ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೃಥ್ವಿ ಶಾ ಬಿರುಸಿನ ಶತಕ: ಎರಡನೆಯ ಇನ್ನಿಂಗ್ಸ್‌ನಲ್ಲಿ ಭಾರತ 'ಎ' ತಿರುಗೇಟು

India a vs west indies a 1st unofficial test 2nd day report

ಬೆಕೆನ್‌ಹ್ಯಾಮ್, ಜುಲೈ 6: ವೆಸ್ಟ್ ಇಂಡೀಸ್ 'ಎ' ವಿರುದ್ಧದ ಮೊದಲ ಅನಧಿಕೃತ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೆಯ ಇನ್ನಿಂಗ್ಸ್‌ನಲ್ಲಿ ಭಾರತ 'ಎ' ತಂಡ ತಿರುಗೇಟು ನೀಡಿದೆ.

ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಮಯಂಕ್ ಅಗರ್ವಾಲ್ ಅಜೇಯ ಶತಕದ ಜತೆಯಾಟ ನೀಡಿದ್ದು, ತಂಡಕ್ಕೆ ತುಸು ನೆಮ್ಮದಿ ನೀಡಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಮಾಡಿ ಅಲ್ಪ ಮೊತ್ತಕ್ಕೆ ಕುಸಿದಿದ್ದ ಭಾರತ ತಂಡ, ಬೌಲಿಂಗ್‌ನಲ್ಲಿಯೂ ವೈಫಲ್ಯ ಕಂಡಿತ್ತು. ಇದರಿಂದ ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 250 ರನ್‌ಗಳ ಮುನ್ನಡೆ ನೀಡಿದೆ.

ಎರಡನೆಯ ಇನ್ನಿಂಗ್ಸ್‌ನಲ್ಲಿ ದಿಟ್ಟ ಆರಂಭ ನೀಡಿರುವ ಭಾರತದ ಓಪನರ್‌ಗಳು ಇನ್ನಿಂಗ್ಸ್ ಸೋಲಿನ ಸಾಧ್ಯತೆಯನ್ನು ಬಹುತೇಕ ತಪ್ಪಿಸಿದ್ದಾರೆ. ಆದರೆ, ಎರಡು ದಿನಗಳ ಆಟ ಬಾಕಿ ಇದ್ದು, ಭಾರತ ಬೃಹತ್ ಮೊತ್ತ ಕಲೆಹಾಕಿದರೆ ಪಂದ್ಯವನ್ನು ಉಳಿಸಿಕೊಳ್ಳಬಹುದಾಗಿದೆ.

ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್ 148 ರನ್ ಗಳಿಸಿದ್ದ ವೆಸ್ಟ್ ಇಂಡೀಸ್, ಎರಡನೆಯ ದಿನದ ಆರಂಭದಲ್ಲಿಯೂ ಪ್ರಾಬಲ್ಯ ಮೆರೆಯಿತು.

30 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಸುನಿಲ್ ಆಂಬ್ರಿಸ್ ಶತಕ ಬಾರಿಸಿದರೆ, ಅರ್ಧ ಶತಕ ಗಳಿಸಿ ಅಜೇಯರಾಗಿ ಉಳಿಸಿದ್ದ ಶಮರ್ ಬ್ರೂಕ್ಸ್ 91 ರನ್ ಗಳಿಸಿ ಶತಕದ ಅಂಚಿನಲ್ಲಿ ಔಟಾದರು.

ಬಳಿಕ ಅವರ ಜತೆಗೂಡಿದ ರೇಮನ್ ರೀಫೆರ್ ಕೂಡ ಅರ್ಧ ಶತಕ ಗಳಿಸಿ ವೆಸ್ಟ್ ಇಂಡೀಸ್‌ಗೆ ಬೃಹತ್ ಮುನ್ನಡೆ ತಂದುಕೊಟ್ಟರು.

ಎರಡನೆಯ ಇನ್ನಿಂಗ್ಸ್ ಆರಂಭಿಸಿದ ಭಾರತ ಎ ತಂಡದ ಬ್ಯಾಟ್ಸ್‌ಮನ್‌ಗಳು ಬಿರುಸಿನ ಆಟಕ್ಕೆ ಮೊರೆ ಹೋದರು. ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಇಬ್ಬರೂ ಆರಂಭಿಕರು ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದರು.

ಅದರಲ್ಲಿಯೂ ಪೃಥ್ವಿ ಶಾ, ಟಿ20 ಆಟದ ಮಾದರಿಯಲ್ಲಿ ಬ್ಯಾಟ್ ಬೀಸಿದರು. ಕೇವಲ 74 ಎಸೆತಗಳಲ್ಲಿಯೇ ಅವರು ಶತಕ ಬಾರಿಸಿದರು. ಅವರ ಅಜೇಯ 101 ರನ್‌ಗಳ ಆಟದಲ್ಲಿ 18 ಬೌಂಡರಿನ ಮತ್ತು 1 ಸಿಕ್ಸರ್ ಸೇರಿವೆ.



ಮತ್ತೊಂದೆಡೆ ಬಿರುಸಿನ ಆಟಕ್ಕೆ ಹೆಸರಾದ ಮಯಂಕ್ ಅಗರ್ವಾಲ್, ತುಸು ಎಚ್ಚರಿಕೆಯ ಆಟವಾಡುತ್ತಲೇ ಅವಕಾಶ ಸಿಕ್ಕಾಗ ಚೆಂಡನ್ನು ಬೌಂಡರಿಗೆ ಅಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಿದರು. 71 ಎಸೆತಗಳಲ್ಲಿ 56 ರನ್ ಗಳಿಸಿರುವ ಮಯಂಕ್ ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳಿವೆ.

ಇಬ್ಬರ ಭರ್ಜರಿ ಬ್ಯಾಟಿಂಗ್‌ನಿಂದ ತಂಡವು 24 ಓವರ್‌ಗಳಲ್ಲಿ 159 ರನ್ ಪೇರಿಸಿದೆ. ಆದರೆ, ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಭಾರತ ಇನ್ನೂ 91 ರನ್‌ಗಳನ್ನು ಗಳಿಸಬೇಕಿದೆ.

ಸಂಕ್ಷಿಪ್ತ ಸ್ಕೋರ್
ಭಾರತ ಎ: 133 & 159/0(24), ಪೃಥ್ವಿ ಶಾ 101*, ಮಯಂಕ್ ಅಗರ್ವಾಲ್ 56*

ವೆಸ್ಟ್ ಇಂಡೀಸ್ ಎ: 381/10 (101.2) ಸುನಿಲ್ ಆಂಬ್ರಿಸ್ 128, ಶಮರ್ ಬ್ರೂಕ್ಸ್ 91, ರೇಮನ್ ರೀಫೆರ್ 52. ಅಂಕಿತ್ ರಜಪೂತ್ 76/4, ನವದೀಪ್ ಸೈನಿ 78/2, ಶಹಬಾಜ್ ನದೀಮ್ 87/2.

Story first published: Friday, July 6, 2018, 12:06 [IST]
Other articles published on Jul 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X