ಭಾರತ-ಶ್ರೀಲಂಕಾ-ಬಾಂಗ್ಲಾ ತ್ರಿಕೋನ ಸರಣಿ ವೇಳಾಪಟ್ಟಿ

Posted By:
India, Sri Lanka, Bangladesh T20I Tri-nation series: Here's the full schedule of NIDAHAS Trophy 2018

ಬೆಂಗಳೂರು, ಜನವರಿ 18: ದಕ್ಷಿಣ ಆಫ್ರಿಕಾದಲ್ಲಿ ಫ್ರೀಡಂ ಸರಣಿ ಆಡುತ್ತಿರುವ ಟೀಂ ಇಂಡಿಯಾ, ಶ್ರೀಲಂಕಾದ ಫ್ರೀಡಂ ಸಂಭ್ರಮಾಚರಣೆಯ ಖುಷಿಯಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಲಿದೆ. ಶ್ರೀಲಂಕಾ 70ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯ ಅಂಗವಾಗಿ ಶ್ರೀಲಂಕಾ, ಭಾರತ ಹಾಗೂ ಬಾಂಗ್ಲಾದೇಶ ನಡುವೆ ತ್ರಿಕೋನ ಏಕದಿನ ಸರಣಿ ಕ್ರಿಕೆಟ್‌‌‌ ಟೂರ್ನಮೆಂಟ್ ನಿಗದಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಏಕದಿನ ಓವರ್ ಗಳ ಸರಣಿ, ಟಿ20 ಸರಣಿಯನ್ನು ಭಾರತ ಆಡಲಿದೆ. ನಂತರ, ಭಾರತದ ಕ್ರಿಕೆಟ್ ತಂಡವು ಶ್ರೀಲಂಕಾಕ್ಕೆ ತೆರಳಲಿದೆ. ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮಾರ್ಚ್ 6 ರಿಂದ ಮಾರ್ಚ್ 18 ರ ವರೆಗೆ ನಿಡಾಹಸ್ ಟ್ರೋಫಿ 2018 ಗಾಗಿ ಆಡಲಿವೆ.

ತ್ರಿಕೋನ ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಕೊಲಂಬೋದದ ಆರ್‌‌. ಪ್ರೇಮದಾಸ‌ ಮೈದಾನದಲ್ಲಿ ನಡೆಯಲಿದ್ದು, ಮಾರ್ಚ್‌‌‌ 18ರಂದು ಫೈನಲ್‌‌ ಪಂದ್ಯ ನಡೆಯಲಿದೆ.

ಭಾರತ-ಶ್ರೀಲಂಕಾ-ಬಾಂಗ್ಲಾ ತ್ರಿಕೋನ ಸರಣಿ ವೇಳಾಪಟ್ಟಿ :
ಮಾರ್ಚ್‌‌ 6 (ಮಂಗಳವಾರ): ಭಾರತ ವಿರುದ್ಧ ಶ್ರೀಲಂಕಾ.
ಮಾರ್ಚ್ 8 (ಗುರುವಾರ): ಭಾರತ ವಿರುದ್ಧ ಬಾಂಗ್ಲಾದೇಶ
ಮಾರ್ಚ್ 10 (ಶನಿವಾರ) : ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ
ಮಾರ್ಚ್‌‌ 12 (ಸೋಮವಾರ): ಭಾರತ ವಿರುದ್ಧ ಶ್ರೀಲಂಕಾ
ಮಾರ್ಚ್ 14 (ಬುಧವಾರ): ಭಾರತ ವಿರುದ್ಧ ಬಾಂಗ್ಲಾದೇಶ;
ಮಾರ್ಚ್ 16 (ಶುಕ್ರವಾರ) : ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ.
ಮಾರ್ಚ್ 18 (ಭಾನುವಾರ) : ಫೈನಲ್‌ ಪಂದ್ಯ ನಡೆಯಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, January 18, 2018, 23:56 [IST]
Other articles published on Jan 18, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ