ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಚಿತ್ತಗಾಂಗ್‌ನಲ್ಲಿ ಬುಧವಾರ ನಡೆಯಲಿದೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಈ ಸರಣಿಗಾಗಿ ಭಾರತ ತಂಡದ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು ಸತತ ವೈಟ್‌ಬಾಲ್ ಸರಣಿಗಳ ಬಳಿಕ ಮತ್ತೆ ರೆಡ್ಬಾಲ್ ಪಂದ್ಯವನ್ನಾಡಲು ಸಜ್ಜಾಗಿದೆ.
ಈ ಸರಣಿಗಾಗಿ ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಐಯ್ಯರ್ ಕಠಿಣ ಅಭ್ಯಾಸವನ್ನು ನಡೆಸಿದರು. ಶಾರ್ಟ್‌ಬಾಲ್ ಎದುರಿಸುವಲ್ಲಿ ಪದೇ ಪದೇ ವಿಫಲವಾಗುವ ಐಯ್ಯರ್ ತನ್ನ ದೌರ್ಬಲ್ಯದಿಂದ ಹೊರಗೆ ಬರುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಸೋಮವಾರ ಶ್ರೇಯಸ್ ಐಯ್ಯರ್ ನೆಟ್ ಅಭ್ಯಾಸದಲ್ಲಿ ಶಾರ್ಟ್‌ಬಾಲ್‌ಗಳನ್ನು ಎದುರಿಸಿ ಅಭ್ಯಾಸ ನಡೆಸಿದ್ದಾರೆ.
ಶ್ರೇಯಸ್ ಐಯ್ಯರ್ ಏಕದಿನ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಹಾಗೂ ಬಾಂಗ್ಲಾದೇಶದಲ್ಲಿ ಏಕದಿನ ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. ಹಾಗಿದ್ದರು ಕೂಡ ಶಾರ್ಟ್‌ಬಾಲ್ ಐಯ್ಯರ್‌ಗೆ ಸತತವಾಗಿ ಹಿನ್ನಡೆಯುಂಟು ಮಾಡುತ್ತಿದೆ. ಹೀಗಾಗಿ ಈ ಸಮಸ್ಯೆಯಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ ಭಾರತೀಯ ಆಟಗಾರ.
ಭಾರತದ ಅತ್ಯುತ್ತಮ ODI 11ರ ಬಳಗ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಸ್ಟಾರ್ ಬ್ಯಾಟರ್ಗಿಲ್ಲ ಸ್ಥಾನ!
ಡಿಸೆಂಬರ್ 14ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಅಲಭ್ಯವಾಗಲಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಕೈಬೆರಳಿಗೆ ಗಾಯವಾಗಿರುವ ಕಾರಣ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದು ಅಭಿಮನ್ಯು ಈಶ್ವರನ್ ಅವರನ್ನು ಮೀಸಲು ಆಟಗಾರನನ್ನಾಗಿ ನೇಮಿಸಲಾಗಿದೆ. ಇನ್ನು ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಈ ಸರಣಿಗೆ ಅಲಭ್ಯವಾಗಿರುವ ಕಾರಣ ನವ್‌ದೀಪ್ ಸೈನಿ ಹಾಗೂ ಸೌರಭ್ ಕುಮಾರ್‌ಗೆ ಅವಕಾಶ ದೊರೆತಿದೆ. ಇನ್ನು ಜಯ್‌ದೇವ್ ಉನಾದ್ಕಟ್ ಅವರು 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಭ್ ಕುಮಾರ್, ಜಯದೇವ್ ಉನದ್ಕತ್