ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ವಿರಾಟ್ ಕೊಹ್ಲಿ ಟೀಕಾಕಾರರಿಗೆ ಬಿಸಿ ಮುಟ್ಟಿಸಿದ ಪಾಕ್ ಮಾಜಿ ಕ್ರಿಕೆಟಿಗ

IND vs SL: Former Pak Cricketer Salman Butt Slams Virat Kohli Critics For T20 Century Against Afghanistan

ಇದೀಗ ಗುರುವಾರ, ಜನವರಿ 12ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಪಡೆ ಈ ಪಂದ್ಯವನ್ನು ಗೆದ್ದು ಇನ್ನೂ ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.

ಮೊದಲ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ಮುಂದುವರೆಸಿದರು ಮತ್ತು ಏಕದಿನ ಕ್ರಿಕೆಟ್‌ನಲ್ಲಿ 45ನೇ ಶತಕ ಬಾರಿಸಿ ಮತ್ತೊಮ್ಮೆ ಪಾರುಪತ್ಯ ಸಾಧಿಸಿದರು.

IND vs SL 2nd ODI: ಭಾರತ vs ಶ್ರೀಲಂಕಾ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ತಂಡಗಳು, ಪಂದ್ಯದ ವಿವರ

ಇನ್ನು ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟಿ20 ಶತಕವನ್ನು ಪ್ರಶ್ನಿಸಿದ ವಿರಾಟ್ ಕೊಹ್ಲಿಯ ಟೀಕಾಕಾರರ ವಿರುದ್ಧ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ವಾಗ್ದಾಳಿ ನಡೆಸಿದ್ದಾರೆ.

ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದರು

ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದರು

ಏಷ್ಯಾ ಕಪ್‌ ಪಂದ್ಯಾವಳಿಗೂ ಮುನ್ನ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದರು. ಅವರು ಆ ಸಮಯದಲ್ಲಿ ಮೂರು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬರ ಅನುಭವಿಸುತ್ತಿದ್ದರು.

ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ ಅಜೇಯ 122 ರನ್ ಬಾರಿಸಿ ಚುಟುಕು ಕ್ರಿಕೆಟ್‌ನಲ್ಲಿ ತನ್ನ ಮೊದಲ ಶತಕ ದಾಖಲಿಸಿದರು. ಆ ವೇಳೆ ಏಷ್ಯಾ ಕಪ್‌ನಿಂದ ಹೊರಬಿದ್ದಿದ್ದ ಅಫ್ಘಾನಿಸ್ತಾನ ತಂಡದ ವಿರುದ್ಧ ವಿರಾಟ್ ಕೊಹ್ಲಿ ಶತಕ ಗಳಿಸಿದ್ದಕ್ಕೆ ಹಲವರು ದುರ್ಬಲ ತಂಡದ ವಿರುದ್ಧ ಶತಕ ಬಾರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ವಿರಾಟ್ ಕೊಹ್ಲಿ ಟೀಕಾಕಾರರ ವಿರುದ್ಧ ಕಿಡಿಕಾರಿದ ಸಲ್ಮಾನ್ ಬಟ್

ವಿರಾಟ್ ಕೊಹ್ಲಿ ಟೀಕಾಕಾರರ ವಿರುದ್ಧ ಕಿಡಿಕಾರಿದ ಸಲ್ಮಾನ್ ಬಟ್

ಇದೇ ವೇಳೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನವನ್ನು ಅಪಮೌಲ್ಯಗೊಳಿಸಲು ಪ್ರಯತ್ನಿಸಿದ್ದಕ್ಕಾಗಿ ಸಲ್ಮಾನ್ ಬಟ್ ಈ ಟೀಕಾಕಾರರ ವಿರುದ್ಧ ಕಿಡಿಕಾರಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್, "ಅಫ್ಘಾನಿಸ್ತಾನವು ಪ್ರಬಲ ಬೌಲಿಂಗ್ ದಾಳಿ ಪಡೆಯನ್ನು ಹೊಂದಿದೆ ಮತ್ತು ಅನೇಕ ಬ್ಯಾಟರ್‌ಗಳು ಆ ತಂಡದ ವಿರುದ್ಧ ಶತಕ ಗಳಿಸಿದ್ದಾರೆಂದು ಹೇಳಲು ಸಾಧ್ಯವಿಲ್ಲ," ಎಂದು ಹೇಳಿದರು.

ವೃತ್ತಿಜೀವನದಲ್ಲಿ 73 ಶತಕಗಳನ್ನು ಬಾರಿಸಿದ್ದಾರೆ

ವೃತ್ತಿಜೀವನದಲ್ಲಿ 73 ಶತಕಗಳನ್ನು ಬಾರಿಸಿದ್ದಾರೆ

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 73 ಶತಕಗಳನ್ನು ಬಾರಿಸಿದ್ದಾರೆ ಎಂಬುದನ್ನು ಮರೆಯಬೇಡಿ ಮತ್ತು ಅವರು ಕ್ರಿಕೆಟ್ ಅತ್ಯುತ್ತಮ ಪ್ರತಿಭೆ ಎಂದು ಸಲ್ಮಾನ್ ಬಟ್ ಶ್ಲಾಘಿಸಿದರು.

"ವಿರಾಟ್ ಕೊಹ್ಲಿ ಶತಕ ಬಾರಿಸಿದಾಗ ಅಫ್ಘಾನಿಸ್ತಾನ ದುರ್ಬಲ ತಂಡ ಅಥವಾ ಫ್ಲಾಟ್ ಟ್ರ್ಯಾಕ್ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಆ ವ್ಯಕ್ತಿ 73 ಬಾರಿ ಶತಕದ ಗಡಿ ದಾಟಿದ್ದಾರೆ. ಕೆಲವು ವಿರೋಧಿಗಳು ಏಕೆ ಹೀಗೆ ಟೀಕಿಸುತ್ತಾರೆ ಎಂಬುದು ಗೊತ್ತಿಲ್ಲ," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಹೇಳಿದರು.

ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿಯ ಪಂದ್ಯ ವಿಜೇತ ಪ್ರದರ್ಶನ

ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿಯ ಪಂದ್ಯ ವಿಜೇತ ಪ್ರದರ್ಶನ

ಇನ್ನು ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿಯ ಪಂದ್ಯ ವಿಜೇತ ಪ್ರದರ್ಶನವನ್ನು ಪ್ರಶಂಸಿಸಿದ ಸಲ್ಮಾನ್ ಬಟ್, ""ಕೊಹ್ಲಿ ಅವರು ಕಠಿಣ ರನ್ ಚೇಸ್‌ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಆ ಬ್ಯಾಟಿಂಗ್ ಪ್ರದರ್ಶನ ವಿಶೇಷವಾದದ್ದು,'' ಎಂದು ಪಾಕಿಸ್ತಾನದ ಮಾಜಿ ನಾಯಕ ತಿಳಿಸಿದ್ದಾರೆ.

"ಒತ್ತಡದ ಪರಿಸ್ಥಿತಿಯಲ್ಲಿಯೂ ಇಂತಹ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವುದು ಎಂದಿಗೂ ಸುಲಭವಲ್ಲ. ವಿಶೇಷವಾಗಿ ನೀವು ಫಾರ್ಮ್ ಕುಸಿತದ ಮೂಲಕ ಹೋಗುತ್ತಿರುವಾಗ. ಅಂತಹ ಪ್ರದರ್ಶನಗಳು ಯಾವುದೇ ಒಬ್ಬ ಆಟಗಾರನನ್ನು ಉತ್ತಮಗೊಳಿಸುತ್ತವೆ," ಎಂದು ವಿರಾಟ್ ಕೊಹ್ಲಿ ಬೆಂಬಲಕ್ಕೆ ಸಲ್ಮಾನ್ ಬಟ್ ನಿಂತರು.

Story first published: Thursday, January 12, 2023, 11:45 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X