ವೆಸ್ಟ್ ಇಂಡೀಸ್ ವಿರುದ್ಧ 5ನೇ ಪಂದ್ಯದಲ್ಲೂ ಜಯಭೇರಿ: 4-1 ಅಂತರದಿಂದ ಸರಣಿ ಕೈವಶ

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿಯೂ ಭಾರತ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 4-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ಬೃಹತ್ ಮೊತ್ತವನ್ನು ಗಳಿಸಿತು. ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಸಹಿತ ಪ್ರಮುಖ ನಾಲ್ಕು ಬದಲಾವಣೆಯೊಂದಿಗೆ ಭಾರತ ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ಹಾಗಿದ್ದರೂ ಭಾರತದ ಬ್ಯಾಟಿಂಗ್‌ನ ಆಕ್ರಮಣಶೀಲತೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಶ್ರೇಯಸ್ ಐಯ್ಯರ್ ಹಾಗೂ ದೀಪಕ್ ಹೂಡಾ ಭರ್ಜರಿ ಪ್ರದರ್ಶನದಿಂದಾಗಿ ಭಾರತ 189 ರನ್‌ಗಳ ಬೃಹತ್ ಗುರಿಯನ್ನು ಮುಂದಿಟ್ಟಿತ್ತು. ಆದರೆ ಇದನ್ನು ಗಳಿಸಲು ವಿಫಲವಾದ ವೆಸ್ಟ್ ಇಂಡೀಸ್ ಕೇವಲ 100 ರನ್‌ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ ಶರಣಾಯಿತು.

ಭರ್ಜರಿ ಅರ್ಧ ಶತಕ ಸಿಡಿಸಿದ ಐಯ್ಯರ್

ಭರ್ಜರಿ ಅರ್ಧ ಶತಕ ಸಿಡಿಸಿದ ಐಯ್ಯರ್

ಇತ್ತೀಚಿನ ದಿನಗಳಲ್ಲಿ ಮಂಕಾದಂತೆ ಕಾಣಿಸುತ್ತಿದ್ದ ಶ್ರೇಯಸ್ ಐಯ್ಯರ್ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 40 ಎಸೆತಗಳನ್ನು ಎದುರಿಸಿದ ಐಯ್ಯರ್ 64 ರನ್‌ ಸಿಡಿಸಿ ಮಿಂಚಿದರು. ದೀಪಕ್ ಹೂಡಾ ಅವರ ಬ್ಯಾಟ್‌ನಿಂದ 38 ರನ್‌ಗಳು ಹರಿದು ಬಂದಿತು. ಇನ್ನು ನಾಯಕ ಹಾರ್ದಿಕ್ ಪಾಂಡ್ಯ ಕೂಡ 16 ಎಸೆತಗಳಲ್ಲಿ 28 ರನ್‌ ಬಾರಿಸಿ ಮಿಂಚಿದ್ದಾರೆ. ಇದರ ಪರಿಣಾಮವಾಗಿ ಭಾರತ 188 ರನ್‌ಗಳನ್ನು ಗಳಿಸಿದೆ.

ಸ್ಪಿನ್ ದಾಳಿಗೆ ವಿಂಡಿಸ್ ತತ್ತರ

ಸ್ಪಿನ್ ದಾಳಿಗೆ ವಿಂಡಿಸ್ ತತ್ತರ

ಇನ್ನು ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಭಾರತದ ಸ್ಪಿನ್ ಸುಳಿಯಲ್ಲಿ ಸಿಲುಕಿ ಸಂಪೂರ್ಣವಾಗಿ ನಲುಗಿತು. ಮೊದಲಿಗೆ ಅಕ್ಷರ್ ಪಟೇಲ್ ವಿಂಡೀಸ್ ಪಡೆಗೆ ಆಘಾತ ನೀಡಿದರೆ ನಂತರ ರವಿ ಬಿಷ್ಣೋಯ್ ಹಾಗೂ ಕುಲ್ದೀಪ್ ಯಾದವ್ ವಿಂಡೀಸ್ ದಾಂಡಿಗರನ್ನು ಸಂಪೂರ್ಣವಾಗಿ ಕೆಡವಿ ಹಾಕುವಲ್ಲಿ ಯಶಸ್ವಿಯಾದರು. ರವಿ ಬಿಷ್ಣೋಯ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ ಕುಲ್‌ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ 3 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ವಿಂಡಿಸ್ ಪಡೆ ಎಲ್ಲೂ ಉಸಿರೆತ್ತದಂತೆ ಮಾಡುವಲ್ಲಿ ಯಶಸ್ವಿಯಾದರು. ವೆಸ್ಟ್ ಇಂಡೀಸ್ ಪರವಾಗಿ ಶಿಮ್ರಾನ್ ಹೇಟ್ಮೇರ್ ಏಕಾಂಗಿ ಹೋರಾಟ ನಡೆಸಿ ಅರ್ಧ ಶತಕ ಸಿಡಿಸಿದರು.

ಸರಣಿ ಭಾರತದ ಕೈವಶ

ಸರಣಿ ಭಾರತದ ಕೈವಶ

ಇನ್ನು ಈ ಗೆಲುವಿನಿಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಅಮೋಘ 4-1 ಅಂತರದಿಂದ ಗೆಲುವು ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಭಾತದ ವಿಂಡೀಸ್ ಪ್ರವಾಸ ಅದ್ಭುತವಾಗಿ ಅಂತ್ಯಕಂಡಿದೆ. ಇದಕ್ಕೂ ಮುನ್ನ ಮೂರು ಪಮದ್ಯಗಳ ಏಕದಿನ ಸರಣಿಯಲ್ಲಿಯೂ ಭಾರತ 2-1 ಅಂತರದಿಂದ ವಶಕ್ಕೆ ಪಡೆದುಕೊಂಡಿತ್ತು.

ಗೆದ್ದಿದ್ದೇ ತಡ...Rohit Sharma ಕ್ಯಾಪ್ಟನ್ಸ್ ಮೇಲೆ ಕಣ್ಣಿಟ್ಟ Hardik Pandya *Cricket | Oneindia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ವೆಸ್ಟ್ ಇಂಡಿಸ್ ಪ್ಲೇಯಿಂಗ್ XI: ಶಮರ್ ಬ್ರೂಕ್ಸ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ನಾಯಕ), ಡೆವೊನ್ ಥಾಮಸ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಕೀಮೋ ಪಾಲ್, ಡೊಮಿನಿಕ್ ಡ್ರೇಕ್ಸ್, ಒಬೆಡ್ ಮೆಕಾಯ್, ಹೇಡನ್ ವಾಲ್ಷ್, ರೋವ್‌ಮನ್ ಪೊವೆಲ್
ಬೆಂಚ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ರೊಮಾರಿಯೋ ಶೆಫರ್ಡ್

ಭಾರತ ತಂಡ ಪ್ಲೇಯಿಂಗ್ XI: ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅವೇಶ್ ಖಾನ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್
ಬೆಂಚ್: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ರವೀಂದ್ರ ಜಡೇಜಾ

For Quick Alerts
ALLOW NOTIFICATIONS
For Daily Alerts
Story first published: Sunday, August 7, 2022, 23:48 [IST]
Other articles published on Aug 7, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X