IND vs SL: ಹೀಗಾದರೆ ಮಾತ್ರ ವಿರಾಟ್ ಕೊಹ್ಲಿ 100 ಅಂತಾರಾಷ್ಟ್ರೀಯ ಶತಕ ಗಳಿಸುತ್ತಾರೆ; ಸುನಿಲ್ ಗವಾಸ್ಕರ್

ಭಾನುವಾರ, ಜನವರಿ 15ರಂದು ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿಯೇ ವಿಶ್ವದಾಖಲೆಯ 317 ರನ್‌ಗಳ ಅಂತರದ ಗೆಲುವು ಸಾಧಿಸಿತು.

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು 110 ಎಸೆತಗಳಲ್ಲಿ ಅಜೇಯ 166 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 46ನೇ ಶತಕ ಬಾರಿಸಿದರು ಮತ್ತು ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 74ನೇ ಶತಕ ಗಳಿಸಿದಂತಾಯಿತು.

IND vs SL 3rd ODI: ಮೊಹಮ್ಮದ್ ಸಿರಾಜ್‌ಗಾಗಿ ಇಡೀ ತಂಡ ಬೆಂಬಲ ನೀಡಿದ್ದೇಕೆ?; ರೋಹಿತ್ ಹೇಳಿದ್ದೇನು?IND vs SL 3rd ODI: ಮೊಹಮ್ಮದ್ ಸಿರಾಜ್‌ಗಾಗಿ ಇಡೀ ತಂಡ ಬೆಂಬಲ ನೀಡಿದ್ದೇಕೆ?; ರೋಹಿತ್ ಹೇಳಿದ್ದೇನು?

ಇದೀಗ ವಿರಾಟ್ ಕೊಹ್ಲಿ 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಲು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಬೆಂಬಲ ನೀಡಿದ್ದು, ಅವರು 40 ವರ್ಷ ವಯಸ್ಸಿನವರೆಗೂ ಆಟವಾಡುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರ ಅದ್ಭುತ ಫಿಟ್‌ನೆಟ್ ಗಮನಿಸಿದರೆ, ಇನ್ನೂ 5-6 ವರ್ಷಗಳವರೆಗೆ ಆಡಿದರೂ ಆಶ್ಚರ್ಯಪಡಬೇಕಿಲ್ಲ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಬ್ಯಾಟರ್ ಹೇಳಿದ್ದಾರೆ.

ಸ್ಕೋರ್ ಮಾಡುವ ಹಸಿವು ಮತ್ತು ಆಟದ ಮೇಲಿನ ಪ್ರೀತಿ

ಸ್ಕೋರ್ ಮಾಡುವ ಹಸಿವು ಮತ್ತು ಆಟದ ಮೇಲಿನ ಪ್ರೀತಿ

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 46ನೇ ಶತಕವನ್ನು ಗಳಿಸಿದ ನಂತರ ಮಾತನಾಡಿದ ಸುನಿಲ್ ಗವಾಸ್ಕರ್, ""ವಿರಾಟ್ ಕೊಹ್ಲಿ ದೊಡ್ಡ ಸ್ಕೋರ್ ಮಾಡುವ ಹಸಿವನ್ನು ಮತ್ತು ಆಟದ ಮೇಲಿನ ಪ್ರೀತಿಯನ್ನು ಮುಂದುವರಿಸಿದರೆ, 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ,'' ಎಂದು ತಿಳಿಸಿದರು.

ವಿರಾಟ್ ಕೊಹ್ಲಿ ತಮ್ಮ ಕೊನೆಯ 4 ಪಂದ್ಯಗಳಲ್ಲಿ 3 ಏಕದಿನ ಶತಕಗಳನ್ನು ಬಾರಿಸುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಶತಕಗಳ ಸಂಖ್ಯೆಯನ್ನು 74ಕ್ಕೆ ಏರಿಸಿದರು.

ವಿರಾಟ್ ಕೊಹ್ಲಿ ಅಜೇಯ 166 ರನ್

ವಿರಾಟ್ ಕೊಹ್ಲಿ ಅಜೇಯ 166 ರನ್

ಡಿಸೆಂಬರ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದಾಗ ತಮ್ಮ 3 ವರ್ಷಗಳ ಏಕದಿನ ಶತಕದ ಬರವನ್ನು ನೀಗಿಸಿಕೊಂಡರು ಮತ್ತು ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. ಅಹಮದಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 113 ರನ್‌ಗಳೊಂದಿಗೆ ವಿರಾಟ್ ಕೊಹ್ಲಿ ಹೊಸ ವರ್ಷವನ್ನು ಆರಂಭಿಸಿದರು.

ಇನ್ನು 2ನೇ ಏಕದಿನ ಪಂದ್ಯದಲ್ಲಿ 4 ರನ್ ಗಳಿಸಿ ಔಟಾದರೆ, ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 166 ರನ್ ಗಳಿಸಿ, ತಮ್ಮ ಎರಡನೇ ಅತ್ಯಧಿಕ ಏಕದಿನ ಸ್ಕೋರ್ ಅನ್ನು ದಾಖಲಿಸಿದರು. ಇದರಿಂದ ಭಾರತವು ವಿಶ್ವದಾಖಲೆಯ 317 ರನ್‌ಗಳ ಭರ್ಜರಿ ಜಯವನ್ನು ತಮ್ಮದಾಗಿಸಿಕೊಂಡಿತು.

ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಲು ಕೊಹ್ಲಿಗೆ ಕೇವಲ 3 ಶತಕ

ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಲು ಕೊಹ್ಲಿಗೆ ಕೇವಲ 3 ಶತಕ

ವಿರಾಟ್ ಕೊಹ್ಲಿ ಕಳೆದ 6 ತಿಂಗಳುಗಳಲ್ಲಿ 4 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ. 2023ರ ಏಕದಿನ ವಿಶ್ವಕಪ್‌ಗೆ ಮುನ್ನ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುನ್ನತ ಫಾರ್ಮ್ ತಲುಪಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿಗೆ ಕೇವಲ 3 ಶತಕಗಳ ಅವಶ್ಯಕತೆ ಇದೆ.

ಆದರೆ, ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ವಿಶ್ವ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿಗೆ ಇನ್ನೂ 26 ಶತಕಗಳ ಅಗತ್ಯವಿದೆ. ಸಚಿನ್ ತಮ್ಮ ವೃತ್ತಿ ಜೀವನದಲ್ಲಿ 51 ಟೆಸ್ಟ್ ಶತಕ ಮತ್ತು 49 ಏಕದಿನ ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ 46 ಏಕದಿನ ಶತಕ, ಒಂದು ಟಿ20 ಶತಕ ಮತ್ತು 27 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ ಭಾರತೀಯ ಟಿ20 ತಂಡಕ್ಕೆ ಆಯ್ಕೆಯಾಗಲ್ಲ

ವಿರಾಟ್ ಕೊಹ್ಲಿ ಭಾರತೀಯ ಟಿ20 ತಂಡಕ್ಕೆ ಆಯ್ಕೆಯಾಗಲ್ಲ

"ಸಚಿನ್ ತೆಂಡೂಲ್ಕರ್ ಕೂಡ ತಮ್ಮ 40ರ ವಯಸ್ಸಿನವರೆಗೂ ಆಡಿದ್ದರು ಮತ್ತು ಅವರು ತಮ್ಮ ಫಿಟ್‌ನೆಸ್ ಅನ್ನು ಉಳಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ಕೂಡ ತಮ್ಮ ಫಿಟ್ನೆಸ್ ಬಗ್ಗೆ ಬಹಳ ತಿಳಿದಿದ್ದಾರೆ. ಸದ್ಯದ ಭಾರತೀಯ ತಂಡದಲ್ಲಿ ವಿಕೆಟ್‌ಗಳ ನಡುವೆ ವೇಗದ ಓಟಗಾರರಾಗಿದ್ದಾರೆ. ಎಂಎಸ್ ಧೋನಿ ಇದ್ದಾಗ ಮಾತ್ರ ಯುವಕರೂ ನಾಚುವಂತೆ ಓಡುತ್ತಿದ್ದರು," ಎಂದು ಸುನಿಲ್ ಗವಾಸ್ಕರ್ ಹೇಳಿದರು.

2023ರ ಹೊಸ ವರ್ಷದ ಆರಂಭದಿಂದಲೂ ವಿರಾಟ್ ಕೊಹ್ಲಿಯನ್ನು ಭಾರತೀಯ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಆದರೆ ಭಾರತದ ಮಾಜಿ ನಾಯಕ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಪ್ರಮುಖ ಆಟಗಾರನಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, January 16, 2023, 9:55 [IST]
Other articles published on Jan 16, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X