ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಾಯಗೊಂಡು ಸರಣಿಯಿಂದ ಹೊರಬಿದ್ದ ಸಂಜು ಸ್ಯಾಮ್ಸನ್: ಜಿತೇಶ್ ಶರ್ಮಾಗೆ ತಂಡದಲ್ಲಿ ಸ್ಥಾನ

IND vs SL: Sanju Samson ruled out for remaining T20I match, Jitesh Sharma joins Indian squad

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಎರಡನೇ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದು ಸರಣಿಯ ಅಂತಿಮ ಎರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಜಿತೇಶ್ ಶರ್ಮಾ ಸಂಜು ಸ್ಯಾಮ್ಸನ್‌ಗೆ ಬದಲಿ ಆಟಗಾರನಾಗಿ ಭಾರತೀಯ ಸ್ಕ್ವಾಡ್ ಸೇರಿಕೊಂಡಿದ್ದಾರೆ. 2022ರ ಐಪಿಎಲ್‌ನಲ್ಲಿ ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು.

ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಕ್ಕೆ ಒಳಗಾಗಿದ್ದರು. ಪಂದ್ಯದ ಬಳಿಕ ಮೊಣಕಾಲಿನ ನೋವು ಉಲ್ಬಣಿಸಿದ್ದು ಉಳಿದ ಎರಡು ಪಂದ್ಯಗಳಿಂದ ಸಂಜು ಸ್ಯಾಮ್ಸನ್ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ. ಬುಧವಾರ ಟೀಮ್ ಇಂಡಿಯಾ ಆಟಗಾರರ ಬಳಗ ಎರಡನೇ ಪಂದ್ಯ ನಡೆಯಲಿರುವ ಪುಣೆಗೆ ಪ್ರಯಾಣ ಬೆಳೆಸಿದ್ದರೆ ಸಂಜು ಸ್ಯಾಮ್ಸನ್ ಭಾರತೀಯ ತಂಡದೊಂದಿಗೆ ಪ್ರಯಾಣಿಸಿರಲಿಲ್ಲ.

ಅಫ್ರಿದಿ ಹೊಸ ನಿಯಮ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್‌ಗೂ ಟಿ20 ತಂಡದಲ್ಲಿ ಅವಕಾಶ ಇಲ್ಲವಾ?ಅಫ್ರಿದಿ ಹೊಸ ನಿಯಮ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್‌ಗೂ ಟಿ20 ತಂಡದಲ್ಲಿ ಅವಕಾಶ ಇಲ್ಲವಾ?

ಸಂಜು ಸ್ಯಾಮ್ಸನ್ ಅವರ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ಪರೀಕ್ಷೆ ನಡೆಸುವ ದೃಷ್ಟಿಯಿಂದ ಮುಂಬೈನಲ್ಲಿಯೇ ಸಂಜು ಉಳಿದುಕೊಂಡಿದ್ದರು. ಮುಂಬೈನಲ್ಲಿ ಸ್ಕ್ಆನಿಂಗ್ ನಡೆಸಲಾಗಿದ್ದು ವಿಶ್ರಾಂತಿ ಹಾಗೂ ರಿಹ್ಯಾಬಿಲಿಟೇಶನ್‌ಗೆ ಸಲಹೆ ನೀಡಲಾಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಉಳಿದ ಎರಡು ಟಿ20 ಪಂದ್ಯಗಳಿಂದಲೂ ಸಂಜು ಹೊರಗುಳಿಯಲಿದ್ದಾರೆ. ಇನ್ನು ಏಕದಿನ ಸರಣಿಗೆ ಸಂಜು ಆಯ್ಕೆಯಾಗಿರಲಿಲ್ಲ.

ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪ್ರಮುಖ ಆಟಗಾರರು ವಿಕೆಟ್ ಕಳೆದುಕೊಂಡಿದ್ದಾಗ ಸಂಜು ಬ್ಯಾಟಿಂಗ್‌ಗೆ ಇಳಿದಿದ್ದರು. ಆದರೆ ಸಂಜು ಕೂಡ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು. 6 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ ಕೇವಲ 5 ರನ್‌ಗಳಿಸಿ ನಿರ್ಗಮಿಸಿದ್ದಾರೆ. ಈ ಸಂದರ್ಭದಲ್ಲಿ ಒಂದು ಜೀವದಾನ ಲಭಿಸಿದರು ಕೂಡ ಸಂಜು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿಫಲವಾದರು. ಮತ್ತೆ ಕೆಟ್ಟ ಹೊಡೆತಕ್ಕೆ ಮುಂದಾಗಿ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು.

SA T20: ದಕ್ಷಿಣ ಆಫ್ರಿಕಾ ಟಿ20 ಲೀಗ್ ತಂಡಗಳ ಲೋಗೋ ನೋಡಿ ಗಾಬರಿಯಾದ ಬಿಸಿಸಿಐ ಅಧಿಕಾರಿಗಳುSA T20: ದಕ್ಷಿಣ ಆಫ್ರಿಕಾ ಟಿ20 ಲೀಗ್ ತಂಡಗಳ ಲೋಗೋ ನೋಡಿ ಗಾಬರಿಯಾದ ಬಿಸಿಸಿಐ ಅಧಿಕಾರಿಗಳು

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಭಾರತ ತಂಡ: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಹಾಲ್, ಮುಖೇಶ್ ಕುಮಾರ್, ಅರ್ಷದೀಪ್ ಸಿಂಗ್, ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ರಾಹುಲ್ ತ್ರಿಪಾಠಿ

ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಮಹೇಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ, ಲಹಿರು ಕುಮಾರ, ದುನಿತ್ ವೆಳ್ಳಾಲಗೆ, ಸದೀರ ಸಮರವಿಕ್ರಮ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ನುವಾನ್ ತುಷಾರ

Story first published: Wednesday, January 4, 2023, 23:31 [IST]
Other articles published on Jan 4, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X