ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಸಂಜು ಸ್ಯಾಮ್ಸನ್ ಕ್ರಿಕೆಟ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ವಾಸಿಂ ಜಾಫರ್

IND vs SL: Wasim Jaffer Makes Huge Statement About Sanju Samsons Cricket Future

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ವಾಸಿಂ ಜಾಫರ್ ಅವರು ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಂಬರುವ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಿಗೆ ಭಾರತದ ವೈಟ್-ಬಾಲ್ ತಂಡಗಳಿಗೆ ಅವರು ಆಯ್ಕೆಯಾಗುತ್ತಾರೆ ಎಂಬ ಭರವಸೆ ಹೊಂದಿರುವ ವಾಸಿಂ ಜಾಫರ್, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ 'ಸ್ಥಿರ ರನ್' ಗಳಿಸಬೇಕೆಂದು ಬಯಸಿದ್ದಾರೆ.

2023ರ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಈತನೇ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಬೇಕು: ಬ್ರೆಟ್ ಲೀ2023ರ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಈತನೇ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಬೇಕು: ಬ್ರೆಟ್ ಲೀ

"ಸಂಜು ಸ್ಯಾಮ್ಸನ್ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಳೆರಡಕ್ಕೂ ಭಾರತ ತಂಡದ ಭಾಗವಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಸ್ಥಿರವಾದ ರನ್ ಗಳಿಸುವುದರಿಂದ ದೀರ್ಘಾವಧಿಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುತ್ತಾನೆ," ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾ ತಂಡವು ಜನವರಿ 3ರಿಂದ ಜನವರಿ 15 ರವರೆಗೆ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ನಂತರ ಜನವರಿ 18ರಿಂದ ಫೆಬ್ರವರಿ 1ರವರೆಗೆ ನ್ಯೂಜಿಲೆಂಡ್ ತಂಡ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಿಗೆ ಭಾರತ ಪ್ರವಾಸ ಕೈಗೊಳ್ಳಲಿದೆ.

IND vs SL: Wasim Jaffer Makes Huge Statement About Sanju Samsons Cricket Future

ಈ ವರ್ಷ 10 ಏಕದಿನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 71.00ರ ಸರಾಸರಿಯಲ್ಲಿ 284 ರನ್ ಗಳಿಸಿದ್ದಾರೆ. ಎರಡು ಅರ್ಧಶತಕ ಬಾರಿಸಿದ್ದು, ಅದರಲ್ಲಿ 86 ರನ್ ಅತ್ಯುತ್ತಮ ಸ್ಕೋರ್ ಆಗಿದೆ.

ಇನ್ನು 2022ರಲ್ಲಿ 6 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಸಂಜು ಸ್ಯಾಮ್ಸನ್ 44.75ರ ಸರಾಸರಿಯಲ್ಲಿ 179 ರನ್ ಗಳಿಸಿದ್ದಾರೆ. ಒಂದು ಅರ್ಧ ಶತಕ . ಈ ವರ್ಷ ಟಿ20ಯಲ್ಲಿ ಅವರ ಸ್ಟ್ರೈಕ್‌ರೇಟ್ 158.40 ಆಗಿದೆ.

KL Rahul: ಕೆಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಫಾರ್ಮ್ ಟೀಕಿಸಿದ ದಿನೇಶ್ ಕಾರ್ತಿಕ್!KL Rahul: ಕೆಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಫಾರ್ಮ್ ಟೀಕಿಸಿದ ದಿನೇಶ್ ಕಾರ್ತಿಕ್!

ಸಂಜು ಸ್ಯಾಮ್ಸನ್ ಅವರು 2015ರಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರೂ ಸಹ, ಈವರೆಗೆ ಅವರ 27 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ವರ್ಷವೇ 16 ಪಂದ್ಯಗಳನ್ನು ಆಡಿದ್ದಾರೆ.

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸ್ಲಾಟ್‌ಗಾಗಿ ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ನಡುವೆ ದೊಡ್ಡ ಪೈಪೋಟಿ ಇದೆ. ಆದರೆ ಪಂತ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ.

IND vs SL: Wasim Jaffer Makes Huge Statement About Sanju Samsons Cricket Future

ರಿಷಭ್ ಪಂತ್ ಈ ವರ್ಷ ಆಡಿದ 25 ಟಿ20 ಪಂದ್ಯಗಳಲ್ಲಿ 21.41ರ ಸರಾಸರಿ ಮತ್ತು ಸ್ಟ್ರೈಕ್‌ರೇಟ್‌ನಲ್ಲಿ ಒಂದು ಅರ್ಧಶತಕ ಸೇರಿದಂತೆ 364 ರನ್ ಗಳಿಸಿದ್ದಾರೆ.

ಇನ್ನು ರಿಷಭ್ ಪಂತ್ 12 ಏಕದಿನ ಪಂದ್ಯಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 336 ರನ್ ಗಳಿಸಿದ್ದರೂ, ಅವರು ತಮ್ಮ ಉಳಿದ ಇನ್ನಿಂಗ್ಸ್‌ಗಳಲ್ಲಿ ಅಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

Story first published: Monday, December 26, 2022, 21:32 [IST]
Other articles published on Dec 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X