ashwin Is Already In Australian Players Head Says Wasim Jaffer

ಭಾರತದಲ್ಲಿ ಎರಡು ದಶಕಗಳ ನಂತರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲುವ ಭರವಸೆಯಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ರವಿಚಂದ್ರನ್ ಅಶ್ವಿನ್ ದೊಡ್ಡ ಅಡೆತಡೆಯಾಗಿದ್ದಾರೆ. ಹೀಗಾಗಿ ಭಾರತ ಹೊಂದಿರುವ ಮಾರಕ ಸ್ಪಿನ್ನರ್‌ ಬೆದರಿಕೆಗೆ ಸಿದ್ಧರಾಗಲು ಮಹೇಶ್ ಪಿಥಿಯಾರನ್ನು ಬಳಸಿಕೊಳ್ಳುತ್ತಿದೆ.

ನೈಜ ಟೆಸ್ಟ್ ಸರಣಿಯಲ್ಲಿ ತಯಾರಾಗುವ ರೀತಿಯ ವಿಕೆಟ್‌ಗಳನ್ನು ಹೋಲುವ ಕೆಲವು ಪಿಚ್‌ಗಳನ್ನು ಈಗಾಗಲೇ ಸಿದ್ಧಪಡಿಸಿರುವ ಆಸ್ಟ್ರೇಲಿಯಾ, ಆರ್ ಅಶ್ವಿನ್ ಅಂತಹ ಪಿಚ್‌ಗಳಲ್ಲಿ ರಚಿಸಬಹುದಾದ ತಂತ್ರಕ್ಕೆ ಒಗ್ಗಿಕೊಳ್ಳುವ ನಿರೀಕ್ಷೆಯಲ್ಲಿ ಮಹೇಶ್ ಪಿಥಿಯಾ ಬೌಲಿಂಗ್‌ಗೆ ಅಭ್ಯಾಸ ಮಾಡುತ್ತಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಪೂರ್ಣ ತಂಡಗಳು
ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್.

ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಶ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್, ಸ್ಟೀವ್ ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.

Story first published: Saturday, February 4, 2023, 17:54 [IST]
Other articles published on Feb 4, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X