ಎರಡನೇ ಟಿ20ಐಯಲ್ಲಿ ಭಾರತಕ್ಕೆ ಸೋಲುಣಿಸಿದ ಆಸ್ಟ್ರೇಲಿಯಾ

Posted By:

ಗೌಹಾತಿ, ಅಕ್ಟೋಬರ್ 10: ಇಲ್ಲಿನ ಬರ್ಸಾಪರದ ಹೊಚ್ಚ ಹೊಸ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿರುವ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ಎರಡನೇ ಟಿ20ಐಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಕುಸಿತ ಕಂಡು118 ಸ್ಕೋರಿಗೆ ಆಲೌಟಾಯಿತು. 119ರನ್ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, 8 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ.

ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ಅಜೇಯ 48 ಹಾಗೂ ಮೊಯಿಸಿಸ್ ಹೆನ್ರಿಕ್ಯೂಸ್ ಅಜೇಯ 62ರನ್ ಚೆಚ್ಚಿ ಗೆಲುವಿನ ರೂವಾರಿಗಳಾದರು.

ಆಸ್ಟ್ರೇಲಿಯಾ ತಂಡ 15.3 ಓವರ್ ಗಳಲ್ಲಿ 122/2 ಸ್ಕೋರ್ ಮಾಡಿ ಪಂದ್ಯ ತನ್ನದಾಗಿಸಿಕೊಂಡಿತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿವೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ 40 ರನ್ ಆಗುವಷ್ಟರಲ್ಲೇ ಮೊದಲ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿದೆ.

India Vs Australia, 2nd T20I: David Warner wins toss, invites Virat Kohli to bat first

ರೋಹಿತ್ ಶರ್ಮ 8 ರನ್, ಶಿಖರ್ ಧವನ್ 2 , ವಿರಾಟ್ ಕೊಹ್ಲಿ 0, ಮನೀಶ್ ಪಾಂಡೆ 6 ರನ್ ಗಳಿಸಿ ಔಟಾದರು.ವೇಗಿ ಜಾಸನ್ ಬೆಹ್ರೆನ್ ಡೊರ್ಫ್ 4 ವಿಕೆಟ್ ಗಳನ್ನು ಗಳಿಸಿದ್ದು ವಿಶೇಷ. ಅಂತಿಮವಾಗಿ ಟೀಂ ಇಂಡಿಯಾ 118 ಸ್ಕೋರಿಗೆ ಸರ್ವಪತನಗೊಂಡಿತು.

ಸ್ಕೋರ್ ಕಾರ್ಡ್

ಆಡುವ XI:
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್ (ನಾಯಕ), ಅರೋನ್ ಫಿಂಚ್, ಗ್ಲೆನ್ ಮ್ಯಾಕ್ಸ್ ವೆಲ್, ಟ್ರಾವಿಸ್ ಹೆಡ್, ಮೊಯಿಸಿಸ್ ಹೆನ್ರಿಕ್ಯೂಸ್, ಮಾರ್ಕಸ್ ಸ್ಟೋಯಿನಿಸ್, ಟಿಮ್ ಪೇನ್ (ವಿಕೆಟ್ ಕೀಪರ್), ನಾಥನ್ ಕೌಲ್ಟರ್ ನೈಲ್, ಆಂಡ್ರ್ಯೂ ಟೈ, ಆಡಂ ಝಂಪಾ, ಜಾಸನ್ ಬೆಹ್ರೆನ್ಡ್ರೋಫ್.

ಭಾರತ: ರೋಹಿತ್ ಶರ್ಮ, ಶಿಖರ್ ಧವನ್,ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಕೇದಾರ್ ಜಾಧವ್, ಎಂಎಸ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್ ಪ್ರೀತ್ ಬೂಮ್ರಾ

Story first published: Tuesday, October 10, 2017, 19:52 [IST]
Other articles published on Oct 10, 2017
Please Wait while comments are loading...