ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಲು ಕಾರಣ ಹೇಳಿದ ಬಾಂಗ್ಲಾ ಆಲ್‌ರೌಂಡರ್

ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಮಡ ಭಾರೀ ಹಿನ್ನಡೆ ಅನುಭವಿಸಿದೆ. ಕೊನೆಯ ಇನ್ನಿಂಗ್ಸ್‌ನಲ್ಲಿ ಗೆಲುವಿಗಾಗಿ 513 ರನ್‌ಗಳ ಬೃಹತ್ ಗುರಿಯನ್ನು ಪಡೆದುಕೊಂಡಿದೆ. ಎರಡು ದಿನಗಳ ಸಂಪೂರ್ಣ ಆಟ ಬಾಕಿಯಿದ್ದು ಬಾಂಗ್ಲಾದೇಶ ಇನ್ನೂ 471 ರನ್‌ಗಳನ್ನು ಗಳಿಸಬೇಕಿದೆ. ಹೀಗಾಗಿ ಶಕೀಬ್ ಪಡೆ ಬಹುತೇಕ ಸೋಲಿನತ್ತ ಮುಖಮಾಡಿದೆ.

ಈ ಸಂದರ್ಭದಲ್ಲಿ ಬಾಂಗ್ಲಾದೇಶ ಬೌಲಿಂಗ್‌ನಲ್ಲಿ ಯಾವ ಕಾರಣಕ್ಕೆ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ ಎಂಬುದನ್ನು ಬಾಂಗ್ಲಾದೇಶ ತಂಡದ ಆಲ್‌ರಂಡರ್ ಮೆಹದಿ ಹಸನ್ ಹೇಳಿಕೊಂಡಿದ್ದಾರೆ. ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಗಾಯದ ಕಾರಣದಿಂದಾಗಿ ಬೌಲಿಂಗ್ ನಡೆಸಲು ಸಾಧ್ಯವಾಗಿಲ್ಲ. ಇದುವೇ ಬಾಂಗ್ಲಾದೇಶಕ್ಕೆ ಬೌಲಿಂಗ್‌ನಲ್ಲಿ ಹಿನ್ನಡೆಗೆ ಕಾರಣವಾಯಿತು ಎಂದಿದ್ದಾರೆ ಮೆಹದಿ ಹಸನ್.

Cricket Controversy: ರಾಹುಲ್ ದ್ರಾವಿಡ್‌ಗೆ ಕ್ಷಮೆಯಾಚಿಸಿದ ಬಾಂಗ್ಲಾ ಕೋಚ್ ಅಲನ್ ಡೊನಾಲ್ಡ್Cricket Controversy: ರಾಹುಲ್ ದ್ರಾವಿಡ್‌ಗೆ ಕ್ಷಮೆಯಾಚಿಸಿದ ಬಾಂಗ್ಲಾ ಕೋಚ್ ಅಲನ್ ಡೊನಾಲ್ಡ್

ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಅವರ ಬೌನ್ಸರ್ ಬೆನ್ನಿಗೆ ಬಡಿದ ಕಾರಣ ಶಕೀಬ್ ಗಾಯಗೊಂಡಿದ್ದರು. ಟೆಸ್ಟ್ ಸರಣಿಯ ಆರಂಭದ ಮುನ್ನ ದಿನ ಶಕಿಬ್ ಸ್ಕ್ಯಾಮಿಂಗ್‌ಗೆ ಕೂಡ ತೆರಳಿದ್ದರು. ಈ ಸಂದರ್ಭದಲ್ಲಿ ಬಾಂಗ್ಲಾ ಕೋಚ್ ರಸೆಲ್ ಡೊಮಿಂಗೊ ಶಕೀಬ್ ಅವರ ಭುಜ ನೋವಿನಿಂದ ಬಳಲುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದರು. ಅಂತಿಮ ಹಂತದಲ್ಲಿ ಶಕೀಬ್ ಪಂದ್ಯವನ್ನಾಡಲು ಲಭ್ಯವಾಗಿದ್ದರು ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 12 ಓವರ್‌ಗಳನ್ನು ಮಾತ್ರವೇ ಬೌಲಿಂಗ್ ನಡೆಸಿದರು. ಎರಡನೇ ಓವರ್‌ನಲ್ಲಿ ಒಂದೂ ಎಸೆತ ಬೌಲಿಂಗ್ ನಡೆಸಲು ಸಾಧ್ಯವಾಗಿಲ್ಲ.

"ಬೌಲಿಂಗ್‌ನ ಸಂದರ್ಭದಲ್ಲಿ ನಾವು ಆತನನ್ನು ಮಿಸ್ ಮಾಡಿಕೊಂಡಿದ್ದೇವೆ. ಅತಿಯಾಗಿ ನೋವಿರುವ ಕಾರಣದಿಂದಾಗಿ ಬೌಲಿಂಗ್ ನಡೆಸಲು ಸಾಧ್ಯವಾಗಿಲ್ಲ. ನೋವಿದ್ದಾಗ ಬೌಲಿಂಗ್ ನಡೆಸುವುದು ಬಹಳ ಕಷ್ಟ. ಮೊದಲ ಇನ್ನಿಂಗ್ಸ್‌ನಲ್ಲಿ ಕೆಲ ಓವರ್‌ಗಳ ಕಾಳ ಬೌಲಿಂಗ್ ನಡೆಸುವ ಪ್ರಯತ್ನ ನಡೆಸಿದ್ದರು" ಎಂದಿದ್ದಾರೆ ಮೆಹದಿ ಹಸನ್.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಬಳಿಕ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ನಲ್ಲಿಯೂ ಭಾರತ ಅಮೋಘ ಪ್ರದರ್ಶನ ನೀಡಿದೆ. ಹೀಗಾಗಿ ಬಾಂಗ್ಲಾದೇಶ ತಂಡಕ್ಕೆ 513 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ.

IPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿIPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿ

ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಮುನ್ನಡೆ ಪಡೆದ ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಯುವ ಆಟಗಾರ ಶುಬ್ಮನ್ ಗಿಲ್ ಹಾಗೂ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅಮೋಘ ಬ್ಯಾಟಿಂಗ್ ನಡೆಸಿ ಇಬ್ಬರು ಕೂಡ ಶತಕದ ಗಡಿ ದಾಟುವಲ್ಲಿ ಯಶಸ್ವಿಯಾದರು. ಈ ಇಬ್ಬರ ಅದ್ಭುತ ಪ್ರದರ್ಶನದಿಂದಾಗಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 258 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಣೆ ಮಾಡಿದೆ. ಈ ಮೂಲಕ ಬಾಂಗ್ಲಾ 500ಕ್ಕೂ ಅಧಿಕ ರನ್‌ಗಳ ಗುರಿ ಪಡೆದುಕೊಂಡಿದೆ.

ಬಾಂಗ್ಲಾದೇಶ ಆಡುವ ಬಳಗ: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್
ಬೆಂಚ್: ಮಹಮ್ಮದುಲ್ ಹಸನ್ ಜಾಯ್, ಮೊಮಿನುಲ್ ಹಕ್, ಶೋರಿಫುಲ್ ಇಸ್ಲಾಂ, ಅನಾಮುಲ್ ಹಕ್, ರೆಜೌರ್ ರೆಹಮಾನ್ ರಾಜ
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಕೆಎಲ್ ರಾಹುಲ್ (ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್,
ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೀಕರ್ ಭರತ್, ನವದೀಪ್ ಸೈನಿ, ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್

For Quick Alerts
ALLOW NOTIFICATIONS
For Daily Alerts
Story first published: Friday, December 16, 2022, 22:01 [IST]
Other articles published on Dec 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X