ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs NZ 1st ODI : ವಿವಾದಾತ್ಮಕ ತೀರ್ಪಿಗೆ ಹಾರ್ದಿಕ್ ಪಾಂಡ್ಯ ಔಟ್: 3ನೇ ಅಂಪೈರ್ ವಿರುದ್ದ ಭಾರಿ ಟೀಕೆ

Ind vs NZ 1st ODI : Twitter Trolls 3rd Umpire On Hardhik Pandyas Controversial Dismissal

ಭಾರತ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿವಾದಾತ್ಮಕ ತೀರ್ಪಿಗೆ ಔಟಾದರು. 3ನೇ ಅಂಪೈರ್ ನೀಡಿದ ತೀರ್ಪು ಈಗ ವಿವಾದಕ್ಕೆ ಕಾರಣವಾಗಿದ್ದು, ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ಉತ್ತಮವಾಗಿ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ ದುರದೃಷ್ಟವಶಾತ್ ಕೆಟ್ಟ ತೀರ್ಪಿಗೆ ಔಟಾಗಬೇಕಾಯಿತು. ಡೇರಿಲ್ ಮಿಚೆಲ್ ಬೌಲಿಂಗ್‌ನಲ್ಲಿ ಟಾಮ್ ಲಥಮ್ ಸ್ಟಂಪ್‌ ಮಾಡಿ ಔಟ್‌ಗಾಗಿ ಮನವಿ ಮಾಡಿದರು. ಆನ್‌ಫೀಲ್ಡ್ ಅಂಪೈರ್ ನಿರ್ಣಯಕ್ಕಾಗಿ ಮೂರನೇ ಅಂಪೈರ್ ಗೆ ಮನವಿ ಮಾಡಿದರು. ಬಾಲ್ ದೂರವಿದ್ದಾಗ ಟಾಮ್ ಲಥಮ್ ಕೈ ತಾಗಿ ಬೇಲ್ ಕೆಳಗುರುಳಿದ್ದು ಕಂಡರೂ, ಮೂರನೇ ಅಂಪೈರ್ ಕೆಎನ್ ಅನಂತಪದ್ಮನಾಭನ್ ಔಟ್ ಎಂದು ತೀರ್ಪು ನೀಡಿದರು.

ಶುಬ್ಮನ್ ಗಿಲ್ ದ್ವಿಶತಕ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಿಲ್ ಮುರಿದ 5 ಪ್ರಮುಖ ದಾಖಲೆಗಳುಶುಬ್ಮನ್ ಗಿಲ್ ದ್ವಿಶತಕ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಿಲ್ ಮುರಿದ 5 ಪ್ರಮುಖ ದಾಖಲೆಗಳು

ಇದೇ ಘಟನೆ ಮತ್ತೊಮ್ಮೆ ಪುನರಾವರ್ತನೆಯಾಯಿತು ಆದರೆ ಶುಭಮನ್ ಗಿಲ್ ಈ ಬಾರಿ ಬಾಲ್‌ ಹೊಡೆದಿದ್ದರು. ಆದರೆ ವಿಕೆಟ್ ಕೀಪರ್ ಟಾಮ್ ಲಥಮ್ ಬೇಲ್ ಬೀಳಿಸಿದ್ದರು.

ಮೂರನೇ ಅಂಪೈರ್ ಎಡವಟ್ಟು

ಹೆಚ್ಚುವರಿ ಬೌನ್ಸ್‌ನಿಂದಾಗಿ ಹಾರ್ದಿಕ್ ಪಾಂಡ್ಯ ಡೆರಿಲ್ ಮಿಚೆಲ್ ಎಸೆತವನ್ನು ತಪ್ಪಿಸಿಕೊಂಡರು. ಚೆಂಡು ಸ್ಟಂಪ್‌ಗೆ ಬಡಿದಿದೆ. ಆನ್-ಫೀಲ್ಡ್ ಅಂಪೈರ್‌ಗಳು ಅದನ್ನು ಟಿವಿ ಅಂಪೈರ್‌ಗೆ ತ್ವರಿತವಾಗಿ ಮನವಿ ಮಾಡಿದರು.

ಯಾವುದೇ ಬ್ಯಾಟ್ ಒಳಗೊಂಡಿಲ್ಲ ಎಂದು ದೃಶ್ಯಗಳ ಮರುಪ್ರಸಾರದಲ್ಲಿ ಸಾಬೀತಾಯಿತು. ಬದಲಾಗಿ, ಟಾಮ್ ಲಥಮ್ ಕೈಗವಸುಗಳು ವಿಕೆಟ್‌ಗೆ ತಾಗಿದ್ದರಿಂದ ಬೇಲ್‌ಗಳು ಕೆಳಗೆ ಬಿದ್ದವು. ಚೆಂಡಿನಿಂದ ಬೇಲ್ ಬಿದ್ದಿಲ್ಲ, ಬದಲಾಗಿ ಲಥಮ್ ಕೈತಾಗಿ ಎಂದು ತಿಳಿಯಿತು. ಡೇರಿಲ್ ಮಿಚೆಲ್ ಕೂಡ ಈ ನಿರ್ಧಾರದಿಂದ ಆಶ್ಚರ್ಯಚಕಿತರಾದರು. ಘಟನೆಯಿಂದ ಕೋಪಗೊಂಡ ಹಾರ್ದಿಕ್ ಪಾಂಡ್ಯ ಅವರು ಅಸಹಾಯಕರಾಗಿ ಪೆವಿಲಿಯನ್ ಕಡೆ ನಡೆದರು.

ಹಾರ್ದಿಕ್ ಪಾಂಡ್ಯ ಔಟ್ ಆಗುವ ಮೊದಲು 38 ಎಸೆತಗಳಲ್ಲಿ 28 ರನ್ ಗಳಿಸಿದ್ದರು. ಶುಭಮನ್ ಗಿಲ್‌ರೊಂದಿಗೆ 67 ಎಸೆತಗಳಲ್ಲಿ 74 ರನ್ ಜೊತೆಯಾಟ ಆಡಿದರು.

Ind vs NZ 1st ODI : Twitter Trolls 3rd Umpire On Hardhik Pandyas Controversial Dismissal

ಅಂಪೈರ್ ವಿರುದ್ಧ ಭಾರಿ ಆಕ್ರೋಶ

ವಿವಾದಿತ ತೀರ್ಪು ನೀಡಿದ ಮೂರನೇ ಅಂಪೈರ್ ಕೆಎನ್ ಅನಂತಪದ್ಮನಾಭನ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅರ್ಹತೆಯಿರದ ಅಂಪೈರ್ ಗಳನ್ನು ಆಯ್ಕೆ ಮಾಡಿದರೆ ಹೀಗೆ ಆಗುವುದು ಎಂದು ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಇನ್ನೂ ಕೆಲವರು ಮೂರನೇ ಅಂಪೈರ್ ನಶೆಯಲ್ಲಿದ್ದರಾ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಒಟ್ಟಾರೆ ಅಂಪೈರ್ ಗಳು ಮಾಡುವ ಎಡವಟ್ಟು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವುದಂತೂ ಸತ್ಯ.

Story first published: Wednesday, January 18, 2023, 20:11 [IST]
Other articles published on Jan 18, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X