ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದ ಭಾರತ 'ಎ'

India a vs west indies a 1st unofficial test 1st day

ಬೆಕೆನ್‌ಹ್ಯಾಮ್, ಜುಲೈ 5: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ 'ಎ' ತಂಡ ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದೆ.

ವೆಸ್ಟ್ ಇಂಡೀಸ್‌ನ ವೇಗದ ಬೌಲರ್‌ಗಳ ಎದುರು ತಡಬಡಾಯಿಸಿದ ಭಾರತದ ಬ್ಯಾಟ್ಸ್‌ಮನ್‌ಗಳು ಕೇವಲ 133 ರನ್‌ಗಳಿಗೆ ತಮ್ಮ ಮೊದಲ ಇನ್ನಿಂಗ್ಸ್ ಹೋರಾಟ ಮುಗಿಸಿದರು.

ಬಳಿಕ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡಿತು. ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿರುವ ವೆಸ್ಟ್ ಇಂಡೀಸ್ 15 ರನ್‌ಗಳ ಮುನ್ನಡೆ ಸಾಧಿಸಿದೆ.

ವೆಸ್ಟ್‌ ಇಂಡೀಸ್ ವಿರುದ್ಧ ಕೇವಲ 43 ರನ್‌ಗೆ ಬಾಂಗ್ಲಾದೇಶ ಆಲೌಟ್ವೆಸ್ಟ್‌ ಇಂಡೀಸ್ ವಿರುದ್ಧ ಕೇವಲ 43 ರನ್‌ಗೆ ಬಾಂಗ್ಲಾದೇಶ ಆಲೌಟ್

ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡದ ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಮಯಂಕ್ ಅಗರ್ವಾಲ್ ಇಬ್ಬರೂ ಎದುರಿಸಿದ್ದು ತಲಾ ಒಂದು ಎಸೆತಗಳನ್ನು ಮಾತ್ರ. ಇಬ್ಬರೂ ಶೂನ್ಯ ಸಂಪಾದನೆ ಮಾಡಿ ಪೆವಿಲಿಯನ್ ಹಾದಿ ಹಿಡಿದರೆ, ಎರಡು ರನ್ ಗಳಿಸಿದ ರವಿಕುಮಾರ್ ಸಮರ್ಥ್ ಕೂಡ ಹೊರ ಹೋಗಲು ಅವಸರ ಮಾಡಿದರು.

ಮೊದಲ ಏಳು ಎಸೆತಗಳಲ್ಲಿಯೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಕರುಣ್ ನಾಯರ್ ಮತ್ತು ಹನುಮ ವಿಹಾರಿ ಆಸರೆಯಾದರು.

ನಾಲ್ಕನೆ ವಿಕೆಟ್‌ಗೆ ಇಬ್ಬರೂ 42 ರನ್ ಸೇರಿಸಿದಾಗ 20 ರನ್ ಗಳಿಸಿದ್ದ ಕರುಣ್ ಔಟಾದರು. ಬಳಿಕ ವಿಹಾರಿ ಅವರನ್ನು ಸೇರಿಕೊಂಡ ವಿಜಯ್ ಶಂಕರ್ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.

ಶತಕ ಸಿಡಿಸಿದ ರಾಹುಲ್ ಆ ಪರಿ ಸಂಭ್ರಮಾಚರಿಸಿದ ಗುಟ್ಟೇನು ಗೊತ್ತಾ?ಶತಕ ಸಿಡಿಸಿದ ರಾಹುಲ್ ಆ ಪರಿ ಸಂಭ್ರಮಾಚರಿಸಿದ ಗುಟ್ಟೇನು ಗೊತ್ತಾ?

ವಿಜಯ್ ಶಂಕರ್ ವಿಕೆಟ್ ಒಪ್ಪಿಸುತ್ತಿದ್ದಂತೆಯೇ ಉಳಿದ ಬಾಲಂಗೋಚಿಗಳು ಹೆಚ್ಚು ಹೊತ್ತು ನಿಲ್ಲುವ ಪ್ರಯತ್ನ ಮಾಡಲಿಲ್ಲ.

ವೆಸ್ಟ್ ಇಂಡೀಸ್ ಕೂಡ ಮೊದಲನೆ ಓವರ್‌ನಲ್ಲಿಯೇ ಆರಂಭಿಕ ಆಟಗಾರ ಜೆ.ಡಿ. ಕ್ಯಾಂಪ್‌ಬೆಲ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ, ಚಂದ್ರಪಾಲ್ ಹೇಮರಾಜ್ ಮತ್ತು ಎಸ್‌ಎಸ್‌ಜೆ ಬ್ರೂಕ್ಸ್ ಅವರ ಉತ್ತಮ ಆಟದ ನೆರವಿನಿಂದ ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್
ಭಾರತ: ವಿಜಯ್ ಶಂಕರ್ 34, ಹನುಮ ವಿಹಾರಿ 37, ಕರುಣ್ ನಾಯರ್ 20. ಸಿ.ಕೆ. ಹೋಲ್ಡರ್ 57/4, ಎಸ್ ಲೆವಿಸ್ 35/4, ಆರ್ಎ ರೀಫೆರ್ 20/2

ವೆಸ್ಟ್ ಇಂಡೀಸ್: ಸಿ. ಹೇಮರಾಜ್ 42, ಬ್ರೂಕ್ಸ್ 56*, ಆಂಬ್ರಿಸ್ 30*, ಅಂಕಿತ್ ರಜಪೂತ್ 40/2, ಎಸ್. ನದೀಮ್ 20/1

Story first published: Thursday, July 5, 2018, 16:17 [IST]
Other articles published on Jul 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X