ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ. ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮರಳಿದ ಅನುಭವಿ ಆಟಗಾರ

India squad announced for t20 series against South Africa and Test squad against england

ಜೂನ್ ತಿಂಗಳಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಹಾಗೂ ಇಂಗ್ಲೆಂಡ್‌ ವಿರುದ್ಧದ ಕಳೆದ ವರ್ಷದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಭಾರತ ತಂಡವನ್ನು ಇಂದು ಘೋಷಣೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ನಿರೀಕ್ಷೆಯಂತೆಯೇ ಕೆಲ ಯುವ ಆಟಗಾರರಿಗೆ ಅವಕಾಶಗಳು ದೊರೆತಿದ್ದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಘೂ ಜಸ್ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ತಂಡಕ್ಕೆ ಅನುಭವಿ ಚೇತೇಶ್ವರ್ ಪೂಜಾರ ಮತ್ತೆ ಅವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮಿಂಚಿರುವ ಕೆಲ ಯುವ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅವಕಾಶವನ್ನು ಪಡೆದುಕೊಂಡಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಈ ಆಟಗಾರರ ಪ್ರದರ್ಶನ ಬಹಳ ಮುಖ್ಯವಾಗಿದ್ದು ಈ ಸರಣಿ ಕುತೂಹಲ ಮೂಡಿಸಿದೆ.

MI vs DC: ಟಿಮ್ ಡೇವಿಡ್ ವಿರುದ್ಧ DRS ತೆಗೆದುಕೊಳ್ಳದಿರಲು ಕಾರಣ ತಿಳಿಸಿದ ರಿಷಭ್ ಪಂತ್MI vs DC: ಟಿಮ್ ಡೇವಿಡ್ ವಿರುದ್ಧ DRS ತೆಗೆದುಕೊಳ್ಳದಿರಲು ಕಾರಣ ತಿಳಿಸಿದ ರಿಷಭ್ ಪಂತ್

ಕೆಎಲ್ ರಾಹುಲ್‌ಗೆ ನಾಯಕನ ಪಟ್ಟ

ಕೆಎಲ್ ರಾಹುಲ್‌ಗೆ ನಾಯಕನ ಪಟ್ಟ

ದಕ್ಷಿಣ ಆಪ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಖಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆತಿದೆ. ಈ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಐಪಿಎಲ್‌ನಲ್ಲಿನಾಯಕನಾಗಿ ಮಿಂಚಿರುವ ಹಾರ್ದಿಕ್ ಪಾಂಡ್ಯಗೆ ಈ ಸರಣಿಯಲ್ಲಿ ನಾಯಕತ್ವ ನೀಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಕೆಎಲ್ ರಾಹುಲ್‌ಗೆ ಮಣೆ ಹಾಕಲಾಗಿದ್ದು ಉಪ ನಾಯಕತ್ವದ ಹೊಣೆಗಾರಿಕೆ ರಿಷಬ್ ಪಂತ್ ಹೆಗಲಿಗೆ ಬಿದ್ದಿದೆ. ಇನ್ನು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಸುದೀರ್ಘ ಕಾಲದ ಬಳಿಕ ಭಾರತ ಟಿ20 ಸ್ಕ್ವಾಡ್‌ಗೆ ಮರಳಿದ್ದಾರೆ. ಆವೇಶ್ ಖಾನ್ ಹಾಗೂ ಉಮ್ರಾನ್ ಮಲಿಕ್ ಕೂಡ ಈ ಸರಣಿಯಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಟೆಸ್ಟ್ ಸರಣಿಗೆ ಬಲಿಷ್ಠ ತಂಡ ಪ್ರಕಟ

ಟೆಸ್ಟ್ ಸರಣಿಗೆ ಬಲಿಷ್ಠ ತಂಡ ಪ್ರಕಟ

ಇನ್ನು ಕಳೆದ ವರ್ಷ ಕೊರೊನಾವೈರಸ್ ಕಾರಣದಿಂದಾಗಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಂತಿಮ ಪಂದ್ಯ ಮುಂದೂಡಿಕೆಯಾಗಿತ್ತು. ಈ ಪಂದ್ಯಕ್ಕೆ ಕೂಡ ಭಾರತ ತಂಡವನ್ನು ಘೋಷಣೆ ಮಾಡಲಾಗಿದೆ. ಪೂರ್ಣ ಸಾಮರ್ಥ್ಯದ ಭಾರತ ತಂಡಕ್ಕೆ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಮರಳಿದ್ದಾರೆ. ಆದರೆ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ನಿರಾಸೆಯಾಗಿದ್ದು ಈ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಟಿ20 ಸರಣಿಗೆ ಭಾರತ ಸ್ಕ್ವಾಡ್

ಟಿ20 ಸರಣಿಗೆ ಭಾರತ ಸ್ಕ್ವಾಡ್

ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

Rohit Sharma ಹೀಗೆ ಯಾವ IPLನಲ್ಲೂ ಆಡಿಲ್ಲ | #Cricket | Oneindia Kannada
ಟೆಸ್ಟ್ ಸ್ಕ್ವಾಡ್ ಹೀಗಿದೆ

ಟೆಸ್ಟ್ ಸ್ಕ್ವಾಡ್ ಹೀಗಿದೆ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ

Story first published: Sunday, May 22, 2022, 19:02 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X