ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಶಫಾಲಿ ವರ್ಮಾ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
"ಅಖಿಲ ಭಾರತ ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿಯು ಮುಂಬರುವ ದಕ್ಷಿಣ ಆಫ್ರಿಕಾ ಅಂಡರ್-19 ಮಹಿಳಾ ತಂಡದ ವಿರುದ್ಧದ ದ್ವಿಪಕ್ಷೀಯ ಟಿ20 ಸರಣಿ ಮತ್ತು ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗಾಗಿ ಭಾರತ ಅಂಡರ್-19 ಮಹಿಳಾ ತಂಡವನ್ನು ಆಯ್ಕೆ ಮಾಡಲಾಗಿದೆ," ಎಂದು ಬಿಸಿಸಿಐ ತಿಳಿಸಿದೆ.
IND vs BAN: ಮೊದಲ ಏಕದಿನ ಪಂದ್ಯ ಸೋಲಲು ಭಾರತದ ಈ 3 ತಪ್ಪುಗಳೇ ಕಾರಣ
16 ತಂಡಗಳನ್ನು ಒಳಗೊಂಡ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯು ದಕ್ಷಿಣ ಆಫ್ರಿಕಾದಲ್ಲಿ 2023ರ ಜನವರಿ 14ರಿಂದ 29ರವರೆಗೆ ನಡೆಯಲಿದೆ.
ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾ, ಯುಎಇ ಮತ್ತು ಸ್ಕಾಟ್ಲೆಂಡ್ ತಂಡಗಳ ಜೊತೆಗೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ 6 ಹಂತಕ್ಕೆ ಮುನ್ನಡೆಯುತ್ತವೆ. ಅಲ್ಲಿ ಆರು ತಂಡಗಳನ್ನು ಎರಡು ಗುಂಪುಗಳಾಗಿ ಪೂಲ್ ಮಾಡಲಾಗುತ್ತದೆ.
ನಂತರ ಪ್ರತಿ ಗುಂಪಿನಿಂದ ಎರಡು ಅಗ್ರ ತಂಡಗಳು ಸೆಮಿಫೈನಲ್ ತಲುಪುತ್ತವೆ. ಸೆಮಿಫೈನಲ್ ಪಂದ್ಯಗಳು ಜನವರಿ 27ರಂದು ಪಾಚೆಫ್‌ಸ್ಟ್ರೂಮ್‌ನಲ್ಲಿರುವ ಜೆಬಿ ಮಾರ್ಕ್ಸ್ ಓವಲ್ ಮೈದಾನದಲ್ಲಿ ಆಡಲಾಗುತ್ತದೆ. ಜನವರಿ 29ರಂದು ಇದೇ ಸ್ಥಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
IND vs BAN 1st ODI : ಭಾರತ ವಿರುದ್ಧ ಈ ಸಾಧನೆ ಮಾಡಿದ ಬಾಂಗ್ಲಾದ ಮೊದಲ ಸ್ಪಿನ್ನರ್ ಶಕೀಬ್ ಅಲ್ ಹಸನ್
ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗಾಗಿ ಭಾರತ ಅಂಡರ್-19 ತಂಡ
ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಜಿ ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲಿ ಗಾಲಾ, ಹೃಷಿತಾ ಬಸು (ವಿಕೆಟ್ ಕೀಪರ್), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟಿಟಾಸ್ ಸಾಧು, ಫಲಕ್ ನಾಜ್, ಶಬ್ನಮ್ ಎಂಡಿ.
ಸ್ಟ್ಯಾಂಡ್‌ಬೈ ಪ್ಲೇಯರ್ಸ್: ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಭಾರತ U-19 ಮಹಿಳಾ ತಂಡ
ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಜಿ ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲಿ ಗಾಲಾ, ಹೃಷಿತಾ ಬಸು (ವಿಕೆಟ್ ಕೀಪರ್), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟೈಟಾಸ್ ಸಾಧು, ಫಲಕ್ ನಾಜ್, ಶಬ್ನಮ್ ಎಂಡಿ, ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.