ಇಂಗ್ಲೆಂಡ್ ವಿರುದ್ಧ ಸೋತು ಏಕದಿನ ವಿಶ್ವಕಪ್ ಅಂಕಪಟ್ಟಿಯಲ್ಲಿ ಕುಸಿದ ಭಾರತ; ಈ ಪಟ್ಟಿ ಏಕೆ ಮುಖ್ಯ?

2023ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಭಾರತದ ನೆಲದಲ್ಲಿ ಪ್ರತಿಷ್ಠಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿ ಜರುಗಲಿದೆ. ಈ ಮಹತ್ವದ ಟೂರ್ನಿಯಲ್ಲಿ ನೇರವಾಗಿ ಲೀಗ್ ಹಂತಕ್ಕೆ ಅರ್ಹತೆ ಪಡೆಯಲು ಸದ್ಯ ವಿವಿಧ ತಂಡಗಳು ಏಕದಿನ ಸರಣಿಗಳಲ್ಲಿ ಸೆಣಸಾಟ ನಡೆಸಿ ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಗಿಟ್ಟಿಸಿಕೊಳ್ಳುವತ್ತ ಕಣ್ಣಿಟ್ಟಿವೆ.
ಇನ್ನು ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ನಿರತವಾಗಿದ್ದು ಆಂಗ್ಲರ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವಿನ ಮೊದಲೆರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು ಎರಡೂ ತಂಡಗಳು ಸಹ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿ ಸಮಬಲವಾಗಿದೆ. ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಪಂದ್ಯದಲ್ಲಿ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 100 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು.
ಹೀಗೆ ಟೀಮ್ ಇಂಡಿಯಾ ಈ ಸೋಲಿನ ಮೂಲಕ ಸರಣಿಯ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳುವುದರ ಜತೆಗೆ ಪಂದ್ಯದ ಸೋಲಿನ ಪರಿಣಾಮವಾಗಿ ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿತ ಕಂಡಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯ ಮುಕ್ತಾಯವಾದ ನಂತರ ಈ ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿ ಹೇಗಿದೆ ಮತ್ತು ಇದರ ಪ್ರಾಮುಖ್ಯತೆ ಏನು ಎಂಬುದರ ಕುರಿತಾದ ಮಾಹಿತಿ ಮುಂದೆ ಇದೆ ಓದಿ.

ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿ
ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯ ಮುಕ್ತಾಯವಾದ ನಂತರ ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಅಂಕ ಪಟ್ಟಿ ಕೆಳಕಂಡಂತಿದೆ.
1. ಇಂಗ್ಲೆಂಡ್ - 135 ಅಂಕಗಳು
2. ಬಾಂಗ್ಲಾದೇಶ - 130 ಅಂಕಗಳು
3. ಅಫ್ಘಾನಿಸ್ತಾನ - 100 ಅಂಕಗಳು
4. ಪಾಕಿಸ್ತಾನ - 90 ಅಂಕಗಳು
5. ನ್ಯೂಜಿಲೆಂಡ್ - 80 ಅಂಕಗಳು
6. ವೆಸ್ಟ್ ಇಂಡೀಸ್ - 80 ಅಂಕಗಳು
7. ಭಾರತ - 79 ಅಂಕಗಳು
8. ಆಸ್ಟ್ರೇಲಿಯಾ - 70 ಅಂಕಗಳು
9. ಐರ್ಲೆಂಡ್ - 68 ಅಂಕಗಳು
10. ಶ್ರೀಲಂಕಾ - 62 ಅಂಕಗಳು
11. ಸೌತ್ ಆಫ್ರಿಕಾ - 49 ಅಂಕಗಳು
12. ಜಿಂಬಾಬ್ವೆ - 35 ಅಂಕಗಳು
13. ನೆದರ್ಲೆಂಡ್ - 25 ಅಂಕಗಳು

ಏಳನೇ ಸ್ಥಾನಕ್ಕೆ ಕುಸಿದ ಭಾರತ, ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದ ಫಲಿತಾಂಶ ಹೊರಬಿದ್ದ ನಂತರ ಈ ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಏಳನೇ ಸ್ಥಾನಕ್ಕೆ ಕುಸಿತ ಕಂಡರೆ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದೆ.

ಈ ಅಂಕಪಟ್ಟಿ ಏಕೆ ಮುಖ್ಯ?
ಈ ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಟಾಪ್ 8 ಸ್ಥಾನ ಪಡೆದುಕೊಳ್ಖುವ ತಂಡಗಳು ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತಕ್ಕೆ ನೇರವಾಗಿ ಪ್ರವೇಶ ಪಡೆದುಕೊಳ್ಳಲಿವೆ. ಹಾಗೂ ಎಂಟಕ್ಕಿಂತ ಕಳಪೆ ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಅಸೋಸಿಯೇಟ್ ತಂಡಗಳ ಜತೆ ಕ್ವಾಲಿಫೈಯರ್ ಸುತ್ತಿನಲ್ಲಿ ಭಾಗವಹಿಸಿ ಜಯ ಸಾಧಿಸಿದರೆ ಮಾತ್ರ ಲೀಗ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿವೆ. ಹೀಗಾಗಿ ಈ ಅಂಕಪಟ್ಟಿ ಪ್ರಾಮುಖ್ಯತೆಯನ್ನು ಹೊಂದಿದೆ.
ಇನ್ನು ಈ ಸೂಪರ್ ಲೀಗ್ ಹಣಾಹಣಿಯಲ್ಲಿ ಗೆದ್ದ ತಂಡಗಳಿಗೆ 10 ಅಂಕಗಳು ದೊರೆತರೆ, ಸೋಲುವ ತಂಡಕ್ಕೆ ಯಾವುದೇ ಅಂಕಗಳು ಕೂಡಾ ದೊರೆಯುವುದಿಲ್ಲ ಹಾಗೂ ಪಂದ್ಯ ರದ್ದಾದರೆ ಅಥವಾ ಟೈ ಆದರೆ ಎರಡೂ ತಂಡಗಳಿಗೂ ತಲಾ 5 ಅಂಕ ನೀಡಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications