ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್: ಆಂಗ್ಲರೆದುರು ದ್ವಿತೀಯ ಇನ್ನಿಂಗ್ಸ್ ನಲ್ಲೂ ಭಾರತ ಎಚ್ಚರಿಕೆಯ ಆಟ

By Mahesh
India v England, 3rd Test, Day 2 Live Updates: India look to gain further foothold

ನ್ಯಾಟಿಂಗ್ ಹ್ಯಾಮ್, ಆಗಸ್ಟ್ 19: ಪ್ರವಾಸಿ ಭಾರತ ಹಾಗೂ ಅತಿಥೇಯ ಇಂಗ್ಲೆಂಡ್ ನಡುವಿನ ನ್ಯಾಟಿಂಗ್ ಹ್ಯಾಮ್ (3ನೇ) ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ಭಾನುವಾರ ದಿನದಾಂತ್ಯಕ್ಕೆ 2 ವಿಕೆಟ್ ಕಳೆದು 124 ರನ್ ಪೇರಿಸಿದೆ. ಶಿಖರ್ ಧವನ್ 44, ಕೆಎಲ್ ರಾಹುಲ್ 36 ರನ್ ನೊಂದಿಗೆ ನಿರ್ಗಮಿಸಿದ್ದು, ಚೇತೇಶ್ವರ ಪೂಜಾರ (33) ಮತ್ತು ನಾಯಕ ವಿರಾಟ್ ಕೊಹ್ಲಿ (8) ಕ್ರೀಸ್ ನಲ್ಲಿದ್ದಾರೆ.

ಇಂಗ್ಲೆಂಡ್ ಇನ್ನಿಂಗ್ಸ್ : ಮೊದಲೆರಡು ಪಂದ್ಯದಲ್ಲಿನ ಸೋಲಿನ ಬಳಿಕ ಭಾರತ ಇಂಗ್ಲೆಂಡ್ ಎದುರು ಭರ್ಜರಿ ಆಟವಾಡುತ್ತಿದೆ. ಇಂಗ್ಲೆಂಡ್ ಮೊಲದ ಇನ್ನಿಂಗ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ ನೆರವಿನೊಂದಿಗೆ ಭಾರತ ಕೇವಲ 161 ರನ್ನಿಗೆ ಆಂಗ್ಲರ ಎಲ್ಲಾ ವಿಕೆಟ್ ಉರುಳಿಸಿತ್ತು.

1
42376

ಮೊದಲ ಇನ್ನಿಂಗ್ಸ್ ನಲ್ಲಿ 38.2 ಓವರ್ ಗೆ ಇಂಗ್ಲೆಂಡ್ ಎಲ್ಲ ವಿಕೆಟ್ ಕಳೆದು 161 ರನ್ ಪೇರಿಸುವ ಮೂಲಕ ಭಾರತದೆದುರು 168 ರನ್ ಹಿನ್ನಡೆ ಅನುಭವಿಸಿತ್ತು. ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಪಾಂಡ್ಯ ಕೇವಲ 28 ರನ್ನಿಗೆ 5 ವಿಕೆಟ್ ಕೆಡವಿದರು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 329 ರನ್ ಕಲೆ ಹಾಕಿತ್ತು.

ಉತ್ತಮ ಆರಂಭ ಪಡೆದ ಇಂಗ್ಲೆಂಡ್ ತಂಡವು ಭೋಜನ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 46 ರನ್ ಸ್ಕೋರ್ ಮಾಡಿತ್ತು. ಕುಕ್21, ಜೆನ್ನಿಂಗ್ಸ್ 20ರನ್ ಗಳಿಸಿ ಕ್ರೀಸ್ ನಲ್ಲಿದ್ದರು.

ಭಾರತದ ಮೊದಲ ಇನ್ನಿಂಗ್ಸ್ : 307 ಸ್ಕೋರಿನಿಂದ ಮುಂದುವರೆಸಿದ ಭಾರತ ಆರಂಭದಲ್ಲೇ ರಿಷಪ್ ಪಂತ್ ವಿಕೆಟ್ ಕಳೆದುಕೊಂಡಿತು. ಆಫ್ ಸ್ಟಂಪಿನಿಂದ ಹೊರಗೆ ಹೋಗುತ್ತಿದ್ದ ಚೆಂಡನ್ನು ಕೆಣಕಲು ಹೋಗಿ ಇನ್ ಸೈಡ್ ಎಡ್ಜ್ ಮಾಡಿಕೊಂಡು ಬ್ರಾಡ್ ಎಸೆತದಲ್ಲಿ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು.

ನಂತರ ಆರ್ ಅಶ್ವಿನ್ ಕೂಡಾ 14ರನ್ ಗಳಿಸಿ ಬ್ರಾಡ್ ಗೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ಶಮಿ , ಬೂಮ್ರಾ ವಿಕೆಟ್ ಗಳನ್ನು ಆಂಡರ್ಸನ್ ಸುಲಭವಾಗಿ ಗಳಿಸುವ ಮೂಲಕ ಭಾರತದ ಇನ್ನಿಂಗ್ಸ್ ಗೆ ಅಂತ್ಯ ಹಾಡಿದರು. 94.5 ಓವರ್ ಗಳಲ್ಲಿ 329ಕ್ಕೆ ಭಾರತ ಆಲೌಟ್ ಆಯಿತು.

ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ತಲಾ 3 ವಿಕೆಟ್ ಪಡೆದರೆ, ರಶೀದ್ ಅವರು 1 ವಿಕೆಟ್ ಗಳಿಸಿದರು.

ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ 87 ಓವರ್ ಗಳಲ್ಲಿ ಭಾರತ 307/6 ಸ್ಕೋರ್ ಮಾಡಿತ್ತು. ಮೊದಲ ವಿಕೆಟ್ ಗೆ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ 60ರನ್ ಕಲೆ ಹಾಕಿ ಉತ್ತಮ ಅಡಿಪಾಯ ತಂದರು. ನಂತರ ನಾಲ್ಕನೇ ವಿಕೆಟ್ ಗೆ ನಾಯಕ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಶತಕದ ಜೊತೆಯಾಟ ನಡೆಸಿ ಬಲ ತುಂಬಿದರು.

3ನೇ ಟೆಸ್ಟ್: ಕೊಹ್ಲಿ, ರಹಾನೆ ಆಸರೆ, ಭಾರತ 6 ವಿಕೆಟ್ ಕಳೆದು 307 ರನ್

ಲಾರ್ಡ್ಸ್ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಇಂಗ್ಲೆಂಡ್, ಈ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಕಳೆದ ಪಂದ್ಯದಲ್ಲಿ ಆಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ತಂಡಕ್ಕೆ ಮರಳಿದರೂ ಹೆಚ್ಚಿನ ಕೊಡುಗೆ ನೀಡಿಲ್ಲ.

ಟೀಂ ಇಂಡಿಯಾದಲ್ಲಿ ಚೈನಾ ಮನ್ ಕುಲದೀಪ್ ಯಾದವ್ ಬದಲಿಗೆ ಜಸ್ ಪ್ರೀತ್ ಬೂಮ್ರಾ ತಂಡ ಸೇರಿದ್ದಾರೆ. ಬರ್ಮಿಂಗ್ ಹ್ಯಾಮ್ ಹಾಗೂ ಲಾರ್ಡ್ಸ್ ನಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್ ತಂಡವು ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0ರಿಂದ ಮುಂದಿದೆ.

Story first published: Monday, August 20, 2018, 0:11 [IST]
Other articles published on Aug 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X