ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಭಾರತೀಯರ ಪರಿಸ್ಥಿತಿ ನೋಡಿದರೆ ನಗು ಬರುತ್ತದೆ ಎಂದು ಕಾಲೆಳೆದ ಮಾಜಿ ಕ್ರಿಕೆಟಿಗ

IND vs ENG: I cry with laughter when I see Indias DRS appeal says Michael Vaughan

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಕೊಹ್ಲಿ ಪಡೆ ಉತ್ತಮ ಆರಂಭವನ್ನೇ ಪಡೆದುಕೊಂಡಿತು. ಭಾರತದ ಪರ ಆರಂಭಿಕರಾಗಿ ಮೊದಲನೇ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಉತ್ತಮ ಆರಂಭವನ್ನು ಮಾಡಿದರು. ರೋಹಿತ್ ಶರ್ಮಾ 83 ರನ್ ಗಳಿಸಿದರೆ, ಕೆಎಲ್ ರಾಹುಲ್ ಅಮೋಘ 129 ರನ್ ಬಾರಿಸುವುದರ ಮೂಲಕ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನುಳಿದಂತೆ ವಿರಾಟ್ ಕೊಹ್ಲಿ 42 ಮತ್ತು ರಿಷಭ್ ಪಂತ್ 40 ರನ್ ಕಲೆಹಾಕಿ ಗಮನಾರ್ಹ ಆಟವನ್ನಾಡಿದರು.

ತಂಡದಿಂದ ಕೈ ಬಿಟ್ಟಿದ್ದರು, ಅವಕಾಶವಿರಲಿಲ್ಲ; ಲಾರ್ಡ್ಸ್ ಶತಕದ ಬಳಿಕ ಮನಬಿಚ್ಚಿ ಮಾತನಾಡಿದ ಕೆಎಲ್ ರಾಹುಲ್ತಂಡದಿಂದ ಕೈ ಬಿಟ್ಟಿದ್ದರು, ಅವಕಾಶವಿರಲಿಲ್ಲ; ಲಾರ್ಡ್ಸ್ ಶತಕದ ಬಳಿಕ ಮನಬಿಚ್ಚಿ ಮಾತನಾಡಿದ ಕೆಎಲ್ ರಾಹುಲ್

ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ 364 ರನ್ ಕಲೆಹಾಕಿದ ಭಾರತ ತಂಡ ಬೌಲಿಂಗ್ ಆರಂಭಿಸಿತು. ಎರಡನೇ ದಿನದಾಟದಂತ್ಯಕ್ಕೆ 3 ವಿಕೆಟ್ ಪಡೆದುಕೊಂಡ ಭಾರತೀಯ ಬೌಲರ್‌ಗಳು ಜವಾಬ್ದಾರಿಯುತ ಪ್ರದರ್ಶನವನ್ನು ನೀಡಿದರು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ರೊರಿ ಬರ್ನ್ಸ್ 49 ಮತ್ತು ಜೋ ರೂಟ್ ಅಜೇಯ 48 ರನ್ ಗಳಿಸಿದ್ದಾರೆ. ಭಾರತದ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆಯುವುದರ ಮೂಲಕ ಎರಡನೇ ದಿನದಾಟದಲ್ಲಿ ಮಿಂಚಿದರು. ಹಾಗೂ ಜೋ ರೂಟ್‌ಗೆ ಎಸೆದ 2 ಎಸೆತಗಳಲ್ಲಿ ವಿಕೆಟ್ ರಿವ್ಯೂ ಕೇಳುವ ಮೂಲಕ ಮೊಹಮ್ಮದ್ ಸಿರಾಜ್ ಮತ್ತು ವಿರಾಟ್ ಕೊಹ್ಲಿ ಭಾರತ ತಂಡದ ರಿವ್ಯೂಗಳನ್ನು ವ್ಯರ್ಥ ಮಾಡಿದ್ದಾರೆ.

ತಂಡದಿಂದ ಕೈಬಿಟ್ಟಿದ್ದರು, ಅವಕಾಶವಿರಲಿಲ್ಲ; ಲಾರ್ಡ್ಸ್ ಶತಕದ ಬಳಿಕ ಮನಬಿಚ್ಚಿ ಮಾತನಾಡಿದ ಕೆಎಲ್ ರಾಹುಲ್ತಂಡದಿಂದ ಕೈಬಿಟ್ಟಿದ್ದರು, ಅವಕಾಶವಿರಲಿಲ್ಲ; ಲಾರ್ಡ್ಸ್ ಶತಕದ ಬಳಿಕ ಮನಬಿಚ್ಚಿ ಮಾತನಾಡಿದ ಕೆಎಲ್ ರಾಹುಲ್

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ತನ್ನ ಎರಡು ರಿವ್ಯೂಗಳನ್ನು ವ್ಯರ್ಥ ಮಾಡಿದೆ. ಈ ಎರಡೂ ರಿವ್ಯೂ ಕೂಡ ಮೊಹಮ್ಮದ್ ಸಿರಾಜ್ ಓವರ್‌ಗಳಲ್ಲಿ ಕೋರಲಾಗಿದ್ದು ಔಟ್ ಅಲ್ಲದ ಎಸೆತಕ್ಕೆ ರಿವ್ಯೂಗಳನ್ನು ವ್ಯರ್ಥ ಮಾಡಿದ್ದಕ್ಕೆ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಔಟ್ ಆಗಿರದಿದ್ದರೂ ಸಹ ರಿವ್ಯೂ ಮನವಿ ಮಾಡಿ ವ್ಯರ್ಥ ಮಾಡುವುದನ್ನು ವಿರಾಟ್ ಕೊಹ್ಲಿಯವರನ್ನು ನೋಡಿ ಕಲಿಯಬೇಕೆಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!

ವಿರಾಟ್ ಕೊಹ್ಲಿ ಮತ್ತು ತಂಡದವರ ವಿರುದ್ಧ ರಿವ್ಯೂಗಳನ್ನು ವ್ಯರ್ಥ ಮಾಡಿದ್ದಕ್ಕೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಭಾರತೀಯರ ರಿವ್ಯೂಗಳನ್ನು ನೋಡಿ ನಗು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದ್ದಾರೆ.

ದೊಡ್ಡ ಸರ್ಕಾರ ರಚಿಸುವಂತೆ ತೀರ್ಮಾನ ಮಾಡಿದ್ರು

ದೊಡ್ಡ ಸರ್ಕಾರ ರಚಿಸುವಂತೆ ತೀರ್ಮಾನ ಮಾಡಿದ್ರು

ಮೊಹಮ್ಮದ್ ಸಿರಾಜ್ ಎಸೆತದಲ್ಲಿ ವಿರಾಟ್ ಕೊಹ್ಲಿ ಮತ್ತು ತಂಡ ತೆಗೆದುಕೊಂಡ ರಿವ್ಯೂ ಕುರಿತು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಟೀಕಿಸಿದ್ದು ದೊಡ್ಡ ಸರ್ಕಾರ ರಚನೆ ಮಾಡುವಾಗ ರಾಜಕಾರಣಿಗಳೆಲ್ಲ ಸೇರಿ ಮಾತುಕತೆ ನಡೆಸುವ ಹಾಗೆ ಗುಂಪು ಕಟ್ಟಿಕೊಂಡು ಕೆಟ್ಟ ನಿರ್ಧಾರವನ್ನು ತೆಗೆದುಕೊಂಡ ಭಾರತೀಯರನ್ನು ನೋಡಿ ನಗು ತಡೆಯಲಾಗುತ್ತಿಲ್ಲ ಎಂದು ಮೈಕಲ್ ವಾನ್ ಟೀಕಿಸಿದ್ದಾರೆ.

ಈ ವಿಷಯದಲ್ಲಿ ಭಾರತಕ್ಕಿಂತ ಇಂಗ್ಲೆಂಡ್ ಗ್ರೇಟ್

ಈ ವಿಷಯದಲ್ಲಿ ಭಾರತಕ್ಕಿಂತ ಇಂಗ್ಲೆಂಡ್ ಗ್ರೇಟ್

ಇನ್ನೂ ಮುಂದುವರೆದು ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಸರಿಯಾದ ರಿವ್ಯೂಗಳನ್ನು ಮನವಿ ಮಾಡಿಕೊಳ್ಳುವುದರಲ್ಲಿ ಭಾರತಕ್ಕಿಂತ ಇಂಗ್ಲೆಂಡ್ ಕ್ರಿಕೆಟಿಗರು ಎಷ್ಟೋ ಪಟ್ಟು ಮೇಲು, ಒಂದು ವೇಳೆ ಸರಿಯಾದ ರೀತಿಯಲ್ಲಿ ರಿವ್ಯೂಗಳನ್ನು ಬಳಸಿಕೊಂಡ ತಂಡಕ್ಕೆ ವಿಜೇತ ಸ್ಥಾನ ಕೊಡುವುದಾದರೆ ಖಂಡಿತವಾಗಿಯೂ ಇಂಗ್ಲೆಂಡ್ ತಂಡ ಗೆಲ್ಲಲಿದೆ ಮತ್ತು ಭಾರತ ತಂಡ ಹೀನಾಯವಾಗಿ ಸೋಲಲಿದೆ ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

Unmukt Chand ಅತ್ಯಂತ ಕಿರಿಯ ವಯಸ್ಸಿಗೆ ನಿವೃತ್ತಿ ಘೋಷಿಸಿದರು | Oneindia Kannada
ರಿವ್ಯೂ ಕುರಿತು ಬೇಸರ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

ರಿವ್ಯೂ ಕುರಿತು ಬೇಸರ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

ಇನ್ನು ಈ ರಿವ್ಯೂ ಕುರಿತು ಮೈಕಲ್ ವಾನ್ ಮಾತ್ರವಲ್ಲದೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಪ್ರತಿಕ್ರಿಯಿಸಿದ್ದು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ಸುಖಾಸುಮ್ಮನೆ ಅನಗತ್ಯ ರಿವ್ಯೂಗಳನ್ನು ತೆಗೆದುಕೊಂಡು ಇಕ್ಕಟ್ಟಿಗೆ ಸಿಲುಕಿಕೊಳ್ಳಲಿದೆ, ಈ ಹಿಂದೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಸರಣಿಯಲ್ಲಿಯೂ ಆಸ್ಟ್ರೇಲಿಯ ತಂಡ ತನ್ನ ರಿವ್ಯೂಗಳನ್ನು ವ್ಯರ್ಥ ಮಾಡಿಕೊಂಡು ಕೊನೆ ಕ್ಷಣದಲ್ಲಿ ರಿವ್ಯೂಗಳಿಲ್ಲದೆ ಇಂಗ್ಲೆಂಡ್ ತಂಡದೆದುರು ಸೋತಿದ್ದನ್ನು ಮರೆಯಬಾರದು ಎಂದು ವಿವಿಎಸ್ ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.

Story first published: Saturday, August 14, 2021, 15:10 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X