ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉತ್ತಮ ಆಟವಾಡದಿದ್ದರೆ ಪೂಜಾರ, ರಹಾನೆ ರೀತಿ ತಂಡದಿಂದ ಔಟ್: ಭಾರತದ ಅನುಭವಿಗೆ ಆಯ್ಕೆಗಾರರಿಂದ ಖಡಕ್ ಎಚ್ಚರಿಕೆ!

Ind vs WI: perform in t20 or get dropped like Rahane and Pujara: selectors strong message to Indian pacer

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಬುಧವಾರದಿಂದ ಆರಂಭವಾಗಲಿದೆ. ಎರಡು ತಂಡಗಳು ಕೂಡ ಸಾಕಷ್ಟು ಉತ್ತಮ ಆಟಗಾರರ ಪಡೆಯನ್ನು ಹೊಂದಿರುವ ಕಾರಣ ಈ ಸರಣಿ ತೀವ್ರ ಕುತೂಹಲ ಮೂಡಿಸಿದೆ. ಈ ಸರಣಿಯಲ್ಲಿ ಅನೇಕ ಯುವ ಆಟಗಾರು ಅವಕಾಶವನ್ನು ಪಡೆದುಕೊಂಡಿದ್ದು ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚುವ ವಿಶ್ವಾಸ ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ತಂಡದ ಅನುಭವಿ ಆಟಗಾರನೋರ್ವನಿಗೆ ಅದ್ಭುತ ಆಟ ಪ್ರದರ್ಶಿಸಬೇಕಾದ ಅನಿವಾರ್ಯತೆಯಿದೆ.

ದಕ್ಷಿಣ ಆಪ್ರಿಕಾ ವಿರುದ್ಧದ ಪ್ರವಾಸದಲ್ಲಿ ಮಿಚಲು ವಿಫಲವಾಗಿದ್ದ ಭಾರತದ ಅನುಭವಿ ಆಟಗಾರನಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಬಹಳ ಪ್ರಮುಖ ಸರಣಿ ಎನ್ನಲಾಗುತ್ತಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರವೇ ಮುಂದಿನ ಸರಣಿಯಲ್ಲಿ ಅವಕಾಶ ನೀಡಲು ಸಾಧ್ಯ ಎಂಬ ಖಡಕ್ ಎಚ್ಚರಿಕೆ ಭಾರತ ತಂಡದ ಆಯ್ಕೆಗಾರರಿಂದಲೇ ಬಂದಿದೆ ಎಂದು ವರದಿಯಾಗಿದೆ.

ಭಾರತ vs ಶ್ರೀಲಂಕಾ: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್ಭಾರತ vs ಶ್ರೀಲಂಕಾ: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್

ಹಾಗಾದರೆ ಆಯ್ಕೆಗಾರರಿಂದ ಖಡಕ್ ಎಚ್ಚರಿಕೆ ಪಡೆದ ಆ ಆಟಗಾರ ಯಾರು? ಯಾವ ಎಚ್ಚರಿಕೆಯನ್ನು ಆಯ್ಕೆಗಾರರು ನೀಡಿದ್ದಾರೆ ಮುಂದೆ ಓದಿ..

ಭುವನೇಶ್ವರ್ ಕುಮಾರ್ ಭವಿಷ್ಯ ಆತಂಕದಲ್ಲಿ

ಭುವನೇಶ್ವರ್ ಕುಮಾರ್ ಭವಿಷ್ಯ ಆತಂಕದಲ್ಲಿ

ಟೀಮ್ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸೀಮಿತ ಓವರ್‌ಗಳ ಸರಣಿಯಲ್ಲಿ ತಂಡದ ಅವಿಭಜ್ಯ ಅಂಗವಾಗಿದ್ದ ಆಟಗಾರ. ಆದರೆ ಇತ್ತೀಚೆಗೆ ಗಾಯದ ಸಮಸ್ಯೆಯಿಂದಾಗಿ ಭುವಿ ತಮ್ಮ ಹಿಂದಿನ ಮೊನಚನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಇತ್ತೀಚೆಗೆ ಅಂತ್ಯವಾದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿಯೂ ಭುವಿ ಆಟ ತೀರಾ ಸಾಧಾರಣವಾಗಿತ್ತು. ಹೀಗಾಗಿ ಆಯ್ಕೆಗಾರರು ಭುವನೇಶ್ವರ್ ಕುಮಾರ್‌ಗೆ ಪ್ರದರ್ಶನದ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಉತ್ತಮ ಪ್ರದರ್ಶನ ನೀಡಿ ಇಲ್ಲದಿದ್ದರೆ ಪೂಜಾರ, ರಹಾನೆ ರೀತಿ ಔಟ್

ಉತ್ತಮ ಪ್ರದರ್ಶನ ನೀಡಿ ಇಲ್ಲದಿದ್ದರೆ ಪೂಜಾರ, ರಹಾನೆ ರೀತಿ ಔಟ್

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭುವನೇಶ್ವರ್ ಕುಮಾರ್ ನೀಡಿದ ಕಳಪೆ ಪ್ರದರ್ಶನದ ಬಳಿಕ ಆಯ್ಕೆಯಾರರು ವಿಂಡೀಸ್ ವಿರುದ್ಧದ ಸರಣಿಗೂ ಮುನ್ನ ಭುವನೇಶ್ವರ್‌ಗೆ ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದಾರೆ. "ಉತ್ತಮ ಪ್ರದರ್ಶನ ನೀಡಿ, ಇಲ್ಲದಿದ್ದರೆ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ರೀತಿ ತಂಡದಿಂದ ಹೊರಬೀಳಲಿದ್ದೀರಿ" ಎಂಬ ಸಂದೇಶವನ್ನು ನೀಡಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಸರರವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಶ್ರೀಲಂಕಾ ವಿರುದ್ಧಧ ಟೆಸ್ಟ್ ಸರಣಿಯಿಂದ ಈ ಇಬ್ಬರು ಆಟಗಾರರನ್ನು ಕೈಬಿಡಲು ನಿರ್ಧಿರಿಸಲಾಗಿದೆ.

ಆಯ್ಕೆ ಮಂಡಳಿಯಿಂದ ಖಡಕ್ ಎಚ್ಚರಿಕೆ

ಆಯ್ಕೆ ಮಂಡಳಿಯಿಂದ ಖಡಕ್ ಎಚ್ಚರಿಕೆ

ಬಿಸಿಸಿಐ ಆಯ್ಕೆಗಾರರ ತಂಡದ ಸದಸ್ಯರೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಖಮಡಿತವಾಗಿಯೂ ಅವರು ಅಂತಿಮ ಘಟ್ಟದಲ್ಲಿದ್ದಾರೆ. ಕಳೆದ ಐಪಿಎಲ್ ಬಳಿಕ ಅವರು ಈ ಹಿಂದಿನ ಭುವನೇಶ್ವರ್ ಕುಮಾರ್ ಅವರಂತೆ ಪ್ರದರ್ಶನ ನೀಡುತ್ತಿಲ್ಲ. ಅವರು ದಕ್ಷಿಣ ಆಫ್ರಕಿಕಾ ಪ್ರವಾಸದಲ್ಲಿಯೂ ಕಳಪೆ ಆಟವನ್ನು ಪ್ರದರ್ಶಿಸಿದ್ದರು. ತಂಡದ ಮ್ಯಾನೇಜ್‌ಮೆಂಡ್ ಯುವ ಆಟಗಾರರಿಗೆ ಅವಕಾಶವನ್ನು ನೀಡಲು ಕಾಯಿತ್ತಿದೆ. ಶಮಿ ತಂಡಕ್ಕೆ ಮರಳಿದ ಬಳಿಕ ಭುವನೇಶ್ವರ್ ಹಾದಿ ಮತ್ತಷ್ಟು ಕಠಿಣವಾಗಿರಲಿದೆ. ವೆಸ್ಟ್ ಇಂಡಿಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಅಥವಾ ಮೊದಲ ಎರಡು ಪಂದ್ಯಗಳಲ್ಲಿನೀಡುವ ಪ್ರದರ್ಶನ ಭುವಿ ಕ್ರಿಕೆಟ್ ಭವಿಷ್ಯವನ್ನು ನಿರ್ಧರಿಲಾಗುತ್ತದೆ. ಇಲ್ಲವಾದರೆ ಅವರು ಕೂಡ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ರೀತಿಯಲ್ಲಿಯೇ ತಂಡದಿಮದ ಹೊರಬೀಳಲಿದ್ದಾರೆ" ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

KL Rahul ಗೆ ಬ್ಯಾಡ್ ನ್ಯೂಸ್ ಕೊಟ್ಟ BCCI | Oneindia Kannada
ಲಂಕಾ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರಾ ಭುವಿ?

ಲಂಕಾ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರಾ ಭುವಿ?

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿರುವಂತೆಯೇ ಈ ವಾರಾಂತ್ಯದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ತಂಡವನ್ನು ಘೋಷಿಸುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಯಾವ ರಿತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಆಯ್ಕೆ ಮಂಡಳಿ ನೋಡಲಿದ್ದು ಈ ಪ್ರದರ್ಶನದ ಆಧಾರದಲ್ಲಿ ಮುಂದಿನ ಸರಣಿಗೆ ಭುವಿ ಆಯ್ಕೆಯ ಬಗ್ಗೆ ನಿರ್ಧಾರವಾಗಲಿದೆ ಎನ್ನಲಾಗಿದೆ.

Story first published: Wednesday, February 16, 2022, 18:21 [IST]
Other articles published on Feb 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X