ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ ಟೆಸ್ಟ್ ನಡುವೆಯೇ ಟಿ ಟ್ವೆಂಟಿ ವಿಶ್ವಕಪ್ ಕುರಿತು ಚರ್ಚಿಸಿದ ಗಂಗೂಲಿ ಮತ್ತು ಕೊಹ್ಲಿ

IND vs ENG: Virat kohli and saurav ganguly Discussed about t20 world cup during lords test

ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಯುಎಇಯಲ್ಲಿ ಅಕ್ಟೋಬರ್ 17 ರಿಂದ ಆರಂಭವಾಗಲಿದ್ದು ನವೆಂಬರ್ 14 ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಕೊನೆಯಾಗಲಿದೆ. 2016 ರಲ್ಲಿ ಕಡೆಯದಾಗಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ 5 ವರ್ಷಗಳ ಬಳಿಕ ಮತ್ತೆ ನಡೆಯುತ್ತಿದ್ದು ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!

ಟೂರ್ನಿ ಆರಂಭವಾಗಲು ಇನ್ನೆರಡು ತಿಂಗಳು ಮಾತ್ರ ಸಮಯವಿದೆ. ಆದರೆ ಅದಕ್ಕೂ ಮುನ್ನ ಟೀಮ್ ಇಂಡಿಯಾ ಯಾವುದೇ ದೇಶದ ಜೊತೆ ಕೂಡ ಟಿ ಟ್ವೆಂಟಿ ಸರಣಿಯನ್ನು ಆಡುವುದಿಲ್ಲ. ಬದಲಾಗಿ ಟೀಮ್ ಇಂಡಿಯಾದ ಬಹುತೇಕ ಎಲ್ಲಾ ಆಟಗಾರರು ಮುಂದುವರೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಆಟವನ್ನು ಆಡಲಿದ್ದು ಇದು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಬೇಕಾದ ತರಬೇತಿಯನ್ನು ಆಟಗಾರರಿಗೆ ನೀಡಲಿದೆ.

ಟಿ ಟ್ವೆಂಟಿ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರುಟಿ ಟ್ವೆಂಟಿ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರು

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಇತ್ತೀಚೆಗಷ್ಟೇ ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರ

ಲಾರ್ಡ್ಸ್ ಟೆಸ್ಟ್ ವೇಳೆಯಲ್ಲಿಯೇ ಪರಸ್ಪರ ಕೆಲ ಸಮಯಗಳ ಕಾಲ ಭೇಟಿಯಾದ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಮತ್ತು ಯಾವ ರೀತಿಯ ಮಾರ್ಗಸೂಚಿಗಳನ್ನು ತಯಾರಿಸಿಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರ ನಡುವೆ ನಡೆದ ಸಂಪೂರ್ಣ ವಿವರವನ್ನು ಮಾತ್ರ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ, ಆದರೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಬೇಕಾದ ಮಾರ್ಗಸೂಚಿಗಳ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಸಲಾಯಿತು ಎಂಬ ಮಾಹಿತಿ ಮಾತ್ರ ಲಭ್ಯವಾಗಲಿದೆ.

ಐಪಿಎಲ್ 2021: ಆರ್‌ಸಿಬಿಗೆ ಆಘಾತ; ತಂಡದ ಪ್ರಮುಖ ಆಟಗಾರ ಟೂರ್ನಿಯಿಂದಲೇ ಔಟ್!ಐಪಿಎಲ್ 2021: ಆರ್‌ಸಿಬಿಗೆ ಆಘಾತ; ತಂಡದ ಪ್ರಮುಖ ಆಟಗಾರ ಟೂರ್ನಿಯಿಂದಲೇ ಔಟ್!

ಐಪಿಎಲ್ ಪಾರ್ಟ್ ೨ ಸಿ ಎಸ್ ಕೆ ಭರ್ಜರಿ ಅಭ್ಯಾಸ ಶುರು | Oneindia Kannada

ಇನ್ನು ಸೆಪ್ಟೆಂಬರ್‌ 19 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಂದುವರಿಯಲಿದ್ದು ಟೀಮ್ ಇಂಡಿಯಾ ಆಟಗಾರರಿಗೆ ಐಪಿಎಲ್ ಟೂರ್ನಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಅಭ್ಯಾಸದ ರೀತಿ ಕೆಲಸ ಮಾಡಲಿದೆ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ ಈ ಹಿಂದೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಸೆಣಸಾಡಿದ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಜಯ ಸಾಧಿಸಿದೆ. ಹೀಗಾಗಿ ಈ ಎರಡೂ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಒಳ್ಳೆಯ ಫಾರ್ಮ್‌ನಲ್ಲಿರುವ ಆಟಗಾರರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮಣೆ ಹಾಕಬಹುದು ಎನ್ನಲಾಗುತ್ತಿದೆ. ಅದರಲ್ಲಿಯೂ ಇತ್ತೀಚಿನ ಸರಣಿಗಳಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಇಬ್ಬರು ಆಟಗಾರರು ಸಹ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

Story first published: Saturday, August 21, 2021, 6:47 [IST]
Other articles published on Aug 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X