ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾಮ್ ಕುರ್ರನ್ ಬೌಲಿಂಗ್ ದಾಳಿಗೆ ಬೆದರಿದ ಭಾರತ 'ಎ'

india a england lions unofficial test 3nd day 1st session report

ವರ್ಸೆಸ್ಟರ್, ಜುಲೈ 18: ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ಎದುರು 197 ರನ್‌ಗಳಿಗೆ ಆಲೌಟ್‌ ಆಗಿದೆ.

ಮೂರನೇ ದಿನದ ಮೊದಲ ಅವಧಿಯ ಕೊನೆಯಲ್ಲಿ ಕೇವಲ 8 ರನ್‌ಗಳಿಗೆ ಭಾರತ ತನ್ನ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡು, 226 ರನ್‌ಗಳ ಹಿನ್ನಡೆ ಅನುಭವಿಸಿದೆ.

ಇಂಗ್ಲೆಂಡ್ ಲಯನ್ಸ್ ಎದುರು ಸಂಕಷ್ಟದಲ್ಲಿ ಭಾರತ 'ಎ' ತಂಡಇಂಗ್ಲೆಂಡ್ ಲಯನ್ಸ್ ಎದುರು ಸಂಕಷ್ಟದಲ್ಲಿ ಭಾರತ 'ಎ' ತಂಡ

ಪ್ರವಾಸಿಗರ ಮೇಲೆ ಫಾಲೊಆನ್ ಹೇರದ ಇಂಗ್ಲೆಂಡ್ ಲಯನ್ಸ್ ನಾಯಕ ರೋರಿ ಬರ್ನ್ಸ್ ಎರಡನೆಯ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

ಎರಡನೆಯ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿದ್ದ ಭಾರತ ಎ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿದರು.

ಹಿಂದಿನ ದಿನದ ಮುರಿಯದ 51 ರನ್ ಜತೆಯಾಟವನ್ನು ಅಜಿಂಕ್ಯ ರಹಾನೆ ಮತ್ತು ರಿಷಬ್ ಪಂತ್ 96ಕ್ಕೆ ಹಿಗ್ಗಿಸಿದರು.

ತಂಡದ ಮೊತ್ತ 189 ಆಗಿದ್ದಾಗ 58 ರನ್ ಗಳಿಸಿದ್ದ ಪಂತ್ ವಿಕೆಟ್ ಒಪ್ಪಿಸಿದರು. ಅದೇ ಮೊತ್ತಕ್ಕೆ 49 ರನ್ ಗಳಿಸಿದ್ದ ರಹಾನೆ ಔಟಾದರೆ, ಮರು ಎಸೆತದಲ್ಲಿಯೇ ಶಹಬಾಜ್ ನದೀಮ್ ಪೆವಿಲಿಯನ್ ಹಾದಿ ಹಿಡಿದರು.

ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳಿಗಾಗಿ ಭಾರತದ ತಂಡ ಪ್ರಕಟ ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳಿಗಾಗಿ ಭಾರತದ ತಂಡ ಪ್ರಕಟ

197 ರನ್ ಆಗುವಷ್ಟರಲ್ಲಿ ಭಾರತದ ಬಾಲಂಗೋಚಿಗಳು ಗೂಡು ಸೇರಿಕೊಳ್ಳಲು ಅವಸರಿಸಿದರು.

ಸಾಮ್ ಕುರ್ರನ್ 43 ರನ್ ನೀಡಿ 5 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: ಮೊದಲ ಇನ್ನಿಂಗ್ಸ್ 423/10 (128.5) ಅಲೆಸ್ಟರ್ ಕುಕ್ 180, ನಿಕ್ ಗುಬ್ಬಿನ್ಸ್ 73, ಡೇವಿಡ್ ಮಲನ್ 74, ಮೊಹಮ್ಮದ್ ಸಿರಾಜ್ 79/4, ಶಹಬಾಜ್ ನದೀಮ್ 46/3, ಅಂಕಿತ್ ರಜಪೂತ್ 64/2

ಭಾರತ: ಮೊದಲ ಇನ್ನಿಂಗ್ಸ್ 197/10 (66.5) ಪೃಥ್ವಿ ಶಾ 62, ಅಜಿಂಕ್ಯ ರಹಾನೆ 49, ರಿಷಬ್ ಪಂತ್ 58, ಸಾಮ್ ಕುರ್ರನ್ 43/5, ಮ್ಯಾಥ್ಯೂ ಫಿಶರ್ 43/2, ಕ್ರಿಸ್ ವೋಕ್ಸ್ 28/2

Story first published: Wednesday, July 18, 2018, 18:51 [IST]
Other articles published on Jul 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X